ಮಡಿಕೇರಿ NEWS DESK ಜು.4 : ಇತ್ತೀಚೆಗೆ ಬಸ್ ಹಾಗೂ ದ್ವಿಚಕ್ರ ವಾಹನದ ನಡುವೆ ಸಂಭವಿಸಿದ್ದ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಕಲ್ಲುಗುಂಡಿಯ ಯುವ ವೈದ್ಯ ಡಾ.ಶಮಂತ್ ಭಟ್ (25) ಚಿಕಿತ್ಸೆ ಫಲಿಸದೆ ನಿಧನ ಹೊಂದಿದ್ದಾರೆ. ಮೃತರು ತಂದೆ, ತಾಯಿ ಹಾಗೂ ಸಹೋದರಿಯನ್ನು ಅಗಲಿದ್ದಾರೆ. ವೈದ್ಯ ವೃತ್ತಿ ನಡೆಸುತ್ತಿದ್ದ ಡಾ.ಶಮಂತ್ ಭಟ್ ಅವರು ಕೆಲವು ದಿನಗಳ ಹಿಂದೆ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದಾಗ ಸುಳ್ಯ- ಬೆಳ್ಳಾರೆ ನಡುವಿನ ಸೋಣಂಗೇರಿ ಎಂಬಲ್ಲಿ ಅಪಘಾತ ಸಂಭವಿಸಿತ್ತು. ಗಂಭೀರವಾಗಿ ಗಾಯಗೊಂಡಿದ್ದ ಶಮಂತ್ ಅವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತಾದರೂ ಚೇತರಿಸಿಕೊಳ್ಳದೆ ಇಂದು ನಿಧನ ಹೊಂದಿದ್ದಾರೆ. ವೈದ್ಯ ವೃತ್ತಿಯಲ್ಲಿ ತೊಡಗಿರುವ ಡಾ.ಶಮಂತ್ ಭಟ್ ಅವರು ಕಲ್ಲುಗುಂಡಿಯ ಖ್ಯಾತ ವೈದ್ಯ ಡಾ.ಶ್ಯಾಂ ಪ್ರಸಾದ್ ಭಟ್ ಅವರ ಪುತ್ರ. ಯುವ ವೈದ್ಯನ ನಿಧನಕ್ಕೆ ಕಲ್ಲುಗುಂಡಿ, ಸಂಪಾಜೆ ಹಾಗೂ ಸುಳ್ಯ ಭಾಗದ ಜನ ಸಂತಾಪ ಸೂಚಿಸಿದ್ದಾರೆ.







