
ಸುಂಟಿಕೊಪ್ಪ ಆ.29 NEWS DESK : ಶ್ರೀದೇವಿ ನಾರ್ಗಾಣೆ ಗ್ರಾಮದ ಶ್ರೀ ವಿನಾಯಕ ಸೇವಾ ಸಮಿತಿ 12ನೇ ವರ್ಷದ ಗೌರಿ ಗಣೇಶೋತ್ಸವದ ಅಂಗವಾಗಿ ಅಣ್ಣಪ್ಪಸ್ವಾಮಿ ದೇವಸ್ಥಾನದಲ್ಲಿ ಶ್ರೀಗೌರಿ ಗಣೇಶ ಉತ್ಸವ ಮೂರ್ತಿಯನ್ನು ಪ್ರತಿಷ್ಠಾಪಿಸಲಾಯಿತು. ಮುಂಜಾನೆ ಗಿರಿಯಪ್ಪ ಅವರ ಮನೆಯ ಗೌರಮ್ಮ ಬಾವಿಯಿಂದ ಗಂಗಾ ಜಲದೊಂದಿಗೆ ನಾದಸ್ವರ ಚಂಡೆ ವಾದನಗಳೊಂದಿಗೆ ಮೆರವಣಿಗೆ ಮೂಲಕ ದೇವಾಲಯದಲ್ಲಿ ಗೌರಿ ಮೂರ್ತಿಯನ್ನು ಪ್ರತಿಷ್ಠಾಪಿಸಲಾಯಿತು. ಗಣಹೋಮದೊಂದಿಗೆ ಆರಂಭಗೊಂಡು ವಿವಿಧ ಧಾರ್ಮಿಕ ಪೂಜಾ ವಿಧಿವಿಧಾನಗಳು ನೆರವೇರಿತು. ದಿನದ ವಿಶೇಷ ಪೂಜಾ ಕೈಂಕರ್ಯಗಳನ್ನು ಕೆದಕಲ್ ಈಶ್ವರ ಮಹದೇವ ದೇವಾಲಯದ ಹಿರಿಯ ಅರ್ಚಕರಾದ ಲೋಕೇಶ್ ಆರಾಧ್ಯ ಹಾಗೂ ಅವಿನಾಸ್ ಆರಾಧ್ಯ ನೆರವೇರಿಸಿದರು. ಮಹಾಮಂಗಳಾರತಿಯೊಂದಿಗೆ ನೆರೆದಿದ್ದ ಭಕ್ತಾಧಿಗಳಿಗೆ ತೀರ್ಥ ಪ್ರಸಾದ ವಿನಿಯೋಗ ಹಾಗೂ ಅನ್ನಸಂತರ್ಪಣೆ ನಡೆಸಲಾಯಿತು. ಅಧ್ಯಕ್ಷ ಎಂ.ಜೆ.ಆಕಾಶ್, ಕಿರಣ್, ಕಾರ್ತಿಕ್‍ಸುಧಿ, ಮೋಹನ್, ಬಿ.ಕೆ.ರಾಜೇಶ್, ಬಿ.ಡಿ.ರಾಜುರೈ, ಶರತ್, ವಿವೇಕ್‍ರೈ, ಕುಶಾಲಪ್ಪ ಪಿ.ಆರ್.ಸುನಿಲ್‍ಕುಮಾರ್ ಮತ್ತಿತರರು ಇದ್ದರು.








