
ಮಡಿಕೇರಿ ಜು.8 NEWS DESK : ಕರ್ಣಂಗೇರಿ ಅಂಗನವಾಡಿ ಕೇಂದ್ರದ ವ್ಯಾಪ್ತಿಗೆ ಒಳಪಟ್ಟ ಎಲ್ಲಾ ಮಕ್ಕಳಿಗೆ ಅಂದತ್ವ ನಿವಾರಣೆ ಮತ್ತು ರೋಗನಿರೋಧಕ ಶಕ್ತಿ ಹೆಚ್ಚಳಕ್ಕಾಗಿ ವಿಟಮಿನ್ ಎ ದ್ರಾವಣವನ್ನು ಹಾಕಲಾಯಿತು. ಆರೋಗ್ಯ ಇಲಾಖೆಯ phco ದೇವಕಿ ಅವರು ವಿಟಮಿನ್ ಎ ದ್ರಾವಣ, ಅತಿಸಾರ ತಡೆಗಟ್ಟುವ ಮುನ್ನಚರಿಕಾ ಕ್ರಮದ ಬಗ್ಗೆ, ಜಿಂಕ್ ಮಾತ್ರೆ ಬಳಕೆ ಬಗ್ಗೆ ತಿಳಿಸಿದರು. ಓ ಆರ್ ಎಸ್ ಬಳಕೆ ಬಗ್ಗೆ ಪ್ರತ್ಯಕ್ಷತೆ ಮಾಡಿ ಅರಿವು ಮೂಡಿಸಿದರು. ಮೇಲ್ವಿಚಾರಕ ಪ್ರಭಾರ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮೇಪಾಡಂಡ ಸವಿತಾ ಕೀರ್ತನ್ ಮಾತನಾಡಿ, ಮಳೆಗಾಲದಲ್ಲಿ ಮಕ್ಕಳಿಗೆ ಬರುವಂತ ಕಾಯಿಲೆಗಳನ್ನು ತಡೆಗಟ್ಟಲು ಪೋಷಣಯುಕ್ತ ಆಹಾರದೊಂದಿಗೆ ಸ್ವಚ್ಛತೆಗೆ ಹೆಚ್ಚು ಗಮನಹರಿಸಲು ಮತ್ತು ಕುದಿಸಿ ಆರಿಸಿದ ನೀರನ್ನು ಬಳಸಲು ಸಲಹೆ ನೀಡಿದರು. ಕೈ ತೊಳೆಯುವ ವಿಧಾನಗಳ ಬಗ್ಗೆ ಅರಿವು ಮೂಡಿಸಿದರು. ತೂಕದ ಮಹತ್ವವನ್ನು ತಿಳಿಸಿ ಎಲ್ಲಾ ಮಕ್ಕಳ ತೂಕ ಎತ್ತರವನ್ನು ಪರಿಶೀಲಿಸಿ ಪ್ರತಿ ತಿಂಗಳು ಅಂಗನವಾಡಿ ಕೇಂದ್ರದಲ್ಲಿ ಮಕ್ಕಳ ಬೆಳವಣಿಗೆಯ ಮಟ್ಟವನ್ನು ಗುರುತಿಸಿಕೊಳ್ಳುವಂತೆ ತಿಳಿಸಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಪೋಷಣ್ ಸಂಯೋಜಕರು ಕಾವ್ಯ, ಅಂಗನವಾಡಿ ಕಾರ್ಯಕರ್ತೆ ಸರೋಜಾ, ಜಯಂತಿ, ಆಶಾ ಕಾರ್ಯಕರ್ತೆ ಅನಿತಾ ರೈ, ಸಹಾಯಕಿ ಮೀನ ಹಾಗೂ ಪೋಷಕರು ಹಾಜರಿದ್ದರು.








