
ಸಿದ್ದಾಪುರ ಆ.25 NEWS DESK : ಪಾಲಿಬೆಟ್ಟ ವರ್ತಕರ ಸಂಘದ ನೂತನ ಅಧ್ಯಕ್ಷರಾಗಿ ಎಂ.ಯು.ಮುನೀರ್ ಅವಿರೋಧವಾಗಿ ಆಯ್ಕೆ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರುಗಳಾಗಿ ಟಿ.ಜಿ.ವಿಜೇಶ್, ಮೈಕಲ್, ಪ್ರಧಾನ ಕಾರ್ಯದರ್ಶಿ ಎಂ.ಹೆಚ್.ಸಮೀರ್, ಕಾರ್ಯದರ್ಶಿಗಳಾಗಿ ಸಿ.ಎ.ಫೈಝಲ್ ಹಾಗೂ ಅಯ್ಯಪ್ಪ, ಖಜಾಂಚಿಯಾಗಿ ಕೆ.ಹೆಚ್ ಅಬೂಬಕ್ಕರ್, ಸಲಹೆಗಾರರಾಗಿ ಪುತ್ತಂ ಪ್ರದೀಪ್, ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ಎ.ಎಲ್.ರವಿಕುಮಾರ್ ಅನಿಲ್, ಜಕ್ರಿಯ, ಹರೀಶ್, ರಶೀದ್, ಫೈಝಲ್ ರೆಹಮಾನ್, ಶೈಲಾ, ಮುಬಾರಕ್, ನಳಿನಿ, ನಸೀಫ್, ಲೋಕೇಶ್, ಮೂರ್ತಿ ಸೇರಿದಂತೆ ಮತ್ತಿತರರು ಆಯ್ಕೆಯಾದರು. ಸಭೆಯಲ್ಲಿ ನೂತನ ಅಧ್ಯಕ್ಷ ಮುನೀರ್ ಮಾತನಾಡಿ ಸೌಹಾರ್ದತೆಗೆ ಹೆಸರುವಾಸಿಯಾಗಿರುವ ಪಾಲಿಬೆಟ್ಟ ಗ್ರಾಮದಲ್ಲಿ ಎಲ್ಲಾ ವರ್ತಕರು ಒಗ್ಗೂಡಿ ನೂತನ ಸಂಘವನ್ನು ಅಸ್ತಿತ್ವಕ್ಕೆ ತರಲಾಗಿದ್ದು, ಎಲ್ಲಾ ವರ್ತಕರು ಸಂಘದೊಂದಿಗೆ ಕೈಜೋಡಿಸುವ ಮೂಲಕ
ಸಂಘದ ಸದಸ್ಯರುಗಳ, ವಿದ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗೆ, ಆರೋಗ್ಯ, ಸಂಕಷ್ಟದಲ್ಲಿರುವವರಿಗೆ ಆರ್ಥಿಕ ಸಹಾಯ ಸೇರಿದಂತೆ ಹಲವಾರು ಕಾರ್ಯ ಯೋಜನೆಗಳನ್ನು ರೂಪಿಸಲಾಗಿದ್ದು, ಎಲ್ಲಾ ವರ್ತಕರು ಸಂಘದೊಂದಿಗೆ ಕೈಜೋಡಿಸುವುದರ ಮೂಲಕ ಸಹಕಾರ ನೀಡಬೇಕೆಂದರು. ಈ ಸಂದರ್ಭ ಹಿರಿಯ ವರ್ತಕರು ಸಭೆಯಲ್ಲಿ ಹಾಜರಿದ್ದರು.










