
ನಾಪೋಕ್ಲು ಸೆ.1 NEWS DESK : ಕಾಡಾನೆಗಳ ಹಿಂಡು ಮನೆಯ ಅಂಗಳದಲ್ಲಿ ದಾಂಧಲೆ ನಡೆಸಿ, ಹೂ ಕುಂಡಗಳನ್ನು ಹಾನಿಗೊಳಿಸಿದ ಘಟನೆ ಕಕ್ಕಬ್ಬೆಯ ನಾಲಡಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಕೋಡಿಮಣಿಯಂಡ ಶರಣ್ ಕುಟ್ಟಪ್ಪ ಅವರ ಮನೆಯಂಗಳದಲ್ಲಿದ್ದ ಹೂ ಗಿಡಗಳನ್ನು ಹಾಗೂ ಹೂಕುಂಡಗಳು ಧ್ವಂಸವಾಗಿವೆ. ಮುಂಜಾನೆ ನಾಲ್ಕು ಕಾಡಾನೆಗಳು ಎರಡು ಮರಿಗಳ ಸಹಿತ ಮನೆಯಂಗಳದಲ್ಲಿ ದಾಂಧಲೆ ನಡೆಸಿದಲ್ಲದೆ ಸಮೀಪದ ಕಾಫಿ ತೋಟಗಳಲ್ಲಿಯೂ ಕೃಷಿ ಗಿಡಗಳನ್ನು ನಷ್ಟ ಮಾಡಿದೆ. ಗ್ರಾಮದಲ್ಲಿ ಕಾಡಾನೆಗಳಿಂದ ಆತಂಕ ಎದುರಾಗಿದ್ದು, ತಕ್ಷಣವೇ ಸಂಬಂಧಪಟ್ಟವರು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಶರಣ್ ಕುಟ್ಟಪ್ಪ ಒತ್ತಾಯಿಸಿದ್ದಾರೆ
ವರದಿ : ದುಗ್ಗಳ ಸದಾನಂದ.









