![]()
![]()
ವಿರಾಜಪೇಟೆ ಆ.12 NEWS DESK : ಬಾಳುಗೋಡು ಏಕಲವ್ಯ ಮಾದರಿ ವಸತಿ ಶಾಲೆಯ ವಿದ್ಯಾರ್ಥಿಗಳು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿ ಮಾಡಿ ರಕ್ಷಾಬಂಧನವನ್ನು ಆಚರಿಸಿದರು. ರಾಷ್ಟ್ರೀಯ ಬುಡಕಟ್ಟು ವಿದ್ಯಾರ್ಥಿಗಳ ಶೈಕ್ಷಣಿಕ ಸಿಂಧು ಸಂಸ್ಥೆಯಿಂದ ನವದೆಹಲಿಯಲ್ಲಿ ಆಯೋಜಿಸಿದ್ದ ರಾಷ್ಟ್ರ ಅಧ್ಯಕ್ಷರ ರಕ್ಷಾಬಂಧನ ಕಾರ್ಯಕ್ರಮಕ್ಕೆ ರಾಜ್ಯದಿಂದ ರಾಯಚೂರು, ಬೆಳಗಾವಿ, ಕೋಲಾರ ಹಾಗೂ ಕೊಡಗು ಜಿಲ್ಲೆಗಳ ಬುಡಕಟ್ಟು ಸಮುದಾಯದ ವಸತಿ ಶಾಲೆಗಳಿಗೆ ಅವಕಾಶ ಕಲ್ಪಿಸಲಾಗಿತ್ತು. ರಾಷ್ಟ್ರ ಅಧ್ಯಕ್ಷರಾದ ದ್ರೌಪದಿ ಮುರ್ಮು ಅವರು ಪ್ರತಿ ವರ್ಷ ವಿವಿಧ ವಲಯಗಳಲ್ಲಿ ಸೇವೆ ಸಲ್ಲಿಸುತ್ತಿರುವವರೊಂದಿಗೆ ರಕ್ಷಾಬಂಧನ ಕಾರ್ಯಕ್ರಮವನ್ನು ಆಚರಿಸುವುದು ವೈಶಿಷ್ಟ್ಯವಾಗಿದ್ದು, ಅದರಂತೆ ಈ ವರ್ಷ ಬುಡಕಟ್ಟು ಸಮುದಾಯದ ವಿದ್ಯಾರ್ಥಿಗಳೊಂದಿಗೆ ರಕ್ಷಾಬಂಧನ ಕಾರ್ಯಕ್ರಮ ಆಚರಿಸುವ ಆಶಯ ಹೊಂದಿದ್ದರಿಂದ ಅವರ ಕರೆಯ ಮೇರೆಗೆ ಬಾಳುಗೋಡು ಏಕಲವ್ಯ ಮಾದರಿ ವಸತಿ ಶಾಲೆಯ ಸಂಗೀತ ಶಿಕ್ಷಕಿ ಕುಮಾರಿ ಕೋಮಲ್ ಗುಪ್ತ ನೇತೃತ್ವದಲ್ಲಿ ವಿದ್ಯಾರ್ಥಿಗಳಾದ ಆರನೇ ತರಗತಿಯ ಎಲ್.ಎಂ.ಪ್ರತಿಕ್ಷ, 7ನೇ ತರಗತಿಯ ಸಿ.ಎಲ್.ಕನ್ನಿಕಾ, 8ನೇ ತರಗತಿಯ ತನ್ವಿ ತಂಗಮ್ಮ, 9ನೇ ತರಗತಿಯ ಹೆಚ್.ಕೆ.ನೇಹಾ ಮತ್ತು 10ನೇ ತರಗತಿಯ ಕೆ.ಎಂ.ಪ್ರಕೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಂಭ್ರಮಿಸಿದರು. ಬಳಿಕ ರಾಷ್ಟ್ರಾಧ್ಯಕ್ಷರು, ವಿದ್ಯಾರ್ಥಿಗಳು ಮತ್ತು ಶಿಕ್ಷಕರೊಂದಿಗೆ ಶಾಲೆಯ ಶಿಕ್ಷಣದ ವಿಧಾನ, ಶೈಲಿ, ಪ್ರಗತಿ, ಮೂಲ ಸೌಕರ್ಯ ಹಾಗೂ ಅಗತ್ಯತೆಗಳ ಕುರಿತು ಚರ್ಚಿಸಿದರು. ವಿದ್ಯಾರ್ಥಿಗಳು ಈ ಹಂತದಲ್ಲಿ ರಾಷ್ಟ್ರ ಅಧ್ಯಕ್ಷರನ್ನು ಭೇಟಿ ಮಾಡಿ ಬಂದಿರುವುದು ಪೋಷಕರು ಹಾಗೂ ಶಿಕ್ಷಕರಲ್ಲಿ ಸಂತಸ ಮೂಡಿಸಿದ್ದು, ರಕ್ಷಾಬಂಧನವನ್ನು ಆಚರಿಸುವ ಸುವರ್ಣ ಅವಕಾಶ ದೊರಕಿ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಅವಕಾಶ ಕಲ್ಪಿಸಿಕೊಟ್ಟ ರಾಷ್ಟ್ರೀಯ ಬುಡಕಟ್ಟು ವಿದ್ಯಾರ್ಥಿಗಳ ಶೈಕ್ಷಣಿಕ ಸಿಂಧು ಸಂಸ್ಥೆಗೆ ಶ್ಲಾಘನೆ ವ್ಯಕ್ತವಾಗಿದೆ.
![]()
![]()
![]()
![]()
*ರಾಷ್ಟ್ರಪತಿ ದ್ರೌಪದಿ ಮುರ್ಮು ಅವರೊಂದಿಗೆ ರಕ್ಷಾ ಬಂಧನ ಆಚರಿಸಿದ ಬಾಳುಗೋಡು ಏಕಲವ್ಯ ಶಾಲಾ ವಿದ್ಯಾರ್ಥಿಗಳು*
1 Min Read










