
ವಿರಾಜಪೇಟೆ ಜು.26 NEWS DESK : ಕಾರ್ಗಿಲ್ ಯುದ್ಧದಲ್ಲಿ ಭಾಗವಹಿಸಿದ ಯೋಧರ ಧೈರ್ಯ ಹಾಗೂ ತ್ಯಾಗವು ದೇಶದ ಪ್ರತಿಯೊಬ್ಬ ನಾಗರೀಕರಿಗೆ ಆದರ್ಶವಾಗಲಿ ಎಂದು ವಿರಾಜಪೇಟೆಯ ಕೊಡಗು ಮಾಜಿ ಸೈನಿಕರ ಸಂಘದ ಅಧ್ಯಕ್ಷ ಚಪ್ಪಂಡ ಹರೀಶ್ ಹೇಳಿದರು. ಕೊಡಗು ಮಾಜಿ ಸೈನಿಕರ ಸಂಘದ ವತಿಯಿಂದ ವಿರಾಜಪೇಟೆ ಪಟ್ಟಣದಲ್ಲಿನ ಹುತಾತ್ಮರ ಸ್ಮಾರಕದ ಬಳಿ ಕಾರ್ಗಿಲ್ ವಿಜಯ ದಿವಸದ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಹುತಾತ್ಮರ ಸ್ಮಾರಕ್ಕೆ ಪುಷ್ಪನಮನ ಸಲ್ಲಿಸಿ ಸೈನಿಕರ ತ್ಯಾಗ ಬಲಿದಾನದ ಕುರಿತು ಮಾತನಾಡಿದರು. ಈ ಸಂದರ್ಭ ತಾಲ್ಲೂಕು ಆಡಳಿತ ವತಿಯಿಂದ ತಹಶೀಲ್ದಾರ್ ಅನಂತ ಶಂಕರ ಅವರು ಹುತಾತ್ಮರ ಸ್ಮಾರಕಕ್ಕೆ ಪುಷ್ಪಗುಚ್ಚ ಅರ್ಪಿಸಿ ಗೌರವ ನಮನ ಸಲ್ಲಿಸಿದರು. ಬಳಿಕ ಪೋಲಿಸ್ ಇಲಾಖೆ ವತಿಯಿಂದ ವೃತ್ತ ನಿರೀಕ್ಷಕ ಅನೂಪ್ ಮಾದಪ್ಪ ನೇತೃತ್ವದಲ್ಲಿ, ಪುರಸಭೆ ವತಿಯಿಂದ, ಮಾಜಿ ಸೈನಿಕರ ಸಂಘದ ಅಧ್ಯಕ್ಷರ ನೇತೃತ್ವದಲ್ಲಿ ಹಾಗೂ ರೋಟರಿ ಶಾಲೆ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸೇರಿದಂತೆ ಹಲವಾರು ಸಂಘ ಸಂಸ್ಥೆಗಳ ವತಿಯಿಂದ ಹುತಾತ್ಮರ ಸ್ಮಾರಕಕ್ಕೆ ಪುಷ್ಪಗುಚ್ಚವನ್ನಿಟ್ಟು ನಮನ ಸಲ್ಲಿಸಲಾಯಿತು. ಕಾರ್ಯಕ್ರಮದಲ್ಲಿ ಗ್ರೇಡ್-2 ತಹಶೀಲ್ದಾರ್ ಪ್ರದೀಪ್ ಕುಮಾರ್, ಪುರಸಭೆಯ ಮುಖ್ಯಾಧಿಕಾರಿ ನಾಚಪ್ಪ ಪಟ್ಟಚೆರವಂಡ, ವಿರಾಜಪೇಟೆಯ ಇ.ಸಿ.ಎಚ್ ಕ್ಲಿನಿಕ್‍ನ ಲೆ.ಕರ್ನಲ್ ಲಕ್ಷ್ಮಿ ನಾರಾಯಣ, ಎಸ್.ಬಿ.ಐ ಶಾಖಾ ವ್ಯವಸ್ಥಾಪಕರು, ಮಾಜಿ ಸೈನಿಕರ ಸಂಘದ ಉಪಾಧ್ಯಕ್ಷ ಚಂದ್ರಶೇಕರ್, ಕಾರ್ಯದರ್ಶಿ ಅಪ್ಪಯ್ಯ, ಪುಗ್ಗೇರ ನಂದ, ಸಿ.ಎಸ್.ಡಿ ಕ್ಯಾಂಟಿನ್‍ನ ವ್ಯವಸ್ಥಾಪಕ ಡಾಲಿ, ಸಂಘಧ ಮಾಜಿ ಅಧ್ಯಕ್ಷ ಚೇಂದ್ರಿಮಾಡ ಕೆ. ನಂಜಪ್ಪ, ನಿರ್ದೇಶಕರಾದ ತೋರೇರ ಪೂವಯ್ಯ, ಪಟ್ರಪಂಡ ಎಂ. ಕರುಂಬಯ್ಯ, ಪಟ್ರಪಂಡ ಚಂಗಪ್ಪ, ಎಂ.ಕೆ. ಸಲಾಂ, ಕಬ್ಬಚ್ಚೀರ ಬೋಪಣ್ಣ, ಅಣ್ಣಳಮಾಡ ಸುಬ್ಬಯ್ಯ, ರೋಟರಿ ವಿದ್ಯಾಸಂಸ್ಥೆಯ ಮುಖ್ಯೋಪದ್ಯಾಯರಾದ ವಿಶಾಲಾಕ್ಷಿ ಹಾಗೂ ಶಿಕ್ಷಕ ವೃಂದ, ಪುರಸಭೆ ಸದಸ್ಯೆ ಜೂನಾ, ಸುಭಾಶ್, ಸೇರಿದಂತೆ ಸಿಬ್ಬಂದಿಗಳು, ಎಸ್ ಬಿ.ಐ. ಸಿಬ್ಬಂದಿಗಳು, ವಿರಾಜಪೇಟೆ ನಗರ ಠಾಣಾಧಿಕಾರಿ ಪ್ರಮೋದ್, ಗ್ರಾಮಂತರ ಠಾಣಾಧಿಕಾರಿ ಲತಾ, ಕೊಡಗು ಹೆಗ್ಗಡೆ ಸಮಾಜದ ಮಾಜಿ ಅಧ್ಯಕ್ಷ ಅಯ್ಯಪ್ಪ ಪಿ. ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಸೇರಿದಂತೆ ಸಾರ್ವಜನಿಕರು ಸಾಕಷ್ಟು ಸಂಖ್ಯೆಯಲ್ಲಿ ಇದ್ದರು.








