*ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದ ಚೀನಾದ ನೈಋತ್ಯ ಗುಯಿಝೌ ಪ್ರಾಂತ್ಯದಲ್ಲಿ ಭೂಕುಸಿತ ಉಂಟಾಗಿದೆ. ಭೂಕುಸಿತದ ಪರಿಣಾಮ ಹೆದ್ದಾರಿ ಸೇತುವೆ ಕುಸಿದು ಸಂಪರ್ಕ ಕಡಿತಗೊಂಡಿದೆ. ಮುರಿದ ಸೇತುವೆಯಲ್ಲಿ ಸರಕು ಸಾಗಣೆ ಟ್ರಕ್ ನೇತಾಡುತ್ತಿರುವ ದೃಶ್ಯ ಇದೀಗ ಎಲ್ಲೆಡೆ ವೈರಲ್ ಆಗಿದೆ. ಈ ಘಟನೆ ಜುನಿ ನಗರದ ಕ್ಸಿಯಾಮೆನ್-ಚೆಂಗ್ಡು ಎಕ್ಸ್‌ಪ್ರೆಸ್‌ವೇಯ ಭಾಗವಾಗಿರುವ ಸೇತುವೆಯಲ್ಲಿ ನಡೆದಿದೆ.*












