
ಮಡಿಕೇರಿ ಜು.28 NEWS DESK : ಹಣತೆ ಉರಿಸಿ, ಪುಪ್ಪಗಳನ್ನು ಅಪಿ೯ಸಿ, ದೇಶಭಕ್ತಿಯ ಹಾಡುಗಳೊಂದಿಗೆ ಯೋಧರು, ಹಾಗೂ ಭಾರತ ಮಾತೆಗೆ ಜೈಘೋಷಗಳ ಮೂಲಕ ವಿನೂತನ ರೀತಿಯಲ್ಲಿ ಕೊಡಗು ಪತ್ರಕತ೯ರ ಸಂಘ (ರಿ) ಮತ್ತು ರೋಟರಿ ಮಿಸ್ಟಿ ಹಿಲ್ಸ್ ವತಿಯಿಂದ ಕಾಗಿ೯ಲ್ ವಿಜಯ್ ದಿವಸ್ ಅಂಗವಾಗಿ ಯೋಧರಿಗೆ ಗೌರವ ನಮನ ಸಲ್ಲಿಸಲಾಯಿತು. ನಗರದ ಗೌಡ ಸಮಾಜದ ಸಭಾಂಗಣದಲ್ಲಿ ಆಯೋಜಿತ ಕಾಯ೯ಕ್ರಮದಲ್ಲಿ ಜಿಲ್ಲೆಯಾದ್ಯಂತಲಿನ 75 ಸಂಘ ಸಂಸ್ಥೆಗಳ ಪ್ರತಿನಿಧಿಗಳು ಪಾಲ್ಗೊಂಡು ಅಮರ್ ಜವಾನ್ ಸ್ಮಾರಕದ ಪ್ರತಿಕೖತಿಗೆ ಪುಪ್ಪಾಚ೯ನೆ ಮಾಡಿ, ಹಣತೆ ಬೆಳಗಿ ಯೋಧರಿಗೆ ಭಾವಪೂಣ೯ ಗೌರವ ನಮನ ಸಲ್ಲಿಸಿದರು. ಯೋಧರೆ ನಾವೆಂದೂ ಮರೆಯೋದಿಲ್ಲ ನಿಮ್ಮನ್ನು ಎಂಬ ಸಂದೇಶ ಸಾರುವ ಕಾಯ೯ಕ್ರಮವನ್ನು ಕಾಗಿ೯ಲ್ ಸಮರದಲ್ಲಿ ಹುತಾತ್ಮರಾದ ಪೆಮ್ಮಂಡ ಕಾವೇರಪ್ಪ ಅವರ ಪತ್ನಿ ಪೆಮ್ಮಂಡ ಶೋಭಾ ಕಾವೇರಪ್ಪ ದೀಪಬೆಳಗಿಸಿ ಉದ್ಘಾಟಿಸಿದರು. ರೋಟರಿ ಜಿಲ್ಲೆಯ ನಿಕಟಪೂವ೯ ಗವನ೯ರ್ , ಮಾಜಿ ನೌಕದಳದ ಅಧಿಕಾರಿ ವಿಕ್ರಂದತ್ತ, ಕೊಡಗು ಪತ್ರಕತ೯ರ ಸಂಘದ ಅಧ್ಯಕ್ಷ ಅನಿಲ್ ಹೆಚ್.ಟಿ. ಕಾಯ೯ದಶಿ೯ ಸುರೇಶ್ ಬಿಳಿಗೇರಿ, ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ರತ್ನಾಕರ್ ರೈ, ಕಾಯ೯ದಶಿ೯ ಬಿ.ಕೆ.ಕಾಯ೯ಪ್ಪ, ಮಾಜಿ ಸೈನಿಕರ ಸಂಘದ ಅಧ್ಯಕ್ಷ ಪಾನಿಕುಟ್ಟೀರ ಕುಟ್ಟಪ್ಪ ವೇದಿಕೆಯಲ್ಲಿದ್ದರು. ಈ ಸಂದಭ೯ ಮಾತನಾಡಿದ ವಿಕ್ರಂದತ್ತ, ಭಾರತದ ಇತಿಹಾಸದಲ್ಲಿಯೇ ಅತ್ಯಂತ ಕ್ಷಿಷ್ಟಕರ ಸನ್ನಿವೇಶದಲ್ಲಿ ಹೋರಾಟ ಮಾಡಿದ ಯುದ್ದವಾಗಿ ಕಾಗಿ೯ಲ್ ಸಮರ ದಾಖಲಾಗಿದೆ. ಆ ಯುದ್ದದಲ್ಲಿ ಭಾರತದ ಭೂಮಿಯ ಸಂರಕ್ಷಣೆಗಾಗಿ 527 ವೀರ ಯೋಧರು ಹುತಾತ್ಮರಾದರು. ಆ ಯೋಧರ ಬಲಿದಾನವನ್ನು ಈ ಕಾಯ೯ಕ್ರಮದ ಮೂಲಕ ಸ್ಮರಿಸಿಕೊಳ್ಳುತ್ತಿರುವುದು ಶ್ಲಾಘನೀಯ ಎಂದರು. ಪ್ರತೀ ದಿನವೂ ನಮ್ಮ ರಕ್ಷಣೆಗಾಗಿ ಶ್ರಮವಹಿಸುತ್ತಿರುವ ಯೋಧರನ್ನು ರಕ್ಷಿಸು ಎಂಬ ಪ್ರಾಥ೯ನೆಯನ್ನು ಎಲ್ಲರೂ ಪ್ರತೀ ದಿನ ಮನೆಗಳಲ್ಲಿ ಮಾಡುವಂತಾಗಬೇಕು. ಆ ಪ್ರಾಥ೯ನೆ ನಮ್ಮೆಲ್ಲರ ದಿನನಿತ್ಯದ ಕತ೯ವ್ಯದಂತಾಗಬೇಕೆಂದು ವಿಕ್ರಂದತ್ತ ಆಶಿಸಿದರು. ಕೊಡಗು ಪತ್ರಕತ೯ರ ಸಂಘದ ಅಧ್ಯಕ್ಷ ಅನಿಲ್ ಹೆಚ್.ಟಿ. ಮಾತನಾಡಿ, ಸೈನಿಕರ ನಾಡು ಎಂಬ ಹಿರಿಮೆಯ ಕೊಡಗು ಜಿಲ್ಲೆಯಲ್ಲಿನ ವಿವಿಧ ಸಂಘಸಂಸ್ಥೆಗಳು ಈ ರೀತಿಯಲ್ಲಿ ಯೋಧರಿಗೆ ಗೌರವ ಸಲ್ಲಿಸುವ ಮೂಲಕ ಯೋಧರಿಗೆ ಅಥ೯ಪೂಣ೯ ರೀತಿಯಲ್ಲಿ ತನ್ನ ಗೌರವ ಸಲ್ಲಿಸಿದೆ ಎಂದರು. ಯೋಧರ ಸ್ಮರಣೆಯಲ್ಲಿ ಆಯೋಜಿಸುವ ಯಾವುದೇ ಕಾಯ೯ಕ್ರಮಗಳು ಕೆಲವು ದಿನಗಳಲ್ಲಿ ಮರೆತುಹೋಗಬಹುದು. ಆದರೆ ದೇಶರಕ್ಷಣೆಯಲ್ಲಿ ತಮ್ಮ ಎಲ್ಲ ಸುಖಸಂತೋಷವನ್ನೇ ತ್ಯಾಗ ಮಾಡುವ ಯೋಧರನ್ನು ಮಾತ್ರ ನಾವಂದೂ ಮರೆಯಬಾರದು. ಹೀಗಾಗಿಯೇ ಕೊಡಗು ಪತ್ರಕತ೯ರ ಸಂಘ ಮತ್ತು ರೋಟರಿ ಮಿಸ್ಟಿ ಹಿಲ್ಸ್ ಸಂಸ್ಥೆಗಳು ಯೋಧ ಮೊದಲು, ದೇಶ ಮೊದಲು ಎಂಬ ಸಂದೇಶದೊಂದಿಗೆ ಈ ಕಾಯ೯ಕ್ರಮ ಆಯೋಜಿಸಿದೆ ಎಂದರು. ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ರತ್ನಾಕರ್ ರೈ ಮಾತನಾಡಿ, ಕಳೆದ ವಷ೯ದಿಂದ ರೋಟರಿ ಮಿಸ್ಟಿ ಹಿಲ್ಸ್ ದೀಪನಮನ ಕಾಯ೯ಕ್ರಮದ ಮೂಲಕ ಯೋಧರಿಗೆ ಗೌರವ ಸಲ್ಲಿಸುವಲ್ಲಿ ನಿರತವಾಗಿದ್ದು ಪ್ರತೀ ವಷ೯ವೂ ಕಾಯ೯ಕ್ರಮವನ್ನು ಯೋಧರಿಗಾಗಿ ಮೀಸಲಿಡುವುದಾಗಿ ಹೇಳಿದರು. ವೇದಿಕೆಯಲ್ಲಿದ್ದ ಅಮರ್ ಜವಾನ್ ಸ್ಮಾರಕದ ಪ್ರತಿಕೖತಿಗೆ 75 ಸಂಘಸಂಸ್ಥೆಗಳ ಪ್ರಮುಖರು ಸರದಿ ಸಾಲಿನಲ್ಲಿ ಬಂದು ಪುಪಾಚ೯ನೆ ಮಾಡಿ ಗೌರವ ಸೆಲ್ಯೂಟ್ ಮಾಡುವ ಮೂಲಕ ಭಾವಪೂಣ೯ ನಮನ ಸಲ್ಲಿಸಿದರು. ಕಾಯ೯ಕ್ರಮದ ಅಂತ್ಯದಲ್ಲಿ ನೂರಾರು ಮಂದಿ ಹಣತೆಗಳನ್ನು ಬೆಳಗಿ ಅಮರ್ ಜವಾನ್ ಸ್ಮಾರಕದ ಮುಂದೆ ಇಟ್ಟು ಕಾಗಿ೯ಲ್ ಹುತಾತ್ಮರಿಗೆ ಬೆಳಕಿನಾರತಿ ಮೂಲಕ ಶ್ರದ್ಧಾಂಜಲಿ ಅಪಿ೯ಸಿದರು. ಶ್ರೀರಾಮಾಂಜನೇಯ ಭಜನಾ ಮಂಡಳಿಯ ಕೆ.ಕೆ.ಮಹೇಶ್ ಕುಮಾರ್, ಗಾಯಕ ರವಿಭೂತನಕಾಡು ಯೋಧರು ಮತ್ತು ಭಾರತಕ್ಕೆ ಜೈಘೋಷಗಳನ್ನು ಮೊಳಗಿಸಿ, ದೇಶಭಕ್ತಿಗೀತೆ ಹಾಡಿದರು. ಮೈಸೂರಿನ ಪಾವನ ಇವೆಂಟ್ಸ್ ನ ಗಾಯಕ, ಗಾಯಕಿಯರಿಂದ ವಂದೇಮಾತರಂ, ಸಂದೇಶ್ ಆತೇಹೇ, ಮಿಲೆ ಸುರೇ ಮೇರ ತುಮಾರ…ಮೊದಲಾದ ಗೀತೆಗಳನ್ನು ಹಾಡಿದರು. ಪತ್ರಕತ೯ರಾದ ಜಿ.ಚಿದ್ವಿಲಾಸ್, ಸಂಧ್ಯಾ ಚಿದ್ವಿಲಾಸ್ ರಾಷ್ಟ್ರ ದೇವಗೆ.. ಪ್ರಾಣ ದೀವಿಗೆ.. ಸೇವೆಯಾಗಲಿ ನಾಡಿಗೆ ಎಂಬ ಹಾಡಿನ ಮೂಲಕ ಗಮನ ಸೆಳೆದರೆ, ಟಿ..ಕೆ.ಸುಧೀರ್ ಅವರು ಯಂಹಾ ಡಾಲ್ ಡಾಲ್ ಪರ್ ಎಂಬ ಹಾಡಿನ ಮೂಲಕ ಮೆಚ್ಚುಗೆ ಗಳಿಸಿದರು. ಕೊಡಗು ಪತ್ರಕತ೯ರ ಸಂಘದ ನಿದೇ೯ಶಕ ವಿನೋದ್ ಮೂಡಗದ್ದೆ ಮತ್ತು ಕುಡೆಕಲ್ ಸಂತೋಷ್ ಕಾಯ೯ಕ್ರಮ ನಿರೂಪಿಸಿದರು. ಕನಾ೯ಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಅಜ್ಜಿನಿಕಂಡ ಮಹೇಶ್ ನಾಚಯ್ಯ, ಅರೆಭಾಷೆ ಸಾಹಿತ್ಯ, ಸಂಸ್ಕೖತಿ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಾಜಿ ಹಾಜರಿದ್ದರು. ಕಾಗಿ೯ಲ್ ವಿಜಯ್ ದಿವಸ್ ಕಾಯ೯ಕ್ರಮಕ್ಕೆ ಕನ್ನಡ ಮತ್ತು ಸಂಸ್ಕೖತಿ ಇಲಾಖೆ, ಮಡಿಕೇರಿ ಗೌಡ ಸಮಾಜ, ಶಕ್ತಿ ಪ್ರತಿಷ್ಠಾನ, ಕೊಡಗು ಜಿಲ್ಲಾ ಔಷಧಿ ವ್ಯಾಪಾರಸ್ಥರ ಸಂಘ, ಭಾರತೀಯ ಮೆಡಿಕಲ್ ಅಸೋಸಿಯೇಷನ್ ಕೊಡಗು ಶಾಖೆ, ಕೊಡಗು ಪತ್ರಿಕಾಭವನ ಟ್ರಸ್ಟ್, ಮಡಿಕೇರಿ ರೋಟರಿ , ಮಡಿಕೇರಿ ಇನ್ನರ್ ವೀಲ್, ರೋಟರಿ ಮಡಿಕೇರಿ ವುಡ್ಸ್, ಕೇಶವಪ್ರಸಾದ್ ಮುಳಿಯ, ಕೆಡಿಸಿಸಿ ಬ್ಯಾಂಕು, ಮಡಿಕೇರಿಯ ಭಗವಾನ್ ಗ್ಲಾಸ್ ಅಂಡ್ ಫ್ಲೈ ವುಡ್ , ಅತ್ತೂರಿನ ಜ್ಞಾನಗಂಗ ರೆಸಿಡೆನ್ಶಿಯಲ್ ಸ್ಕೂಲ್, ಮಡಿಕೇರಿಯ ಅರುಣ್ ಸ್ಟೋರ್ಸ್, ಶಾಂತಿ ಸಾಗರ್ ರೆಸ್ಟೋರೆಂಟ್, ಸ್ವಾಗತ್ ಡೆಕೋರೇಟರ್ಸ್ ಸಂಸ್ಥೆಗಳು ಸಹಯೋಗ ನೀಡಿದ್ದವು. ವಿವಿಧ ಶಾಲಾ, ಕಾಲೇಜುಗಳ ಎನ್ ಸಿ ಸಿ ಕೆಡೆಟ್ ಗಳು, ಮಾಜಿ ಯೋಧರು, ವಿವಿಧ ಸಂಘಸಂಸ್ಥೆಗಳ ಪ್ರಮುಖರು ಕಾಯ೯ಕ್ರಮದಲ್ಲಿ ಪಾಲ್ಗೊಂಡಿದ್ದರು.
:: ಕಾಗಿ೯ಲ್ ವಿಜಯೋತ್ಸವ ಸಂದಭ೯ ಯೋಧರಿಗೆ ಗೌರವ ನಮನ ಸಲ್ಲಿಸಿದ ಸಂಘ ಸಂಸ್ಥೆಗಳು ::
ಅಖಿಲ ಕನಾ೯ಟಕ ಮಾಜಿ ಸೈನಿಕರ ಸಂಘ ಕೊಡಗು, ಮಾಜಿ ಸೈನಿಕರ ಸಂಘ ಮಡಿಕೇರಿ, , ವಕೀಲರ ಸಂಘ, ಮಡಿಕೇರಿ, ನಗರಾಭಿವೖದ್ದಿ ಪ್ರಾಧಿಕಾರ ಮಡಿಕೇರಿ, ಶ್ರೀ ಓಂಕಾರೇಶ್ವರ ದೇವಾಲಯ ವ್ಯವಸ್ಥಾಪನಾ ಸಮಿತಿ ಮಡಿಕೇರಿ , ಗೌಡ ಸಮಾಜ, ಮಡಿಕೇರಿ , ಕೊಡವ ಸಮಾಜ, ಮಡಿಕೇರಿ,ಬ್ರಾಹ್ಮಣ ವಿದ್ಯಾಭಿವೖದ್ದಿ ನಿಧಿ ಕೊಡಗು ಮಡಿಕೇರಿ, ಕೊಡಗು ಜಿಲ್ಲಾ ಚೇಂಬರ್ ಆಫ್ ಕಾಮಸ್೯ ಕೊಡಗು ಜಿಲ್ಲೆ , ಹೋಟೇಲ್ , ರೆಸಾಟ್೯ ಅಸೋಸಿಯೇಷನ್ ಕೊಡಗು,ಹೋಂಸ್ಟೇ ಅಸೋಸಿಯೇಷನ್, ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿ ಕೊಡಗು, ಎಸ್ ಡಿಪಿಐ ಕೊಡಗು,ಪೊಮ್ಮಕ್ಕಡ ಕೂಟ ಮಡಿಕೇರಿ,ಪೊಮ್ಮಕ್ಕಡ ಕೂಟ ವೀರಾಜಪೇಟೆ, ಲಯನ್ಸ್ ಕ್ಲಬ್ ಮಡಿಕೇರಿ,ರೋಟರಿ ಮಡಿಕೇರಿ ವುಡ್ಸ್ , ರೋಟರಿ ಮಡಿಕೇರಿ,ಇನ್ನರ್ ವೀಲ್ ಮಡಿಕೇರಿ,ರೆಡ್ ಕ್ರಾಸ್ ಕೊಡಗು ಘಟಕ , ಮಹದೇವಪೇಟೆ ಮಹಿಳಾ ಸಹಕಾರ ಸಂಘ ಮಡಿಕೇರಿ ಆರೋಹಣ ತಂಡ ಕೊಡಗು ಜಿಲ್ಲಾ ಕುಲಾಲ ಕುಂಬಾರ ಸಂಘ, ಕೊಡಗು,ಹಿಂದೂ ಮಲಯಾಳಿ ಸಮಾಜ ಕೊಡಗು ,,ಬಿಲ್ಲವ ಸಮಾಜ ಕೊಡಗು ,ಜಿಲ್ಲಾ ಬಂಟರ ಸಂಘ ಕೊಡಗು, ಜಿಲ್ಲಾ ಮೊಗೇರ ಸಮಾಜ ಕೊಡಗು,ಭಾರತೀಯ ಮೆಡಿಕಲ್ ಅಸೋಸಿಯೇಷನ್ ಕೊಡಗು ಶಾಖೆ,ಜಿಲ್ಲಾ ಔಷಧಿ ವ್ಯಾಪಾರಸ್ಥರ ಸಂಘ ಕೊಡಗು , ದಲಿತ ಸಂಘಷ೯ ಸಮಿತಿ. ಕೊಡಗು,ಬ್ಯಾರಿ ವೆಲ್ಪೇರ್ ಟ್ರಸ್ಟ್ ಮಡಿಕೇರಿ, ರೋಮನ್ ಕ್ಯಾಥೋಲಿಕ್ ಅಸೋಸಿಯೇಷನ್ ಕೊಡಗು,ವೀರಶೈವ ಸಮಾಜ, ಮಡಿಕೇರಿ ಜಿಲ್ಲಾ ಜಮಾ ಅತ್ , ಗೌಡ ಮಹಿಳಾ ಒಕ್ಕೂಟ ಚೇರಂಬಾಣೆ. ಸಮಥ೯ ಕನ್ನಡಿಗರು ಸಂಸ್ಥೆ, ಕೊಡಗು ಕನ್ನಡ ಸಿರಿ ಸ್ನೇಹಬಳಗ ಕುಶಾಲನಗರ,ಸಂಸ್ಕೖಸಿ ಸಿರಿ ಬಳಗ ಟ್ರಸ್ಟ್, ,ಗೌಡ ಸಮಾಜಗಳ ಒಕ್ಕೂಟ ಕೊಡಗು, ಕೊಡಗು ಮತ್ತು ದಕ್ಷಿಣ ಕನ್ನಡ ಗೌಡ ಮಹಿಳಾ ಸಂಘ ,ಫೋಟೋಗ್ರಾಫರ್ ಅಸೋಸಿಯೇಷನ್ ಕೊಡಗು,ಕೊಡಗು ವಿದ್ಯಾಲಯ ಮಡಿಕೇರಿ, ಜ್ಞಾನಗಂಗ ರೆಸಿಡೆನ್ಶಿಯಲ್ ಸ್ಕೂಲ್ ಅತ್ತೂರು. ಹಾರಂಗಿ, ಕೖಷಿ ಪತ್ತಿನ ಸಹಕಾರ ಸಂಘ ಮದೆ ,ಫೀಲ್ಡ್ ಮಾಷ೯ಲ್ ಕೆ.ಎಂ.