
ಸೋಮವಾರಪೇಟೆ ಡಿ.9 NEWS DESK : ರೈತ ಹೋರಾಟ ಸಮಿತಿ ವತಿಯಿಂದ ಸಿ ಮತ್ತು ಡಿ ಜಾಗದ ವಿಚಾರದಲ್ಲಿನ ದೋಷ ಸರಿಪಡಿಸುವಂತೆ ಶಾಸಕ ಡಾ.ಮಂತರ್ ಗೌಡ ಸಮ್ಮುಖದಲ್ಲಿ ಕರ್ನಾಟಕ ಅಡ್ವಕೇಟ್ ಜನರಲ್ ಸಿ.ಕೆ.ಶಶಿಕಿರಣ್ ಶೆಟ್ಟಿ ಅವರಿಗೆ ಮನವಿ ಸಲ್ಲಿಸಲಾಯಿತು. ಬೆಂಗಳೂರಿನ ಹೈಕೋರ್ಟ್ ಕಚೇರಿಯಲ್ಲಿ ಮನವಿ ಸಲ್ಲಿಸಿದ ಶಾಸಕರು, ಸಿ ಆ್ಯಂಡ್ ಡಿ ಭೂಮಿಯ ಸಮಸ್ಯೆ ಬಗ್ಗೆ ವಿವರಿಸಿದರು. ಸಿ ಆ್ಯಂಡ್ ಡಿ ಭೂಮಿಯ ಬಗ್ಗೆ ಕೂಲಂಕುಶವಾಗಿ ಪರಿಶೀಲಿಸಿ, ಸರ್ಕಾರ ಗಮನಕ್ಕೆ ತರಲಾಗುವುದು ಎಂದು ಶಶಿಕಿರಣ್ ಶೆಟ್ಟಿ ಭರವಸೆ ನೀಡಿದರು. ಕೊಡಗಿನಲ್ಲಿರುವ ರೈತರ ಸಂಖ್ಯೆ ಮತ್ತು ಸಿ ಆ್ಯಂಡ್ ಡಿ ಭೂಮಿಯಲ್ಲಿ ಕೃಷಿ ಮಾಡುತ್ತಿರುವ ಕುಟುಂಬಗಳ ವಿವರವನ್ನು ಸೇರಿದಂತೆ ಕೆಲ ದಾಖಲಾತಿಗಳನ್ನು ನೀಡುವಂತೆ ಸಮಿತಿಯ ಪದಾಧಿಕಾರಿಗಳಿಗೆ ತಿಳಿಸಿದರು. ಹೋರಾಟ ಸಮಿತಿ ಅಧ್ಯಕ್ಷ ಚಕ್ರವರ್ತಿ ಸುರೇಶ್ ಮಾಹಿತಿ ನೀಡಿ, ಜಿಲ್ಲೆಯಲ್ಲಿರುವ ಸಿ ಆ್ಯಂಡ್ ಡಿ ಭೂಮಿಯನ್ನು ಸರ್ಕಾರ, ಅರಣ್ಯ ಮತ್ತು ಕಂದಾಯ ಇಲಾಖೆಯಿಂದ ಜಂಟಿ ಸರ್ವೆ ಮಾಡಿಸಿ, ರೈತರಿಗೆ ದಾಖಲಾತಿ ಮಾಡಿಸಿಕೊಟ್ಟರೆ ಕೊಡಗಿನಲ್ಲಿ 50 ರಿಂದ 60 ಸಾವಿರ ರೈತರಿಗೆ ಉಪಯೋಗವಾಗಲಿದೆ ಎಂದು ಹೇಳಿದರು. ಹೋರಾಟ ಸಮಿತಿಯ ಪ್ರಸಿ ಗೌಡಳ್ಳಿ, ದಿವಾಕರ್ ಕೂತಿ, ಮಿಥುನ್ ಹರಗ ಇದ್ದರು.








