Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ಹಾಕಿ ಕ್ರೀಡೆಗೆ ಕೇಂದ್ರ ಸರಕಾರದಿಂದ ಪ್ರೋತ್ಸಾಹ, ಇದು ಕೊಡುಗೆಯಲ್ಲ, ಸರಕಾರದ ಜವಾಬ್ದಾರಿ : ಕೇಂದ್ರ ಸಚಿವ ಮನ್ ಸುಖ್ ಮಾಂಡವಿಯಾ ಭರವಸೆ*
  • *ಹಸ್ತಪ್ರತಿಗಳನ್ನು ಕಾಪಾಡುವುದು ಮತ್ತು ಉಳಿಸುವುದು ನಮ್ಮ ಕರ್ತವ್ಯ :
  • *ಕೊಡಗು ಜಿಲ್ಲೆಗೆ ಕ್ರೀಡೆಯಲ್ಲಿ ಲಭಿಸಿದ ಕೀರ್ತಿ ದೇಶದ ಯಾವ ಜಿಲ್ಲೆಗಳಿಗೆ ಲಭಿಸಲಿಲ್ಲ* 
  • *ಮಾನವೀಯ ಮೌಲ್ಯಗಳ ಪ್ರತಿರೂಪ ಬುದ್ಧ : ಬರಹ : ಗೀತಾಂಜಲಿ ಎನ್.ಎಮ್ ಸೋಮವಾರಪೇಟೆ*
  • *ಕಡಂಗಮೂರೂರಿನಲ್ಲಿ ಮೇ 5 ರಂದು ದೈವಗಳ ನೇಮೋತ್ಸವ* 
  • *ಮೇ 3 ರಂದು ವಾಂಡರರ್ಸ್ ಬೇಸಿಗೆ ಶಿಬಿರ ಸಮಾರೋಪ*
  • *ಕೊಡಗು : ಶಾಂತಿಯುತ ಮತ್ತು ಸಮಾನತೆಯ ಸಮಾಜ ನಿರ್ಮಾಣಕ್ಕೆ ಭಗವಾನ್ ಬುದ್ಧನ ಸಂದೇಶಗಳು ಮಾರ್ಗದರ್ಶಿ : ಉಪವಿಭಾಗಾಧಿಕಾರಿ ನಿತಿನ್ ಚಿಕ್ಕಿ*
  • *ಒಲಂಪಿಯನ್ ಎ.ಬಿ.ಸುಬ್ಬಯ್ಯ ನಿವಾಸಕ್ಕೆ ಶಾಸಕ ಎ.ಎಸ್.ಪೊನ್ನಣ್ಣ ಭೇಟಿ : ಕುಟುಂಬಕ್ಕೆ ಸಾಂತ್ವನ*
  • *ಕಡಂಗಮರೂರು ಶ್ರೀ ಭದ್ರಕಾಳಿ ಹಾಗೂ ಶ್ರೀ ಮಹಾವಿಷ್ಣು ದೇವಾಲಯಕ್ಕೆ ಶಾಸಕ ಎ.ಎಸ್.ಪೊನ್ನಣ್ಣ ಭೇಟಿ : ನೂತನ ರಸ್ತೆ ಉದ್ಘಾಟನೆ *
  • *ಗೋಣಿಕೊಪ್ಪ : ಶ್ರೀ ಮಹಿಷಾಸುರ ಮರ್ದಿನಿ ದೇವಾಲಯದ ನವೀಕೃತ ಪೌಳಿ ಉದ್ಘಾಟನೆ*
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»*ಸಿಎನ್‍ಸಿ ಯಿಂದ 30ನೇ ವರ್ಷದ ಸಾರ್ವತ್ರಿಕ “ಕೈಲ್ ಪೊವ್ದ್” ಆಚರಣೆ : ಕೊಡವ ಲ್ಯಾಂಡ್ ಭೌಗೋಳಿಕ-ರಾಜಕೀಯ ಸ್ವಾಯತ್ತತೆ ಮತ್ತು ವಿಶೇಷ ಹಿಲ್ ಕೌನ್ಸಿಲ್ ಸ್ಟೆಟಸ್ ಪಡೆಯುವುದು ಕೊಡವರ ಸಂವಿಧಾನಬದ್ಧ ಹಕ್ಕು : ಎಂಎಲ್‍ಸಿ ಅಡಗೂರು ಹೆಚ್.ವಿಶ್ವನಾಥ್*
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

*ಸಿಎನ್‍ಸಿ ಯಿಂದ 30ನೇ ವರ್ಷದ ಸಾರ್ವತ್ರಿಕ “ಕೈಲ್ ಪೊವ್ದ್” ಆಚರಣೆ : ಕೊಡವ ಲ್ಯಾಂಡ್ ಭೌಗೋಳಿಕ-ರಾಜಕೀಯ ಸ್ವಾಯತ್ತತೆ ಮತ್ತು ವಿಶೇಷ ಹಿಲ್ ಕೌನ್ಸಿಲ್ ಸ್ಟೆಟಸ್ ಪಡೆಯುವುದು ಕೊಡವರ ಸಂವಿಧಾನಬದ್ಧ ಹಕ್ಕು : ಎಂಎಲ್‍ಸಿ ಅಡಗೂರು ಹೆಚ್.ವಿಶ್ವನಾಥ್*

ಸೆಪ್ಟೆಂಬರ್ 1, 20257 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link

ಮಡಿಕೇರಿ ಸೆ.1  NEWS DESK : ಕೊಡವ ಲ್ಯಾಂಡ್ ಭೌಗೋಳಿಕ-ರಾಜಕೀಯ ಸ್ವಾಯತ್ತತೆ ಮತ್ತು ವಿಶೇಷ ಹಿಲ್ ಕೌನ್ಸಿಲ್ ಸ್ಟೆಟಸ್ ಪಡೆಯುವುದು ಕೊಡವರ ಸಂವಿಧಾನಬದ್ಧ ಹಕ್ಕಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಹಾಗೂ ಮಾಜಿ ಸಂಸದ ಅಡಗೂರು ಹೆಚ್.ವಿಶ್ವನಾಥ್ ತಿಳಿಸಿದ್ದಾರೆ.
