
ಮಡಿಕೇರಿ ಜು.7 NEWS DESK : ಇತ್ತೀಚೆಗೆ ಬೆನ್ನು ಮೂಳೆಯ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮಡಿಕೇರಿ ತಾಲ್ಲೂಕಿನ ಶೌರ್ಯ ವಿಪತ್ತು ಘಟಕದ ಸ್ವಯಂಸೇವಕರು, ತ್ಯಾಗರಾಜನಗರ ಒಕ್ಕೂಟದ ಅಧ್ಯಕ್ಷರು, ಪ್ರಸ್ತುತಿ ಸಂಘದ ಸದಸ್ಯರೂ ಆಗಿರುವ ಲೀಲಾ ಶೇಷಮ್ಮ ಅವರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ರೂ.30 ಸಾವಿರ ಆರ್ಥಿಕ ನೆರವನ್ನು ನೀಡಿದ್ದಾರೆ. ತಾಲ್ಲೂಕು ಯೋಜನಾಧಿಕಾರಿಗಳು ಮಂಜೂರಾತಿ ಪತ್ರವನ್ನು ಲೀಲಾ ಶೇಷಮ್ಮ ಅವರಿಗೆ ಸಲ್ಲಿಸಿದರು. ಈ ಸಂದರ್ಭ ಸಂಘದ ಸದಸ್ಯರು ಹಾಗೂ ಕುಟುಂಬದ ಸದಸ್ಯರು ಉಪಸ್ಥಿತರಿದ್ದರು.









