
ಸೋಮವಾರಪೇಟೆ ಜು.9 NEWS DESK : ರಾತ್ರಿ ಸುರಿದ ಗಾಳಿ-ಮಳೆ ತಾಲ್ಲೂಕಿನ ಹಲವೆಡೆ ಮನೆಗಳಿಗೆ ಹಾನಿಯಾಗಿದೆ. ಸ್ಥಳಕ್ಕೆ ಕಂದಾಯ ಇಲಾಖಾಧಿಕಾರಿಗಳು ಹಾಗೂ ಗ್ರಾಮ ಪಂಚಾಯಿತಿ ಪಿಡಿಒಗಳು ಭೇಟಿ ನೀಡಿ ಮಾಹಿತಿ ಪಡೆದರು. ಸಮೀಪದ ನೇರುಗಳಲೆ ಗ್ರಾ.ಪಂ ವ್ಯಾಪ್ತಿಯ ತಣ್ಣೀರುಹಳ್ಳ ಗ್ರಾಮದ ಲಕ್ಷ್ಮೀ ಎಂಬವರ ವಾಸದ ಮನೆ ಗೋಡೆ ಕುಸಿದು ಭಾಗಶಃ ಹಾನಿಯಾಗಿದೆ. ಚೌಡ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅರೆಬೆಟ್ಟ ಗ್ರಾಮದ ಪ್ರಮೀಳ ಅವರ ಮನೆಯ ಸೋರುತ್ತಿದ್ದು, ತಾತ್ಕಾಲಿಕವಾಗಿ ಪಂಚಾಯಿತಿ ವತಿಯಿಂದ ಟಾರ್ಪಲನ್ನು ಪಂಚಾಯಿತಿ ಅಧ್ಯಕ್ಷೆ ಗೀತಾ, ಉಪಾಧ್ಯಕ್ಷ ನತೀಶ್ ಮಂದಣ್ಣ ವಿತರಿಸಿದರು. ಬೆಟ್ಟದಳ್ಳಿ ಗ್ರಾ ಪಂ. ವ್ಯಾಪ್ತಿಯ ಬೇಕನಳ್ಳಿ ಗ್ರಾಮದ ಮುತ್ತಣ್ಣ ಎಂಬವರ ಮನೆಯ ಗೋಡೆ ಕುಸಿದಿರುವ ಪರಣಾಮ ಪಿಡಿಒ ರವಿ ಅವರು ಟಾರ್ಪಲ್ ವಿತರಿಸಿದರು.








