ವಿರಾಜಪೇಟೆ ಜು.12 NEWS DESK : ವಿರಾಜಪೇಟೆ ಕಾವೇರಿ ಶಾಲೆಯಲ್ಲಿ 2025-26ನೇ ಸಾಲಿನ ಶೈಕ್ಷಣಿಕ ವರ್ಷದ ಶಾಲಾ ಸಂಸತ್ತು ರಚನೆ ಮಾಡಲಾಯಿತು. ವಿದ್ಯಾರ್ಥಿಗಳಿಗೆ ಮತದಾನದ ಅರಿವು ಮೂಡಿಸುವ ಸಲುವಾಗಿ ಪದಾಧಿಕಾರಿಗಳ ಆಯ್ಕೆಯ ಪ್ರಕ್ರಿಯೆಗಾಗಿ ವಿದ್ಯಾರ್ಥಿಗಳು ಎಲೆಕ್ಟ್ರಾನಿಕ್ ವೋಟಿಂಗ್ ಮೆಷಿನ್ [ಇವಿಎಂ] ಮೂಲಕ ತಮ್ಮ ಮತವನ್ನು ಚಲಾಯಿಸಿದರು. ಚುನಾವಣೆಯ ಮತಗಟ್ಟೆ ಅಧಿಕಾರಿಯಾಗಿ ಮುಖ್ಯ ಶಿಕ್ಷಕಿ ಪಿ.ಯು.ಪಾರ್ವತಿ, ಸಹ ಅಧಿಕಾರಿಯಾಗಿ ಬಿ.ಪಿ.ಉಷಾ ಹಾಗೂ ಬಿ.ಡಿ.ಭಾಗ್ಯ ಕಾರ್ಯನಿರ್ವಹಿಸಿದ್ದರು. ಶಾಲಾ ಸಂಸತ್ತು ಚುನಾವಣೆಯಲ್ಲಿ ಶಾಲಾ ನಾಯಕನಾಗಿ ಕನ್ನಂಬಿರ ಜಿ.ಭೀಮಯ್ಯ, ಉಪ ನಾಯಕಿಯಾಗಿ ಬೋವ್ವೇರಿಯಂಡ ಹನ್ಸಿಕ ಪೊನ್ನಪ್ಪ, ಕ್ರೀಡಾ ನಾಯಕಿ ತನ್ಯ ರೈ ಬಿ.ಎಸ್, ಉಪ ನಾಯಕಿಯಾಗಿ ಕರ್ನಂದ ಎಸ್.ಕೃತಿಕಾ ಅಕ್ಕಮ್ಮಾ, ಸಾಂಸ್ಕೃತಿಕ ನಾಯಕಿಯಾಗಿ ಬೊಳ್ಳೆಪಂಡ ಬಿ.ದೀಪ್ತಿ ತಂಗಮ, ಉಪ ನಾಯಕಿಯಾಗಿ ಕುಲ್ಲಚಂಡ ಎಸ್.ಭೂಮಿಕಾ ಬೋಜಮ್ಮ, ಆರೋಗ್ಯ ನಾಯಕಿಯಾಗಿ ಪುಚ್ಚಿಮಂಡ ಯು.ತನಿಶ, ಉಪ ಆರೋಗ್ಯ ನಾಯಕಿಯಾಗಿ ರಾನೀಯ ಟಿ.ಎಫ್.ತಸ್ಲೀನ್, ಸನಾ ಕೆ.ಎಸ್, ಶಿಸ್ತಿನ ನಾಯಕಿಯಾಗಿ ಸುಹಾನಿ ರಾಜ್ ಪುರೋಹಿತ್, ಉಪ ಶಿಸ್ತಿನ ನಾಯಕಿಯಾಗಿ ಕೆ.ಹೆಚ್.ನಿಧಾ, ಅಂಕುರ್ ಹೌಸ್ ಕ್ಯಾಪ್ಟನ್ ಆಗಿ ಕುಟ್ಟನ ಎಂ.ಯಶ್ಮಿತ, ಉಪನಾಯಕರಾಗಿ ಮಾತಂಡ ಎಸ್ ಹಿಮಾಂಶು ಕಾರ್ಯಪ್ಪ , ಚೇಂದಿರ ಪಿ.ದೇವಯ್ಯ, ಆರೋಹಿ ಹೌಸ್ ಕ್ಯಾಪ್ಟನ್ ಎಸ್.ಎಂ.ಹನ ಫಲಕ್, ಉಪ ನಾಯಕನಾಗಿ ಮೆರಿಯಂಡ ಎಸ್ ಬಿಷನ್ ಬಿದ್ದಪ್ಪ, ಐಕ್ಯಂ ಹೌಸ್ ಕ್ಯಾಪ್ಟನ್ ಅಪ್ಪಂಡೆರಂಡ ಪಿ.ಶ್ರಾವ್ಯ ಮಾಚಮ್ಮ, ಉಪ ನಾಯಕಿಯಾಗಿ ಸಮೀಕ್ಷಾ ಹೆಚ್.ಎಸ್, ಅದ್ವೈತ್ ಹೌಸ್ ಕ್ಯಾಪ್ಟನ್ ಬಿ.ಎಸ್.ಸೃಷ್ಟಿ, ಉಪನಾಯಕ ವಿ.ಪಿ.ಯಶವಂತ್ ಆಯ್ಕೆಯಾಗಿರುತ್ತಾರೆ. ನಾಯಕರುಗಳಿಗೆ ಪದವಿ ಪ್ರಧಾನ ಮಾಡಿ ಮಾತನಾಡಿದ ಶಾಲೆಯ ಅಧ್ಯಕ್ಷ ಬಿ.ಎಸ್.ಸುದೇಶ್, ಲಭ್ಯವಾದ ಅವಕಾಶ ಕೇವಲ ಪದವಿ ಮಾತ್ರವಲ್ಲ, ಗೌರವದಿಂದ ಕೂಡಿದ ಜವಾಬ್ದಾರಿಯುತ ಸೇವೆಯಾಗಿದೆ. ಇದನ್ನು ಅರಿತು ಇತರರಿಗೆ ಮಾದರಿಯಾಗಬೇಕೆಂದರು. ಸಹ ಶಿಕ್ಷಕಿ ಭಾಗ್ಯ ಚುನಾಯಿತ ನಾಯಕರುಗಳಿಗೆ ಹಿತ ನುಡಿಗಳನ್ನಾಡಿದರು. ಕಾರ್ಯಕ್ರಮದಲ್ಲಿ ಕಾವೇರಿ ಶಾಲೆಯ ಆಡಳಿತ ಮಂಡಳಿಯ ಅಧ್ಯಕ್ಷ ಬಿ.ಎಸ್.ಸುದೇಶ್, ಕಾರ್ಯದರ್ಶಿ ಪಿ.ಎನ್.ವಿನೋದ್, ಮುಖ್ಯ ಶಿಕ್ಷಕಿ ಪಿ.ಯು.ಪಾರ್ವತಿ ಹಾಗೂ ಸಂಯೋಜಿಕಿ ಅಮೃತ ಅರ್ಜುನ್ ಉಪಸ್ಥಿತರಿದ್ದರು. ಸಹ ಶಿಕ್ಷಕಿ ಗಂಗಾ ಹಾಗೂ ಮಿಝ್ಭಾ ಕಾರ್ಯಕ್ರಮ ನಿರೂಪಿಸಿದರು. ಕಲ್ಪ ಸ್ವಾಗತಿಸಿದರು. ಸಹ ಶಿಕ್ಷಕಿ ತಮ್ಸೀನ ವಂದಿಸಿದರು.










