ಗೋಣಿಕೊಪ್ಪ ಆ.21 NEWS DESK : ಶ್ರೀ ಕಾವೇರಿ ದಸರಾ ಸಮಿತಿಯ 47ನೇ ದಸರಾ ಜನೋತ್ಸವದ ಅಧ್ಯಕ್ಷರಾಗಿ ಗ್ರಾ.ಪಂ ಸದಸ್ಯ ಕೆ.ಜಿ.ರಾಮಕೃಷ್ಣ ಆಯ್ಕೆಯಾಗಿದ್ದಾರೆ. ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಸರ್ವ ಸದಸ್ಯರ ಒಮ್ಮತ ಈ ಆಯ್ಕೆ ನಡೆದಿದೆ. ಈ ಸಂದರ್ಭ ಮಾತನಾಡಿದ ನೂತನ ಅಧ್ಯಕ್ಷರು ಜನೋತ್ಸವವನ್ನು ವಿಭಿನ್ನವಾಗಿ ಆಚರಿಸಲು ಸರ್ವರ ಸಹಕಾರದೊಂದಿಗೆ ಮುಂದುವರೆಯುವುದಾಗಿ ತಿಳಿಸಿದ್ದಾರೆ. ಆಯ್ಕೆಯ ಸಂದರ್ಭ ಗ್ರಾ.ಪಂ. ಅಧ್ಯಕ್ಷ ಪ್ರಮೊದ್ ಗಣಪತಿ, ಉಪಾಧ್ಯಕ್ಷೆ ಮಂಜುಳ, ಪಿ.ಡಿ.ಓ ತಿಮ್ಮಯ್ಯ ಹಾಗೂ ಸದಸ್ಯರುಗಳು ಹಾಜರಿದ್ದರು.