ಮಡಿಕೇರಿಯ ಹೊರ ವಲಯದ ಕ್ಯಾಪಿಟಲ್ ವಿಲೇಜ್ ನಲ್ಲಿ ಕೊಡವ ನ್ಯಾಷನಲ್ ಕೌನ್ಸಿಲ್ ವತಿಯಿಂದ ನಡೆದ 30ನೇ ವರ್ಷದ ಸಾರ್ವತ್ರಿಕ “ಕೈಲ್ ಪೊವ್ದ್” ಹಬ್ಬ ಆಚರಣೆಯಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು. ಕೊಡವರು ಕೇವಲ 1 ಲಕ್ಷದ ಒಳಗೆ ಇರುವ ಅತ್ಯಂತ ನಗಣ್ಯ ಜನಸಂಖ್ಯೆಯ ಎಥಿನಿಕ್ ಸಮುದಾಯವಾಗಿದ್ದು, ಭಾರತದ ಈಶಾನ್ಯ ಪ್ರಾಂತ್ಯ ಹಾಗೂ ಗೋದಾವರಿ ಹಿಲ್‍ಟ್ರ್ಯಾಕ್ಟ್ ಮತ್ತು ವಿಶಾಕಪಟ್ಟಣಂ ಹಿಲ್‍ಟ್ರ್ಯಾಕ್ಟ್ ಏಜೆನ್ಸಿಯ ಮಾದರಿಯಲ್ಲಿ ಕೊಡವರಿಗೆ ಶಾಸನಾತ್ಮಕವಾದ ಭದ್ರತೆಯನ್ನು ನೀಡಬೇಕು. 40-50ಲಕ್ಷ ಜನಸಂಖ್ಯೆ ಇರುವ ಬಲಾಡ್ಯರನ್ನು ಎಸ್‍ಟಿ ಪಟ್ಟಿಯಲ್ಲಿ ಸೇರಿಸಿರುವಾಗ ಸಂವಿಧಾನಿಕ ಸಬಲೀಕರಣಕ್ಕಾಗಿ ಬುಡಕಟ್ಟು ಲಕ್ಷಣವನ್ನು ಹೊಂದಿರುವ ಆದಿಮಸಂಜಾತ ಕೊಡವರನ್ನು ಎಸ್‍ಟಿ ಪಟ್ಟಿಗೆ ಸೇರಿಸುವುದು ಪ್ರಾಯಾಸದ ಕೆಲಸವಲ್ಲ ಎಂದರು. ಕೊಡವ ಮಣ್ಣಿನೊಂದಿಗೆ ಉಪ್ಪಿನಂತೆ ಬೆರೆತು ನಿರಂತರವಾಗಿ ತನ್ನನ್ನು ತಾನು ತೊಡಗಿಸಿಕೊಂಡಿರುವ ಸಿಎನ್‍ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಅವರು ಕೊಡವರ ಹಕ್ಕಿನ ಹೋರಾಟಕ್ಕೆ ನನ್ನನ್ನು ಕರೆದಿದ್ದಾರೆ, ಕರೆದಾಗಲೆಲ್ಲ ನಾನು ಬರುತ್ತಲೇ ಇದ್ದೇನೆ, ಮುಂದೆಯೂ ಬರುತ್ತೇನೆ. ಜನಮಾನಸದಲ್ಲಿ ಕೊಡವ ಹೋರಾಟದ ಆಧಮ್ಯ ಧ್ವನಿ ನಿರಂತರವಾಗಿ ಹಾಗೂ ಚಿರಂತನವಾಗಿ ಮುಂದುವರೆಯುವಂತೆ ಸಿಎನ್‍ಸಿ ತನ್ನ ಹೋರಾಟವನ್ನು ಮುಂದುವರೆಸಿರುವುದು ಶ್ಲಾಘನೀಯ. ಈ ನೈಜ ಹೋರಾಟಕ್ಕೆ ಎಂದಾದರು ಒಂದು ದಿನ ಶುಭಗಳಿಗೆ ಬರಲಿದೆ ಎಂದು ಹೆಚ್.ವಿಶ್ವನಾಥ್ ಅವರು ವಿಶ್ವಾಸ ವ್ಯಕ್ತಪಡಿಸಿದರು. 1956ರ ವರೆಗೆ ಪ್ರತ್ಯೇಕ ರಾಜ್ಯವಾಗಿ ಮುಖ್ಯಮಂತ್ರಿಗಳನ್ನು ಒಳಗೊಂಡ ಶಾಸನ ಸಭೆ ಅಸ್ತಿತ್ವದಲ್ಲಿದ್ದ ಕೊಡವರ ನೆಲ ವಿಶೇಷ ಸ್ಥಾನಮಾನದೊಂದಿಗೆ ಮರುಕಳಿಸಬೇಕಾಗಿದೆ. ಕೊಡವ ಲ್ಯಾಂಡ್ ಭೂರಾಜಕೀಯ ಸ್ವಾಯತ್ತತೆ ಮತ್ತು ಕಲಂ 244 ರ ಅಡಿಯಲ್ಲಿ ಕೊಡವರಿಗೆ ಸ್ವಯಂ ಆಡಳಿತದ ಅಗತ್ಯವನ್ನು ತಿಳಿಸಿದರು. ಕೊಡವರು ಕೊಡವಸೀಮೆಯ ಪುರಾತನ ಬುಡಕಟ್ಟು ಜನರಾಗಿರುವುದರಿಂದ, ಸಂವಿಧಾನದ ಖಾತರಿಗಳ ಮೂಲಕ ಈ ಮಣ್ಣಿನ ರಾಜಕೀಯ ಬಲ, ನೆಲ, ಜಲ ಮತ್ತು ನೈಸರ್ಗಿಕ ಸಂಪನ್ಮೂಲಗಳನ್ನು ನಿರ್ಧರಿಸುವ ಹಕ್ಕನ್ನು ಅವರು ಹೊಂದಿರಬೇಕು. ಕೊಡವರು