ನಾಪೋಕ್ಲು ಜೂ.26 NEWS DESK : ಶೌರ್ಯ ವಿಪತ್ತು ನಿರ್ವಹಣ ಘಟಕದಿಂದ ಅಜ್ಜಿಮುಟ್ಟದಲ್ಲಿರುವ ಸರಕಾರಿ ಪ್ರಾಥಮಿಕ ಶಾಲಾ ಮಕ್ಕಳಿಗೆ
ನೋಟ್ ಪುಸ್ತಕ ಹಾಗೂ ಪರಿಕರವನ್ನು ಕೊಡುಗೆಯಾಗಿ ನೀಡಲಾಯಿತು. ಈ ಸಂದರ್ಭ ಮುಖ್ಯ ಶಿಕ್ಷಕಿ ಪುಷ್ಪವತಿ, ನಾಪೋಕ್ಲು ಘಟಕದ ಶೌರ್ಯ ಮಾಸ್ಟರ್ ದಿವ್ಯ ಬಾಳೆಯಡ, ಸದಸ್ಯರಾದ ಶ್ಯಾಮಲಾ, ಚಂದ್ರಕಲಾ, ರಮ್ಯಾ, ಶಂಕರ, ಶರವಣ ಜೊತೆಗೆ ಶಾಲೆಯ ಶಾಲಾ ಅಭಿವೃದ್ಧಿ ಸಮಿತಿ ಸದಸ್ಯರು ಉಪಸ್ಥಿತರಿದ್ದರು.
ವರದಿ : ದುಗ್ಗಳ ಸದಾನಂದ.











