
ಮಾದಾಪುರ NEWS DESK ಆ.27 : ಮಳೆಹಾನಿ ಸಂತ್ರಸ್ತರೊಂದಿಗೆ ಗಣೇಶ ಚತುರ್ಥಿ ಆಚರಿಸಿದ ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಅವರು ಹಬ್ಬವನ್ನು ಅರ್ಥಪೂರ್ಣಗೊಳಿಸಿದರು. ಗಣೇಶ ಚತುರ್ಥಿ ಹಬ್ಬದ ಪ್ರಯುಕ್ತ ಮಾದಾಪುರ ಗ್ರಾಮ ಪಂಚಾಯಿತಿಯ ಗರಗಂದೂರು ಮುರಾರ್ಜಿ ವಸತಿ ಶಾಲೆಯ ಕಾಳಜಿ ಕೇಂದ್ರದಲ್ಲಿರುವ ಸಂತ್ರಸ್ತರನ್ನು ಶಾಸಕರು ಭೇಟಿಯಾದರು. ಇಂದು ಮಧ್ಯಾಹ್ನ ಊಟದ ವ್ಯವಸ್ಥೆಯನ್ನು ಮಾಡಿದ ಶಾಸಕರು ತಾವೇ ಖುದ್ದು ಸಂತ್ರಸ್ತರಿಗೆ ಊಟ ಬಡಿಸಿ, ತಾವು ಕೂಡ ಊಟ ಮಾಡಿದರು. ಸಿಹಿ ಹಂಚಿ ಅಹವಾಲುಗಳನ್ನು ಆಲಿಸಿ ಧೈರ್ಯ ತುಂಬಿದರು.