ದೇಶದ ಅಭಿವೃದ್ಧಿಗೆ ಮತ್ತು ಸೇನೆಗೆ ಅಪ್ರತಿಮ ಕಾಣಿಕೆ ನೀಡಿದ್ದಾರೆ. ಶ್ರೇಷ್ಠ ಸೇವೆ ನೀಡಿದ ಅಗ್ರ ಗಣ್ಯ ಸೇನಾನಿ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ನವರ ಹೆಸರು ಸೂರ್ಯ-ಚಂದ್ರ ಇರುವಲ್ಲಿಯವರೆಗೆ ಚಿರಸ್ಥಾಯಿ ಎಂದು ನುಡಿದರಲ್ಲದೆ, ಕೇಂದ್ರ ಮತ್ತು ರಾಜ್ಯ ಸರ್ಕಾರ ಕೊಡವರ ಅಮೋಘ ಸೇವೆಗಾಗಿ ಮತ್ತು ರಾಷ್ಟ್ರ ನಿರ್ಮಾಣದ ಅಪಾರ ಕೊಡುಗೆಗಾಗಿ ಋಣಿಯಾಗಿರಬೇಕು. ಅಸಹಾಯಕ ಕೊಡವರ ಶಕ್ತಿಯಂತಿರುವ ಸಿಎನ್‍ಸಿಯ ಬಹುಕಾಲದ ಬೇಡಿಕೆಯನ್ನು ಈಡೇರಿಸುವುದು ಸಾಂವಿಧಾನಿಕ ಬಾಧ್ಯತೆಯಾಗಿದ್ದು, ಇದನ್ನು ಅತ್ಯಂತ ಆದ್ಯತೆ ಮತ್ತು ಮಾನವೀಯ ಧೋರಣೆಯೊಂದಿಗೆ ಪರಿಹರಿಸಬೇಕು ಎಂದರು.
ಚುನಾಯಿತ ಪ್ರತಿನಿಧಿಗಳು ಸಂವಿಧಾನದ ಆಶಯಗಳನ್ನು ಈಡೇರಿಸುವಲ್ಲಿ ವಿಫಲರಾಗುತ್ತಿದ್ದಾರೆ, ಪ್ರಜೆಗಳೇ ಪ್ರಭುಗಳು ಎನ್ನುವುದನ್ನು ಮರೆಯುತ್ತಿದ್ದಾರೆ. ರಿಯಲ್ ಎಸ್ಟೇಟ್ ದಂಧೆಯ ಮೂಲಕ ಪಾಳೆಗಾರರಂತೆ ಮೆರೆಯುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು. ಚುನಾಯಿತ ಜನಪ್ರತಿನಿಧಿಗಳು ಸಾಮಂತರಲ್ಲ ಎನ್ನುವುದನ್ನು ಅರಿತು ಪ್ರಜೆಗಳೇ ಸಾರ್ವಭೌಮರೆನ್ನುವ ಹಕ್ಕನ್ನು ಅರಿತುಕೊಂಡು ಕ್ಷೇತ್ರದ ಮತದಾರರು ಪ್ರಶ್ನೆ ಮಾಡುವ ಮನೋಭಾವವನ್ನು ಬೆಳೆಸಿಕೊಳ್ಳಬೇಕು ಎಂದು ಹೆಚ್.ವಿಶ್ವನಾಥ್ ಕರೆ ನೀಡಿದರು. ಸಾರ್ವತ್ರಿಕ “ಕೈಲ್ ಪೊವ್ದ್” ಹಬ್ಬ ಆಚರಣೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಿಎನ್‍ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಅವರು ಯುದ್ಧ ಮತ್ತು ಬೇಟೆಯ ಕೌಶಲ್ಯಗಳು ಆದಿಮಸಂಜಾತ ಆ್ಯನಿಮಿಸ್ಟಿಕ್ ನಂಬಿಕೆಯ ಏಕಾ ಜನಾಂಗವಾದ ಕೊಡವರಲ್ಲಿ ವಂಶವಾಹಿಯಾಗಿ ಬೇರೂರಿದೆ. ಶಸ್ತ್ರಾಸ್ತ್ರಗಳನ್ನು ಹೊಂದುವುದು ಯೋಧ ಪರಂಪರೆಯ ಕೊಡವರ ಅನುವಂಶಿಕ ಶಾಶ್ವತ ಹಕ್ಕಾಗಿದೆ. ಬಂದೂಕಿನೊಂದಿಗೆ ಕೊಡವರು ಭಾವನಾತ್ಮಕ ಸಂಬಂಧ ಹೊಂದಿದ್ದಾರೆ. ಈ ಹಕ್ಕನ್ನು ಕಸಿದುಕೊಳ್ಳಲು ಯಾರಿಂದಲೂ ಸಾಧ್ಯವಿಲ್ಲ ಎಂದರು. “ಸಂಸ್ಕಾರ ಗನ್ / ಶಸ್ತ್ರಾಸ್ತ್ರಗಳು” ಕೊಡವ ಜನಾಂಗದ ಹುಟ್ಟು ಮತ್ತು ಸಾವು ಹಾಗೂ ಕೊಡವ ಕುಲದ ವಿಕಾಸವನ್ನು ಸಾಕ್ಷೀಕರಿಸುತ್ತಿವೆ. ಈ ಪವಿತ್ರ ಕೊಡವ ತಾಯ್ನಾಡಿನಲ್ಲಿ ಬಂದೂಕು ಕೊಡವ ಜನಾಂಗದ ಸಮರ ಪರಂಪರೆಗೆ ಮತ್ತು ಪೂರ್ವಜರ ಪ್ರಾಚೀನತೆಗೆ ಅವಿನಾಭಾವ ಸಂಬಂಧ ಹೊಂದಿದೆ. ಆತ್ಮ ಮತ್ತು ಹೃದಯದಂತೆ ನಮ್ಮೊಂದಿಗಿದೆ. ಇದರಲ್ಲಿ ಯಾವುದೇ ಒಂದು ಸಿದ್ಧಾಂತ ಕಳೆದು ಹೋದರೂ, ಅದು ಕೊಡವ ಜನಾಂಗಕ್ಕೆ ದೊಡ್ಡ ಪಾಶ್ರ್ವವಾಯು ತಗುಲಿದಷ್ಟೆ ನಷ್ಟವಾಗುತ್ತದೆ. ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರು ಬರೆದ ಸಂವಿಧಾನದ ಅಡಿಯಲ್ಲಿ ಕೊಡವ ಜನಾಂಗವು ಶಾಸನಬದ್ಧ ರಕ್ಷಣೆಯನ್ನು ಪಡೆಯಬೇಕು. ಇದಕ್ಕಾಗಿ “ಕೈಲ್ ಪೊವ್ದ್” ಹಬ್ಬ ಆಚರಣೆಯ ಸಂದರ್ಭ ವಿವಿಧ ಹಕ್ಕೊತ್ತಾಯಗಳನ್ನು ಮಂಡಿಸಲಾಗುವುದು ಎಂದು ಎನ್.ಯು.ನಾಚಪ್ಪ ತಿಳಿಸಿದರು. ಕೊಡವಲ್ಯಾಂಡ್ ಭೂರಾಜಕೀಯ ಸ್ವಾಯತ್ತತೆ ನೀಡಬೇಕು, ಸಂವಿಧಾನದ 6ನೇ ಮತ್ತು 8ನೇ ಶೆಡ್ಯೂಲ್‍ಗಳ ಆರ್ಟಿಕಲ್ 244, 371(ಕೆ) ಆರ್/ಡಬ್ಲ್ಯೂ ಅಡಿಯಲ್ಲಿ ಆಂತರಿಕ ರಾಜಕೀಯ ಸ್ವ-ನಿರ್ಣಯದ ಹಕ್ಕುಗಳೊಂದಿಗೆ ಸ್ವ-ಆಡಳಿತ, ವಿಶ್ವ ರಾಷ್ಟ್ರ ಸಂಸ್ಥೆ ಕಲ್ಪಿಸಲ್ಪಟ್ಟ ಆದಿಮಸಂಜಾತ ಜನರ ಹಕ್ಕುಗಳ ಅಡಿಯಲ್ಲಿ ಮತ್ತು ಸ್ವಯಂ-ನಿರ್ಣಯ ಹಕ್ಕುಗಳಿಗಾಗಿ ಅಂತರರಾಷ್ಟ್ರೀಯ ಕಾನೂನಿನಲ್ಲಿ ಘೋಷಿಸಲ್ಪಟ್ಟಿದೆ. ಈ ಮಾದರಿಯಲ್ಲಿ ಕೊಡವ ಲ್ಯಾಂಡ್ ರಕ್ಷಿಸಲ್ಪಡಬೇಕು. ಆರ್ಟಿಕಲ್ 340 ಮತ್ತು 342 ರ ಅಡಿಯಲ್ಲಿ ಆದಿಮಸಂಜಾತ ಏಕಜನಾಂಗೀಯ ಕೊಡವ ಕುಲಕ್ಕೆ (Animistic – Mono- Ethnic)ಎಸ್‍ಟಿ ಪಟ್ಟಿಯಲ್ಲಿ ವರ್ಗೀಕರಣವಾಗಬೇಕು. ನಮ್ಮ ಮಾತೃ ಭಾಷೆಯಾದ ಕೊಡವ ತಕ್ಕ್ ಅನ್ನು 8ನೇ ಶೆಡ್ಯೂಲ್‍ನಲ್ಲಿ ಸೇರಿಸಬೇಕು. ಕೊಡವ ಜನಾಂಗೀಯ ಧಾರ್ಮಿಕ “ಸಂಸ್ಕಾರ ಗನ್” ನ್ನು ಸಂವಿಧಾನದ 25 ಮತ್ತು 26 ನೇ ವಿಧಿಗಳಲ್ಲಿ ಸೇರ್ಪಡೆಗೊಳಿಸಬೇಕು. ಕೊಡವ ಜಾನಪದ ಪರಂಪರೆಯನ್ನು ಯುನೆಸ್ಕೋದ ಅಮೂರ್ತ ಸಾಂಸ್ಕೃತಿಕ ಪರಂಪರೆಯ ಪಟ್ಟಿಯಲ್ಲಿ ಸೇರಿಸಬೇಕು. ಜೀವನದಿ ಕಾವೇರಿಯ ಮೇಲೆ ಕಾನೂನು ವ್ಯಕ್ತಿ ಸ್ಥಾನಮಾನ ನೀಡಬೇಕು ಮತ್ತು ದಿವ್ಯ ವಸಂತದ ಜನ್ಮಸ್ಥಳವಾದ ಕಾವೇರಿಯನ್ನು ಸರ್ಕಾರವು ಕೊಡವ ಜನಾಂಗದ ಪವಿತ್ರ ಯಾತ್ರಾ ಕೇಂದ್ರವಾಗಿ ಪರಿಗಣಿಸಬೇಕು, ಪ್ರವಾಸೋದ್ಯಮವಾಗಿ ಪರಿಗಣಿಸಬಾರದು. ಕೇಂದ್ರ. ಹೆಲ್ಸಿಂಕಿ ನಿಯಮ 1966ರ ಪ್ರಕಾರ ಕಾವೇರಿಯ ನೀರಿನ ಪಾಲನ್ನು ಕೊಡವಲ್ಯಾಂಡ್‍ಗೆ ಹಂಚಿಕೆ ಮಾಡಬೇಕು. ನಾಲ್ನಾಡಿನ ಅರಮನೆ ಮತ್ತು ಮಡಿಕೇರಿ ಕೋಟೆಯಲ್ಲಿ ಅರಮನೆಯ ಸಂಚಿನಲ್ಲಿ ರಾಜಕೀಯ ಹತ್ಯೆಗಳ ಹಿನ್ನೆಲೆ ಸ್ಮಾರಕಗಳು ಮತ್ತು ಉಲುಗುಲಿ- ಸುಂಟಿಕೊಪ್ಪ ಹಾಗೂ ಮುಳ್ಳುಸೋಗೆ, ಲಕಡಿಕೋಟೆ-ಗದ್ದಿಗೆ ಬೆಟ್ಟಗಳಲ್ಲಿ ಕೊಡವ ಶೌರ್ಯವನ್ನು ಪ್ರತಿಬಿಂಬಿಸುವ ಯುದ್ಧ ಸ್ಮಾರಕಗಳನ್ನು ಸ್ಥಾಪಿಸಬೇಕು. ಸಂವಿಧಾನದ ಪರಿಚ್ಛೇದ 49ರ ಅಡಿಯಲ್ಲಿ ದೇವಾಟ್ ಪರಂಬ್‍ನಲ್ಲಿ ಅಂತರಾಷ್ಟ್ರೀಯ ಕೊಡವ ನರಮೇಧದ ಸ್ಮಾರಕವನ್ನು ಸ್ಥಾಪಿಸಬೇಕು. ಎರಡೂ ದುರಂತಗಳನ್ನು ವಿಶ್ವ ರಾಷ್ಟ್ರ ಸಂಸ್ಥೆಯ ಹತ್ಯಾಕಾಂಡದ ಸ್ಮರಣೆಯ ಪಟ್ಟಿಯಲ್ಲಿ ಸೇರಿಸಬೇಕು. ಜನಸಂಖ್ಯಾ ಪಲ್ಲಟವನ್ನು ತಡೆಗಟ್ಟಲು, ನಮ್ಮ ಅನುವಂಶಿಕ ಸಾಮುದಾಯಿಕ ಆಸ್ತಿಗಳನ್ನು ಮತ್ತು ನಮ್ಮ ಆಧ್ಯಾತ್ಮಿಕ-ಪಾರಮಾರ್ಥಿಕ ಸ್ಥಾನಗಳಾದ ಮಂದ್, ದೇವರಕಾಡ್, ಗೆಜ್ಜೆತಂಡ್‍ಗಳ ಪಾವಿತ್ರತೆ ಕಾಪಾಡಬೇಕು ಮತ್ತು ಈ ಭೂಮಿಯಲ್ಲಿ ನಮ್ಮ ಐತಿಹಾಸಿಕ ನಿರಂತರತೆಯನ್ನು ರಕ್ಷಿಸಲು, ಸಿಎನ್‍ಸಿ ಒಳಗಿನ ಲೈನ್ ಪರವಾನಗಿಯನ್ನು (ಐಎಲ್‍ಪಿ) ಕೋರುತ್ತದೆ. ಮಣಿಪುರ, ನಾಗಾಲ್ಯಾಂಡ್, ಅರುಣಾಚಲ ಪ್ರದೇಶ ಮತ್ತು ಮಿಜೋರಾಂನ ಮಾದರಿಯಲ್ಲಿ ಕ್ರಮ ಕೈಗೊಳ್ಳಬೇಕು. ಬೌದ್ಧ ಸನ್ಯಾಸಿ ಸಮುದಾಯಕ್ಕೆ ಪ್ರತ್ಯೇಕವಾಗಿ ಸಿಕ್ಕಿಂನ ಸಂಘ ಕ್ಷೇತ್ರದಂತೆ ಕೊಡವ ಜನಾಂಗಕ್ಕೆ ಪ್ರತ್ಯೇಕವಾಗಿ ಒಂದು ಅಮೂರ್ತ/ಅದೃಶ್ಯ ಕೊಡವ ಸಂಸದೀಯ ಮತ್ತು ಅಸೆಂಬ್ಲಿ ಕ್ಷೇತ್ರವನ್ನು ಸ್ಥಾಪಿಸಿ, ಶಾಸಕಾಂಗದಲ್ಲಿ ಪ್ರತಿನಿಧಿಸಲು ಅವಕಾಶ ನೀಡಬೇಕು. ಹೊರಗಿನ ರಾಜಶಾಹಿ ಮತ್ತು ಬ್ರಿಟಿಷ್‍ರಾದಿಯಾಗಿ ಇಲ್ಲಿಯ ತನಕ ಆಗಿ ಹೋದ ಆಡಳಿತಗಾರರಿಂದ ಆದಿಮಸಂಜಾತ ಕೊಡವರು ತೆರಿಗೆ ಪಾವತಿಸಲಿಲ್ಲವೆಂದು ಕಳೆದುಕೊಂಡ ತಮ್ಮ ಪ್ರಾಚೀನ ಪಾರಂಪರಿಕ ಭೂಮಿಯನ್ನು ಭೋಗ್ಯ, ಅಡಮಾನ, ಮಾರಾಟ ಮತ್ತು ಸ್ವಾಧೀನ ಪಡಿಸಿಕೊಂಡ ಕೊಡವರ ಭೂಮಿಯನ್ನು ಅಂತರಾಷ್ಟ್ರೀಯ ಕಾನೂನಿನ ಪ್ರಕಾರ ಮರಳಿಸಬೇಕು ಎಂದು ಎನ್.ಯು.ನಾಚಪ್ಪ ಹಕ್ಕೊತ್ತಾಯ ಮಂಡಿಸಿದರು. ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರು ಬರೆದ ಸಂವಿಧಾನದ ಅಡಿಯಲ್ಲಿ ಕೊಡವ ಜನಾಂಗವು ಶಾಸನಬದ್ಧ ರಕ್ಷಣೆಯನ್ನು ಪಡೆಯಬೇಕು. ಇದಕ್ಕಾಗಿ “ಕೈಲ್ ಪೊವ್ದ್” ಹಬ್ಬ ಆಚರಣೆಯ ಈ ಶುಭ ಸಂದರ್ಭದಲ್ಲಿ ಕೊಡವ ಲ್ಯಾಂಡ್ ಭೂ ರಾಜಕೀಯ ಸ್ವಾಯತ್ತತೆ ಸೇರಿದಂತೆ ರಾಜ್ಯಾಂಗದತ್ತ ನಿರ್ಣಯಗಳನ್ನು ಮಂಡಿಸುತ್ತಿರುವುದಾಗಿ ಹೇಳಿದರು.
