
ಮಡಿಕೇರಿ ಆ.4 NEWS DESK : ನಮ್ಮ ಸ್ನೇಹಿತ, ದಂತಕಥೆ/ಇತಿಹಾಸ ಪುರುಷ ಜಾರ್ಖಂಡ್ ನಾಯಕ ಮತ್ತು ಜಾರ್ಖಂಡ್ ರಾಜ್ಯದ ಪಿತಾಮಹ ಶಿಬು ಸೊರೆನ್ ಅವರ ನಿಧನಕ್ಕೆ ಕೊಡವ ನ್ಯಾಷನಲ್ ಕೌನ್ಸಿಲ್ (ಸಿಎನ್‍ಸಿ) ಹೃದಯ ಸ್ಪರ್ಶಿ ಸಂತಾಪ ಮತ್ತು ಗೌರವಾಂಜಲಿ ಸಲ್ಲಿಸಿದೆ. ಪತ್ರಿಕಾ ಪ್ರಕಟಣೆ ನೀಡಿರುವ ಸಿಎನ್‍ಸಿ ಅಧ್ಯಕ್ಷ ಎನ್.ಯು.ನಾಚಪ್ಪ, ಶಿಬು ಸೊರೆನ್ ಅವರ ನಿಧನದಿಂದ ನಮಗೆ ತೀವ್ರ ದುಃಖವಾಗಿದೆ. ಕೊಡವ ಹೋರಾಟಕ್ಕೆ ಅವರು ನೀಡಿದ ಮಹತ್ವದ ಬೆಂಬಲವನ್ನು ನಾವು ಪ್ರೀತಿಯಿಂದ ಸ್ಮರಿಸುತ್ತೇವೆ. ನವೆಂಬರ್ 1998 ರಲ್ಲಿ ನವದೆಹಲಿಯಲ್ಲಿ ನಡೆದ ಬೃಹತ್ ಕೊಡವ ರ‍್ಯಾಲಿಯ ಸಂದರ್ಭದಲ್ಲಿ, ಅವರು ನಮ್ಮೊಂದಿಗೆ ರಾಮಲೀಲಾ ಮೈದಾನದಿಂದ ಪಾರ್ಲಿಮೆಂಟ್ ಬೀದಿವರೆಗೆ ಸುಮಾರು 4 ಕಿಲೋಮೀಟರ್ ನಡೆದು ನಮ್ಮ ಹೋರಾಟವನ್ನು ಬೆಂಬಲಿಸಿ ಸಭೆಯನ್ನುದ್ದೇಶಿಸಿ ಮಾತನಾಡಿದರು. ಮತ್ತೊಮ್ಮೆ, 2001 ರಲ್ಲಿ, ಮುಂಬೈನ ಜಸ್ಲೋಕ್ ಆಸ್ಪತ್ರೆಯಲ್ಲಿ ತಮ್ಮ ಅನಾರೋಗ್ಯ ಪೀಡಿತ ಪುತ್ರ ದುರ್ಗಾ ಸೊರೇನ್ ಅವರನ್ನು ನೋಡಿಕೊಳ್ಳುತ್ತಿದ್ದರೂ, ಅವರು ನಮ್ಮ ಆಹ್ವಾನವನ್ನು ಗೌರವಿಸಿ ಮಡಿಕೇರಿಯ ಗಾಂಧಿ ಮೈದಾನದಲ್ಲಿ ನಡೆದ ಕೊಡವ ನ್ಯಾಷನಲ್ ಡೇಯಲ್ಲಿ ಭಾಗವಹಿಸಿದರು. ಅವರು ನಮ್ಮೊಂದಿಗೆ ಸುಮಾರು 3 ಕಿಲೋಮೀಟರ್ ಮೆರವಣಿಗೆ ನಡೆಸಿ ಪ್ರಭಾವಶಾಲಿ ಭಾಷಣ ಮಾಡಿದರು. ಅವರು ಎನ್.ಯು. ನಾಚಪ್ಪ ಕೊಡವ ಅವರನ್ನು ಪ್ರೋತ್ಸಾಹಿಸಿದರು ಮತ್ತು ಪ್ರೇರೇಪಿಸಿದರು, “ನಿಮ್ಮ ದಾರಿಯಲ್ಲಿ ಯಾವುದೇ ಅಡೆತಡೆಗಳು ಬಂದರೂ, ಬಿಟ್ಟುಕೊಡಬೇಡಿ. ಪರಿಣಾಮಗಳನ್ನು ಎದುರಿಸಲು ಸಿದ್ಧರಾಗಿರಿ.” ಎಂದು ಸಲಹೆ ನೀಡಿದರು. ಅವರು ಸಂಸತ್ತಿನಲ್ಲಿ ಕೊಡವಲ್ಯಾಂಡ್ ವಿಷಯವನ್ನು ಎತ್ತಿದರು. ಅವರ ಅಗಲಿಕೆಯು ಜಾರ್ಖಂಡ್ ಜನರಿಗೆ ಮಾತ್ರವಲ್ಲದೆ ಕೊಡವ ಸಮುದಾಯಕ್ಕೆ ಮತ್ತು ಪ್ರಪಂಚದಾದ್ಯಂತ ಸ್ವಾತಂತ್ರ್ಯ ಮತ್ತು ಸ್ವ-ನಿರ್ಣಯದ ಎಲ್ಲಾ ಪ್ರತಿಪಾದಕರಿಗೂ ದೊಡ್ಡ ನಷ್ಟವಾಗಿದೆ. ಅವರ ಆತ್ಮಕ್ಕೆ ಚಿರಶಾಂತಿ ದೊರೆಯಲಿ ಸರ್ವಶಕ್ತ ಗುರು-ಕಾರೋಣ ಜಲ ದೇವತೆ ದಿವ್ಯ ಕಾವೇರಿ, ಮತ್ತು ಶಿಬು ಸೂರೇನರ ಸಂತಾಲ ಸಮುದಾಯದ ಪ್ರಧಾನ ದೇವತೆ, ದಿವ್ಯ ನದಿ ದಾಮೋದರ*, ಅವರ ಅಗಲಿದ ಕುಟುಂಬಕ್ಕೆ ಈ ಅಪಾರ ನಷ್ಟವನ್ನು ಭರಿಸಲು ಶಕ್ತಿಯನ್ನು ನೀಡಲಿ ಎಂದು ಸಿಎನ್‍ಸಿ ಹಾರೈಸುತ್ತದೆ.








