ಮಡಿಕೇರಿ ಜೂ.18 NEWS DESK : ಕೇಂದ್ರ ಬುಡಕಟ್ಟು ವ್ಯವಹಾರಗಳ ಮಂತ್ರಾಲಯ, ನವದೆಹಲಿ ಅವರು ಧರ್ತಿ ಆಬ ಜನಜಾತೀಯ ಗ್ರಾಮ ಉತ್ಕರ್ಷ ಅಭಿಯಾನ ಮತ್ತು ಪಿಎಂ-ಜನಮನ್ ಯೋಜನೆಯಡಿ ಎವಾರ್‍ನೆಸ್ ಮತ್ತು ಬೆನಿಪಿಟ್ ಸ್ಯಾಚುರೇಷನ್ ಕ್ಯಾಂಪ್ಸ್ ಎಂಬ ಅಭಿಯಾನವನ್ನು ಜೂನ್, 30 ರವರೆಗೆ ಆಯೋಜಿಸಲು ತೀರ್ಮಾನಿಸಲಾಗಿದ್ದು, ಈ ಅಭಿಯಾನವು ಬುಡಕಟ್ಟು ಸಮುದಾಯದವರಿಗೆ ಡಿಎ-ಜೆಜಿಯುಎ ಯೋಜನೆ ಮತ್ತು ಪಿಎಂ-ಜನ್‍ಮನ್ ಯೋಜನೆಯ ಕುರಿತು ಸಮುದಾಯದವರಿಗೆ ಅರಿವು ಮೂಡಿಸಲು ಹಾಗೂ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆಗಳ ಪ್ರಯೋಜನ ಪಡೆಯಲು ಬೇಕಾಗುವ ದಾಖಲಾತಿಗಳನ್ನು ಒದಗಿಸಲು ಸಂಬಂಧಿಸಿದ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಿ ಗ್ರಾಮ ಮಟ್ಟದಲ್ಲಿ ಶಿಬಿರ ಆಯೋಜಿಸುವಂತೆ ತಿಳಿಸಿದ್ದಾರೆ. ನೀಡಬೇಕಾಗಿರುವ ಸೌಲಭ್ಯಗಳ ವಿವರ: ಆಧಾರ್ ಕಾರ್ಡ್, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ನಿವಾಸ ಪ್ರಮಾಣ ಪತ್ರ(ಡೊಮೆಸ್ಟಿಕ್ ಸರ್ಟಿಫಿಕೇಟ್), ಸಾಮಾಜಿಕ ಭದ್ರತಾ ಯೋಜನೆಗಳು-ವೃದ್ದಾಪ್ಯ ಪಿಂಚಣಿ, ವಿಧವಾ ಪಿಂಚಣಿ, ದಿವ್ಯಾಂಗ ಪಿಂಚಣಿ, ರೇಷನ್ ಕಾರ್ಡ್, ಆಯುಷ್ಮಾನ್ ಭಾರತ್ ಕಾರ್ಡ್(ಪಿಎಂ-ಜೆಎವೈ), ಸಿಕಲ್ ಸೆಲ್ ಅನೀಮಿಯಾ ಕುರಿತು ಜಾಗೃತಿ ಮೂಡಿಸುವುದು ಮತ್ತು ತಪಾಸಣೆ ಮಾಡುವುದು, ಲಸಿಕಾಕರಣ, ಮಿಷನ್ ಇಂದ್ರಧನುಷ್ ಮತ್ತು ಟಿ.ಬಿ.ಮುಕ್ತ ಭಾರತ, ಪಿಎಂ ಕಿಸಾನ್ ಕ್ರೆಡಿಟ್ ಕಾರ್ಡ್(ಕೆಸಿಸಿ), ಪಿಎಂ.ಕಿಸಾನ್, ಜನಧನ ಬ್ಯಾಂಕ್ ಖಾತೆ, ವಿಮಾ ಹಕ್ಕುಗಳು ಪಿಎಂ ವಿಶ್ವಕರ್ಮ, ಮುದ್ರಾ ಸಾಲಗಳು, ಮನರೇಗಾ ಜಾಬ್ ಕಾಡ್ರ್ಸ್, ಪಿಎಂ ಮಾತೃ ವಂದನ ಯೋಜನೆ, ಐಸಿಡಿಎಸ್ ಸೌಲಭ್ಯಗಳು, ಪೋಷಣ್ ಅಭಿಯಾನ. ಮಹರ್ಷಿ ವಾಲ್ಮೀಕಿ ಆದಿವಾಸಿ ಬುಡಕಟ್ಟು ವಸತಿ ಶಾಲೆಗಳಲ್ಲಿ ರಸ ಪ್ರಶ್ನೆ, ಚಿತ್ರಕಲೆ, ನೃತ್ಯ, ಪ್ರಬಂಧ ಸ್ಪರ್ಧೆ ಏರ್ಪಡಿಸುವುದು, ಪಿಎಂ.ವನ್‍ಧನ್ ಕಾರ್ಯಕ್ರಮ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖಾ ಕಾರ್ಯಕ್ರಮಗಳ ಬಗ್ಗೆ ಅರಿವು ಮೂಡಿಸುವುದು. ಈ ಸಂಬಂಧ ನೀಡಬೇಕಿರುವ ಎಲ್ಲಾ ದಾಖಲಾತಿಗಳನ್ನು ವಿತರಿಸಲು ಕಂದಾಯ ಇಲಾಖೆ, ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಕೃಷಿ ಇಲಾಖೆ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಆರೋಗ್ಯ ಇಲಾಖೆ, ಲೀಡ್ ಬ್ಯಾಂಕ್, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಕೌಶಲ್ಯ ಅಭಿವೃದ್ಧಿ ಇಲಾಖೆಗಳ ಜಿಲ್ಲಾ ಮಟ್ಟದ, ತಾಲ್ಲೂಕು ಮಟ್ಟದ ಹಾಗೂ ಗ್ರಾಮ ಮಟ್ಟದ ಅಧಿಕಾರಿಗಳು ಮತ್ತು ಸಿಬ್ಬಂದಿಗಳನ್ನು ಒಳಗೊಂಡಂತೆ ಪರಿಶಿಷ್ಟ ಪಂಗಡದ ಜನಾಂಗದವರಿಗೆ ಡಿಎ-ಜೆಜಿಯುಎ ಯೋಜನೆ ಮತ್ತು ಪಿಎಂ-ಜನ್‍ಮನ್ ಯೋಜನೆಯ ಕುರಿತು ಅರಿವು ಮೂಡಿಸಲು ಹಾಗೂ ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳ ಪ್ರಯೋಜನ ಪಡೆಯಲು ಅವಶ್ಯಕವಿರುವ ಎಲ್ಲಾ ದಾಖಲಾತಿ ಮಾಡಿಕೊಡುವಂತೆ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ಆದೇಶಿಸಿದ್ದಾರೆ.











