ನಾಪೋಕ್ಲು ಜು.12 NEWS DESK : ನೆಲಜಿ ಗ್ರಾಮದ ಸಹಕಾರ ದವಸ ಭಂಡಾರದ (ನಂ.94ನೇ) ಮುಂದಿನ ಐದು ವರ್ಷಗಳ ಅವಧಿಗೆ ನೂತನ ಅಧ್ಯಕ್ಷರಾಗಿ ಬಾಳೆಯಡ ಪಿ.ರಾಜ ಕುಂಞಪ್ಪ ಆಯ್ಕೆಯಾಗಿದ್ದಾರೆ. ಸಂಘದ ಆಡಳಿತ ಮಂಡಳಿಯ ಪದಾಧಿಕಾರಿಗಳ ಚುನಾವಣೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ ಬದಂಜೆಟ್ಟಿರ ಬಿ.ದೇವಿ ದೇವಯ್ಯ, ಕಾರ್ಯದರ್ಶಿಯಾಗಿ ಮಾಳೆಯಂಡ ಸಿ.ಈರಪ್ಪ ಆಗಿದ್ದಾರೆ. ನಿರ್ದೇಶಕರುಗಳಾಗಿ ಅಪ್ಪುಮಣಿಯಂಡ ಎಂ.ನವೀನ ಉತ್ತಯ್ಯ, ಚೀಯಕಪೂವಂಡ ಎಂ.ತಮ್ಮನಿ ಅಪ್ಪಚ್ಚು, ಕೋಟೆರ ಎಂ.ಪ್ರಸಾದ್ ಜೋಯಪ್ಪ, ಚೀಯಕಪೂವಂಡ ಸುಜಾ ಪೆಮ್ಮಯ್ಯ, ಕೈಬುಲಿರ ಎಸ್. ಉಮೇಶ್ ಉತ್ತಪ್ಪ, ಮಡಿವಾಳರ ಬಿ.ಬೆಳ್ಳಿಯಪ್ಪ, ಕೈಬುಲಿರ ಜಿ.ಭಾರತಿ, ಚೀಯಕಪೂವಂಡ ಎ.ಚಂಪ ಸೀತವ್ವ ಆಯ್ಕೆಯಾಗಿದ್ದಾರೆ. ಸಂಘದ ಚುನಾವಣಾ ಅಧಿಕಾರಿಯಾಗಿ ಪ್ರದೀಪ್ ಕುಮಾರ್ ಕಾರ್ಯನಿರ್ವಹಿಸಿದರು.
ವರದಿ : ದುಗ್ಗಳ ಸದಾನಂದ.