ಕಾಯ೯ಪ್ಪ ಕಾಲೇಜು – ಮಡಿಕೇರಿ, ಜನರಲ್ ತಿಮ್ಮಯ್ಯ ಶಾಲೆ ಮಡಿಕೇರಿ, ಟ್ರಾವೆಲ್ ಅಸೋಸಿಯೇಷನ್ ಕೊಡಗು, ಪತ್ರಿಕಾ ಭವನ ಟ್ರಸ್ಟ್ ಕೊಡಗು, ಜಿಲ್ಲಾ ಮಹಿಳಾ ಬರಹಗಾರರ ಸಂಘ ಕೊಡಗು, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಕೊಡಗು ,ಲಾರಿ ಮಾಲೀಕರ ಮತ್ತು ಚಾಲಕರ ಸಂಘ ಮಡಿಕೇರಿ, ಕೊಡಗು,ಕೊಡಗು ಜಾನಪದ ಪರಿಷತ್ ಕೊಡಗು, ಕನ್ನಡ ಜಾನಪದ ಪರಿಷತ್ ಕೊಡಗು ,ಜ್ಞಾನದೀಪ ದೈವಜ್ಞ ಬ್ರಾಹ್ಮಣ ಮಹಿಳಾ ಸಂಘ, ಮಡಿಕೇರಿ , ಜೀಪು ಮಾಲೀಕರ ಮತ್ತು ಚಾಲಕರ ಸಂಘ ಕೊಡಗು, ಕೊಡಗು ಪೊಲೀಸ್ , ಮಡಿಕೇರಿ , ,ಸೇವಾ ಭಾರತಿ ಕೊಡಗು , ಶಕ್ತಿ ಪ್ರತಿಷ್ಟಾನ ಮಡಿಕೇರಿ, ಕನಾ೯ಟಕ ಅರೆಬಾಷೆ ಸಾಹಿತ್ಯ , ಸಂಸ್ಕೖತಿ ಅಕಾಡೆಮಿ ಕೊಡಗು, ಕನಾ೯ಟಕ ಕೊಡವ ಸಾಹಿತ್ಯ ಅಕಾಡೆಮಿ ಕೊಡಗು , ಸವೋ೯ದಯ ಸಮಿತಿ ಮಡಿಕೇರಿ , ಶ್ರೀ ರಾಜರಾಜೇಶ್ವರಿ ಭಜನಾ ಮಂಡಳಿ 2 ನೇ ಮೊಣ್ಣಂಗೇರಿ , ಎಸ್ ಎನ್ ಡಿ ಪಿ. ಯೂನಿಯನ್ ಕೊಡಗು , ಸವಿತಾ ಸಮಾಜ ಕೊಡಗು, ಸಕಾ೯ರಿ ನೌಕರರ ಸಂಘ ಕೊಡಗು, ಶ್ರೀ ಕೋದಂಡ ರಾಮ ರಾಮೋತ್ಸವ ಸಮಿತಿ ಮಡಿಕೇರಿ, ಗೌಡ ಯುವವೇದಿಕೆ ಕೊಡಗು ,ಗೌಡ ಮಾಜಿ ಸೈನಿಕರ ಸಂಘ ಕೊಡಗು ಗೌಡ ನಿವೖತ್ತ ನೌಕರರ ಸಂಘ, ಕೊಡಗು, ಗೌಡ ವಿದ್ಯಾ ಸಂಘ, ಕೊಡಗು,ಗೌಡ ಮಹಿಳಾ ಒಕ್ಕೂಟ. ಕೊಡಗು, ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಕೊಡಗು ಮಹಿಳಾ ಮತ್ತು ಮಕ್ಕಳ ಅಭಿವೖದ್ದಿ ಇಲಾಖೆ , ಕೊಡಗು ವಿಶ್ವಕಮ೯ ಸಮಾಜ, ಕೊಡಗು ಸ್ಕೌಟ್ ಮತ್ತು ಗೈಡ್ಸ್. ಮಡಿಕೇರಿ ತಾಲೂಕು ಭಾರತ್ ಸೇವಾ ದಳ ಕೊಡಗು,ಸ್ಕೌಟ್ ಮತ್ತು ಗೈಡ್ಸ್. ಮಡಿಕೇರಿ ತಾಲೂಕು, ಭಾರತ್ ಸೇವಾ ದಳ ಕೊಡಗು, ಕಲಾನಗರ ಸಾಂಸ್ಕೖತಿಕ ಕಲಾವೇದಿಕೆ. ಮಡಿಕೇರಿ, ಜನನಿ ಮಹಿಳಾ ಮಂಡಳಿ, ಮಡಿಕೇರಿ.









