
ಮಡಿಕೇರಿ ಆ.26 NEWS DESK : ವಿ.ಬಾಡಗ ಪಂಚಾಯಿತಿ ವ್ಯಾಪ್ತಿಯಲ್ಲಿ ನಿರ್ಮಾಣಗೊಳ್ಳುತ್ತಿರುವ ವಿವಿಧ ಕ್ರೀಡೆಗಳ ತರಬೇತಿ ಕೇಂದ್ರದ ಕಾಮಗಾರಿ ಸ್ಥಳವನ್ನು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಪರಿಶೀಲಿಸಿ, ರೂಪುರೇಷೆಗಳ ಬಗ್ಗೆ ಚರ್ಚಿಸಿದರು. ಸ್ಥಳೀಯ ಕ್ರೀಡಾ ಪ್ರತಿಭೆಗಳ ಅನುಕೂಲಕ್ಕೆಂದು ಕಾಮಗಾರಿಯನ್ನು ಕೈಗೊಂಡಿದ್ದು, ಗುಣಮಟ್ಟದ ಕ್ರೀಡಾಂಗಣ ಅತಿ ಶೀಘ್ರದಲ್ಲಿ ಲಭ್ಯವಾಗುವಂತಾಗಲಿ ಎಂದು ಹಾರೈಸಿದರು. ಈ ಸಂದರ್ಭ ಜಿಲ್ಲಾಧಿಕಾರಿ ವೆಂಕಟ್ ರಾಜ್, ವಿರಾಜಪೇಟೆ ಹಾಗೂ ಪೊನಂಪೇಟೆ ತಹಶೀಲ್ದಾರ್ ಗಳು, ಕಂದಾಯ ಇಲಾಖೆಯ ಅಧಿಕಾರಿಗಳು, ಅರಣ್ಯ ಇಲಾಖೆಯ ಅಧಿಕಾರಿಗಳು, ಪಕ್ಷದ ಪ್ರಮುಖರಾದ ಕಂಜಿತಂಡ ಪೂವಣ್ಣ, ಗಿಣಿ ಮೊಣ್ಣಪ್ಪ, ಕೊಂಗಂಡ ಕಾಶಿ ಕಾರ್ಯಪ್ಪ, ಗಿರೀಶ್ ಮುದ್ದಯ್ಯ, ದವನ್ ದೇವಯ್ಯ, ಪ್ರಕಾಶ್ ಪೂವಯ್ಯ,ಕುಂದಚೀರ ಮಂಜು ದೇವಯ್ಯ, ಅಯೂಬ್, ಮೊದಲಾದವರು ಉಪಸ್ಥಿತರಿದ್ದರು.









