
ಸುಂಟಿಕೊಪ್ಪ ಆ.29 NEWS DESK : 7ನೇ ಹೊಸಕೋಟೆ ಗಳೆಯರ ಬಳಗದ ವತಿಯಿಂದ 40ನೇ ಗೌರಿ-ಗಣೇಶೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು. ಶ್ರೀ ಮಹಾಗಣಪತಿ ದೇವಾಲಯದಲ್ಲಿ ಗಣೇಶನ ಮೂರ್ತಿಯನ್ನು ಪ್ರತಿಷ್ಠಾಪಿಸಿ ವಿವಿಧ ಧಾರ್ಮಿಕ ಪೂಜಾ ವಿಧಿವಿಧಾನಗಳನ್ನು ನೆರವೇರಿಸಲಾಯಿತು. ಎಮ್ಮಗುಂಡಿ ಶ್ರೀ ಬಾಲಗಣಪತಿ ಮಿತ್ರ ಮಂಡಳಿ ವತಿಯಿಂದ ಪ್ರಥಮ ವರ್ಷದ ಗೌರಿ ಗಣೇಶೋತ್ಸವದ ಪ್ರಯುಕ್ತ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಲಾಯಿತು. ಸುಂಟಿಕೊಪ್ಪದ ಅಯ್ಯಪ್ಪ ಸ್ವಾಮಿ ದೇವಾಲಯದ ಆರ್ಚಕ ಗಣೇಶ್ ಭಟ್ ನೇತೃತ್ವದಲ್ಲಿ ಗಣಹೋಮ ಮತ್ತು ವಿಶೇಷ ಪೂಜಾ ವಿಧಿವಿಧಾನಗಳನ್ನು ನೇರವೇರಿಸಿದರು. ಇದೇ ವೇಳೆ ಮಹಿಳೆಯರಿಂದ ಭಜನಾ ಕಾರ್ಯಕ್ರಮ ನಡೆಯಿತು. ಮಧ್ಯಾಹ್ನ ಮಹಾಪೂಜೆಯೊಂದಿಗೆ ತೀರ್ಥ ಪ್ರಸಾದದೊಂದಿಗೆ ಭಕ್ತಾಧಿಗಳಿಗೆ ಲಘುಉಪಹಾರ ನೀಡಲಾಯಿತು. ಸಮಿತಿಯ ಗೌರವಧ್ಯಕ್ಷ ಸಂಜೀವ, ಅಧ್ಯಕ್ಷ ಸಜಿತ್, ಕಾರ್ಯದರ್ಶಿ ಪ್ರವೀಣ ಹಾಗೂ ಗ್ರಾಮಸ್ಥರು ಇದ್ದರು.








