
ಕೂಡಿಗೆ ಆ.20 NEWS DESK : ಒಳ ಮೀಸಲಾತಿ ವರ್ಗಿಕರಣಕ್ಕೆ ಸಂಬಂಧಿಸಿದ ನ್ಯಾಯಮೂರ್ತಿ ಹೆಚ್.ಎನ್.ನಾಗಮೋಹನ್ ದಾಸ್ ಆಯೋಗದ ಪರಿಶಿಷ್ಟ ಜಾತಿ ಒಳ ಮೀಸಲಾತಿ ವರ್ಗೀಕರಣ ಮಾಡುವಂತೆ ಒತ್ತಾಯಿಸಿ ಜಿಲ್ಲಾ ಬಾಬು ಜಗಜೀವನ್ ರಾಮ್ ಒಕ್ಕೂಟದ ವತಿಯಿಂದ ಕೊಡಗು ಉಸ್ತುವಾರಿ ಸಚಿವರಾದ ಭೋಸ್ ರಾಜ್ ಅವರಿಗೆ ಮನವಿ ಸಲ್ಲಿಸಲಾಯಿತು. ಶಾಸಕ ಡಾ.ಮಂತರ್ ಗೌಡ ಅವರ ನೇತೃತ್ವದಲ್ಲಿ ಮನವಿ ಸಲ್ಲಿಸಿದ ಪ್ರಮುಖರು ಬೇಡಿಕೆಗಳ ಈಡೇರಿಕೆಗೆ ಮನವಿ ಮಾಡಿದರು. ಈ ಸಂದರ್ಭದ ಒಕ್ಕೂಟದ ಪ್ರಮುಖರಾದ ಹೆಚ್.ಕೆ.ಶಿವಶಂಕರ್, ಹೆಚ್.ಎಸ್.ದಾಸ್, ಜಗದೀಶ್, ಬೇಲೂರಯ್ಯ, ರಂಗನಾಥ್, ದಾಮೋದರ, ಗಿರೀಶ್, ಚಿರಂಜೀವಿ, ಕೀರ್ತಿ, ಸಂಜು ಆನಿ ಇತರರು ಹಾಜರಿದ್ದರು.








