ಸೋಮವಾರಪೇಟೆ NEWS DESK ಆ.5 : ಇಂದು ಸಂಜೆ ಸುರಿದ ದಿಢೀರ್ ಮಳೆಗೆ ಸೋಮವಾರಪೇಟೆಯ ಅಲೆಕಟ್ಟೆ ರಸ್ತೆ ವ್ಯಾಪ್ತಿಯ ಮನೆಗಳು ಜಲಾವೃತಗೊಂಡು ನಷ್ಟ ಸಂಭವಿಸಿದೆ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಶೌರ್ಯ ತಂಡ ಮನೆಯವರ ನೆರವಿಗೆ ಧಾವಿಸಿ ನೀರು ತೆರವುಗೊಳಿಸಿತು. ಪಟ್ಟಣದ ಅಲೆಕಟ್ಟೆ ರಸ್ತೆಯ ಕೊಲ್ಲಿ ಮೂಲಕ ನೀರು ನುಗ್ಗಿ ನಿಂಗರಾಜು ಎಂಬುವವರ ಮನೆ ಜಲಾವೃತಗೊಂಡು ಹಲವು ವಸ್ತುಗಳು ಹಾನಿಗೊಂಡವು. ವಿಷಯ ಅರಿತ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಶೌರ್ಯ ತಂಡದ 10ಕ್ಕೂ ಹೆಚ್ಚು ಮಂದಿಯ ತಂಡ ಸ್ಥಳಕ್ಕಾಗಮಿಸಿ ನೀರು ಹೊರ ಹಾಕಿ ಮನೆ ಶುಚಿಗೊಳಿಸಲು ಶ್ರಮಿಸಿತು. ಕಂದಾಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.











