
ಕುಶಾಲನಗರ ಜೂ.25 NEWS DESK : ಕುಶಾಲನಗರ ರೋಟರಿ ನೂತನ ಅಧ್ಯಕ್ಷರಾಗಿ ಮನು ಪೆಮ್ಮಯ್ಯ ಆಯ್ಕೆಯಾಗಿದ್ದಾರೆ. ಕಾರ್ಯದರ್ಶಿಯಾಗಿ ಹೆಚ್.ಪಿ.ಮಂಜುನಾಥ ನೇಮಕಗೊಂಡಿದ್ದಾರೆ. ಕುಶಾಲನಗರ ರೋಟರಿ 50ನೇ ವರ್ಷಕ್ಕೆ ಕಾಲಿಡುತ್ತಿದ್ದು, ಕುಶಾಲನಗರ ರೈತ ಭವನದಲ್ಲಿ ಇಂದು (ಜೂ.25) ರಂದು ನಡೆಯುವ ಸಮಾರಂಭದಲ್ಲಿ ನೂತನ ಆಡಳಿತ ಮಂಡಳಿ ಪದಾಧಿಕಾರಿಗಳಿಗೆ ಜಿಲ್ಲಾ ಮಾಜಿ ರಾಜ್ಯಪಾಲರಾದ ರಂಗನಾಥ ಭಟ್ ಪ್ರತಿಜ್ಞಾವಿಧಿ ಬೋಧಿಸಲಿದ್ದಾರೆ.