*ನ.26 ರಂದು “ಕೊಡವ ನ್ಯಾಷನಲ್ ಡೇ”*
ಕೊಡವ ಲ್ಯಾಂಡ್ ಭೌಗೋಳಿಕ ರಾಜಕೀಯ ಸ್ವಾಯತ್ತತೆ ಸೇರಿದಂತೆ ವಿವಿಧ ಬೇಡಿಕೆಗಳ ಹಕ್ಕೊತ್ತಾಯಗಳನ್ನು ಮಂಡಿಸುವ 35ನೇ ವರ್ಷದ “ಕೊಡವ ನ್ಯಾಷನಲ್ ಡೇ” ಕಾರ್ಯಕ್ರಮವನ್ನು ಇದೇ ನ.26 ರಂದು ಕ್ಯಾಪಿಟಲ್ ವಿಲೇಜ್‍ನಲ್ಲಿ ಆಚರಿಸಲಾಗುವುದು ಎಂದು ಘೋಷಿಸಿದರು.
ಖ್ಯಾತ ವೈದ್ಯ ಹಾಗೂ ಸಮಾಜ ಸೇವಕ ಡಾ.ಮಾತಂಡ ಅಯ್ಯಪ್ಪ ಅವರು ಮಾತನಾಡಿ ಕೊಡವರು ಕೊಡಗಿಗೆ ಮಾತ್ರ ಸೀಮಿತವಾದ ಆದಿಮಸಂಜಾತ ಜನ. ಕೊಡವರ ಸರ್ವಾಂಗೀಣ ವಿಕಾಸ ಮತ್ತು ಏಳಿಗೆ ಆಗಬೇಕಾದರೆ ಕೊಡವ ಎಥ್ನಿಕ್ ಜನಾಂಗವನ್ನು ಸಂವಿಧಾನದ ಶೆಡ್ಯೂಲ್ ಪಟ್ಟಿಯಲ್ಲಿ ವರ್ಗೀಕರಿಸಬೇಕು. ಈ ಸಂಬಂಧ ಕೊಡವ ನ್ಯಾಷನಲ್ ಕೌನ್ಸಿಲ್ ನಡೆಸುತ್ತಿರುವ ಮೂರುವರೆ ದಶಕಗಳ ಸುದೀರ್ಘ ಹೋರಾಟ ಫಲ ಕಾಣಬೇಕಾದರೆ ಯುವ ಜನಾಂಗ ತಮ್ಮ ಭವಿಷತ್ತನ್ನು ದೃಷ್ಟಿಯಲ್ಲಿಟ್ಟುಕೊಂಡು ಬೆಂಬಲಿಸಬೇಕು ಮತ್ತು ಭಾಗಿಯಾಗಬೇಕೆಂದು ಕರೆ ನೀಡಿದರು.
*ನಿರ್ಣಯಗಳು*
ಕೊಡವಲ್ಯಾಂಡ್ ಭೂರಾಜಕೀಯ ಸ್ವಾಯತ್ತತೆ ನೀಡಬೇಕು, ಸಂವಿಧಾನದ 6ನೇ ಮತ್ತು 8ನೇ ಶೆಡ್ಯೂಲ್‍ಗಳ ಆರ್ಟಿಕಲ್ 244, 371(ಕೆ) ಆರ್/ಡಬ್ಲೂ?ಯ ಅಡಿಯಲ್ಲಿ ಆಂತರಿಕ ರಾಜಕೀಯ ಸ್ವಯಂ-ನಿರ್ಣಯದ ಹಕ್ಕುಗಳೊಂದಿಗೆ ಕೊಡವ ಸ್ವಯಂ ಆಡಳಿತವನ್ನು ಮಾನ್ಯ ಮಾಡಬೇಕು, ವಿಶ್ವ ರಾಷ್ಟ್ರ ಸಂಸ್ಥೆ ಕಲ್ಪಿಸಲ್ಪಟ್ಟ ಆದಿಮಸಂಜಾತ ಬುಡಕಟ್ಟು ಜನರ ಹಕ್ಕುಗಳ ಅಡಿಯಲ್ಲಿ ಸ್ವಯಂ-ನಿರ್ಣಯ ಹಕ್ಕುಗಳಿಗಾಗಿ ಘೋಷಿಸಲ್ಪಟ್ಟ ಅಂತರರಾಷ್ಟ್ರೀಯ ಕಾನೂನಿನಡಿಯಲ್ಲಿ ಅತ್ಯಂತ ಸೂಕ್ಷ್ಮ ಆದಿಮ ಸಂಜಾತ ಕೊಡವರ ಎಲ್ಲಾ ಹಕ್ಕುಗಳ ರಕ್ಷಣೆಯಾಗಬೇಕು. ಆರ್ಟಿಕಲ್ 340 ಮತ್ತು 342 ರ ಅಡಿಯಲ್ಲಿ ಕೊಡವ ಜನಾಂಗಕ್ಕೆ ಎಸ್‍ಟಿ ಟ್ಯಾಗ್ ನೀಡಬೇಕು. ನಮ್ಮ ಮಾತೃ ಭಾಷೆಯಾದ ಕೊಡವ ತಕ್ಕ್ ಅನ್ನು ಸಂವಿಧಾನದ 8ನೇ ಶೆಡ್ಯೂಲ್‍ನಲ್ಲಿ ಸೇರಿಸಬೇಕು. ಕೊಡವ ಜನಾಂಗೀಯ ಸಂಸ್ಕಾರ ಗನ್ ನ್ನು ಸಂವಿಧಾನದ 25 ಮತ್ತು 26ನೇ ವಿಧಿಗಳಲ್ಲಿ ಸೇರ್ಪಡೆಗೊಳಿಸಬೇಕು. ಕೊಡವ ಪರಂಪರೆಯನ್ನು ಯುನೆಸ್ಕೋದ ಅಮೂರ್ತ ಸಾಂಸ್ಕೃತಿಕ ಪರಂಪರೆಯ ಪಟ್ಟಿಯಲ್ಲಿ ಸೇರಿಸಬೇಕು. ಜೀವನದಿ ಕಾವೇರಿಗೆ ಜೀವಂತ ವ್ಯಕ್ತಿತ್ವ ಮತ್ತು ಕಾನೂನಾತ್ಮಕ ವ್ಯಕ್ತಿಯ ಸ್ಥಾನಮಾನ ನೀಡಬೇಕು ಮತ್ತು ಜಲ ದೇವತೆ ಕಾವೇರಿಯ ಜನ್ಮಸ್ಥಳವಾದ ತಲಕಾವೇರಿಯನ್ನು ಸರ್ಕಾರವು ಕೊಡವ ಜನಾಂಗದ ಪವಿತ್ರ ತೀರ್ಥ ಯಾತ್ರಾ ಕೇಂದ್ರವಾಗಿ ಪರಿಗಣಿಸಬೇಕು, ಪ್ರವಾಸಿ ಕೇಂದ್ರವಾಗಿ ಪರಿಗಣಿಸಬಾರದು. ಹೆಲ್ಸಿಂಕಿ ನಿಯಮ 1966ರ ಪ್ರಕಾರ ಕಾವೇರಿಯ ನೀರಿನ ಪಾಲನ್ನು ಕೊಡವಲ್ಯಾಂಡ್‍ಗೆ ಹಂಚಿಕೆ ಮಾಡಬೇಕು. ನಾಲ್ನಾಡಿನ ಅರಮನೆ ಮತ್ತು ಮಡಿಕೇರಿ ಕೋಟೆಯಲ್ಲಿ ಅರಮನೆಯ ಸಂಚಿನಲ್ಲಿ ನಡೆದ ಕೊಡವರ ರಾಜಕೀಯ ಹತ್ಯೆಗಳ ಹಿನ್ನೆಲೆ ಸ್ಮಾರಕಗಳನ್ನು ನಿರ್ಮಿಸಬೇಕು. ಉಲುಗುಲಿ-ಸುಂಟಿಕೊಪ್ಪ ಹಾಗೂ ಮುಳ್ಳುಸೋಗೆ, ಲಕ್ಕಡಿಕೋಟೆ, ಗದ್ದಿಗೆ ಬೆಟ್ಟಗಳಲ್ಲಿ ಕೊಡವ ಶೌರ್ಯವನ್ನು ಪ್ರತಿಬಿಂಬಿಸುವ ಯುದ್ಧ ಸ್ಮಾರಕಗಳನ್ನು ಸ್ಥಾಪಿಸಬೇಕು. ಸಂವಿಧಾನದ ವಿಧಿ 49ರ ಅಡಿಯಲ್ಲಿ ದೇವಟ್‍ಪರಂಬ್‍ನಲ್ಲಿ ಅಂತರಾಷ್ಟ್ರೀಯ ಕೊಡವ ನರಮೇಧದ ಸ್ಮಾರಕವನ್ನು ಸ್ಥಾಪಿಸಬೇಕು. ಈ ಎರಡೂ ದುರಂತಗಳನ್ನು ವಿಶ್ವ ರಾಷ್ಟ್ರ ಸಂಸ್ಥೆಯ ಹತ್ಯಾಕಾಂಡದ ಸ್ಮರಣೆಯ ಪಟ್ಟಿಯಲ್ಲಿ ಸೇರಿಸಬೇಕು. ಜನಸಂಖ್ಯಾ ಪಲ್ಲಟವನ್ನು ತಡೆಗಟ್ಟಲು, ನಮ್ಮ ಆನುವಂಶಿಕ ಸಾಮುದಾಯಿಕ ಆಸ್ತಿಗಳನ್ನು ಮತ್ತು ನಮ್ಮ ಆಧ್ಯಾತ್ಮಿಕ-ಪಾರಮಾರ್ಥಿಕ ಸ್ಥಾನಗಳಾದ ಮಂದ್, ದೇವಕಾಡ್ ಮತ್ತು ಈ ಭೂಮಿಯಲ್ಲಿ ನಮ್ಮ ಐತಿಹಾಸಿಕ ನಿರಂತರತೆಯನ್ನು ರಕ್ಷಿಸಲು ಮಣಿಪುರ, ನಾಗಾಲ್ಯಾಂಡ್, ಅರುಣಾಚಲ ಪ್ರದೇಶ ಮತ್ತು ಮಿಜೋರಾಂನ ಮಾದರಿಯಲ್ಲಿ ಇನ್ರ್ಲೈನ್‍ರ್ಮಿಟ್ (ಐಎಲ್‍ಪಿ) ಜಾರಿಗೆ ತರಬೇಕು. ಸಿಕ್ಕಿಂನ ಬೌದ್ಧ ಸನ್ಯಾಸಿ ಸಮುದಾಯಕ್ಕೆ ನೀಡಿರುವ ವಿಶೇಷ ರಾಜಕೀಯ ಪ್ರಾತಿನಿಧ್ಯವಾದ “ಸಂಘ” ಅಮೂರ್ತ ಮತಕ್ಷೇತ್ರದಂತೆ ಕೊಡವ ಜನಾಂಗಕ್ಕೆ ಪ್ರತ್ಯೇಕವಾಗಿ ಒಂದು ಅಮೂರ್ತ/ಅದೃಶ್ಯ ಕೊಡವ ಸಂಸದೀಯ ಮತ್ತು ಅಸೆಂಬ್ಲಿ ಕ್ಷೇತ್ರವನ್ನು ಸ್ಥಾಪಿಸಿ, ಭಾರತದ ಪಾರ್ಲಿಮೆಂಟ್ ಸೆಂಟ್ರಲ್ ವಿಸ್ತಾ ಮತ್ತು ಕರ್ನಾಟಕದ ಶಾಸಕಾಂಗಳಲ್ಲಿ ಪ್ರತಿನಿಧಿಸಲು ಅವಕಾಶ ನೀಡಬೇಕು. ಆದಿಮಸಂಜಾತ ಕೊಡವ ಬುಡಕಟ್ಟು ಜನರ ಹಬ್ಬಗಳಾದ ಎಡಮ್ಯಾರ್, ಕಕ್ಕಡ ಪದ್ನೆಟ್, ಕಾರೋಣ್ ಕೊಡ್ಪ ಆಚರಣೆ, ಕೈಲ್ ಪೌಳ್ದ್, ಕಾವೇರಿ ಚಂಗ್ರಾಂದಿ, ಪಾಥೋಲೋಧಿ ಮತ್ತು ಪುತ್ತರಿ, ಕೊಡವರ ಪವಿತ್ರ ರತ್ನಗಳಾದ ಕೊಡವ ತಾಯ್ನಾಡು, ಕೊಡವ ಭೂಪ್ರದೇಶ, ಜಲಸಂಪನ್ಮೂಲವಾದ ದೈವಿಕ ವಸಂತ ಕಾವೇರಿ, ಕೊಡವರ ಪವಿತ್ರ ಯಾತ್ರಾಕೇಂದ್ರ ತಲಕಾವೇರಿ, ಮಂದ್ ಗಳು, ಸಮಾಧಿಗಳು, ಯುದ್ಧ ಸ್ಮಾರಕಗಳು, ನರಮೇಧದ ಸ್ಮಾರಕಗಳು, ದೇವರಕಾಡುಗಳು, ಸಸ್ಯರಾಶಿ, ವನ್ಯಜೀವಿ, ಪರ್ವತಗಳು, ಜಲಪಾತಗಳು, ಕೊಡವರ ಸಾಂಪ್ರದಾಯಿಕ ಆಭರಣಗಳಾದ ಪೀಚೆಕತ್ತಿ, ವೇಷಭೂಷಣಗಳು, ಸಾಂಪ್ರದಾಯಿಕ ಪಾಕಪದ್ಧತಿ, ಕೊಡವ ಜಾನಪದ ಕಲೆ, ಕೊಡವ ಥಕ್, ವಿಶಿಷ್ಟ ಸಾಂಸ್ಕೃತಿಕ ಪರಂಪರೆ, ಸಮರ ಕಲೆ, ಯೋಧ ಪರಂಪರೆ, ಕೃಷಿ ಬದ್ಧತೆ ಮತ್ತಿತರ ಕೊಡವ ಪದ್ಧತಿಗಳನ್ನು ಸೂರ್ಯ ಚಂದ್ರರಿರುವವರೆಗೆ ಉಳಿಸಿಕೊಳ್ಳಲು ಸಿಎನ್‍ಸಿ ಸಭೆ ನಿರ್ಣಯ ಕೈಗೊಂಡಿತು.
*”ತೋಕ್ ಪೂವ್” ನಿಂದ ಪೂಜೆ* ಸಭಾ ಕಾರ್ಯಕ್ರಮಕ್ಕೂ ಮೊದಲು ಎನ್.ಯು.ನಾಚಪ್ಪ ಅವರ ನೇತೃತ್ವದಲ್ಲಿ “ಕೈಲ್ ಪೊವ್ದ್” ಪ್ರಯುಕ್ತ “ತೋಕ್ ಪೂವ್” ನಿಂದ ಬಂದೂಕುಗಳನ್ನು ಸಿಂಗರಿಸಿ ಪ್ರಾರ್ಥಿಸಲಾಯಿತು. ಪೂಜ್ಯ ಸ್ಥಾನದಲ್ಲಿರುವ ಗುರುಕಾರೋಣರಿಗೆ ಮೀದಿ ಇಟ್ಟು ಸಿಎನ್‍ಸಿ ಹೋರಾಟಕ್ಕೆ ಬೆಂಬಲ ಕೋರಲಾಯಿತು. ಕೊಡವರು ಹಾಗೂ ಕೊಡವತಿಯರು ಶಸ್ತ್ರಾಸ್ತ್ರಗಳ ಸಾಮೂಹಿಕ ಆರಾಧನೆಯಲ್ಲಿ ಬಂದೂಕು ಮತ್ತು ಒಡಿಕತ್ತಿಯೊಂದಿಗೆ ಪಾಲ್ಗೊಂಡರು ಮತ್ತು ಗಾಳಿಯಲ್ಲಿ ಗುಂಡು ಹಾರಿಸಿ ಕೋವಿಯ ಹಕ್ಕನ್ನು ಪ್ರತಿಪಾದಿಸಿದರು. ಹಬ್ಬದ ಪ್ರಯುಕ್ತ ನಡೆದ ಕೊಡವ ಸಾಂಸ್ಕೃತಿಕ ಕಾರ್ಯಕ್ರಮ ಗಮನ ಸೆಳೆಯಿತು. ರುಚಿಕರವಾದ “ಕೈಲ್ ಪೊವ್ದ್” ಖಾದ್ಯ ಸಹಿತ ಊಟದೊಂದಿಗೆ ಹಬ್ಬದ ಸಂಭ್ರಮವನ್ನು ಹಂಚಿಕೊಳ್ಳಲಾಯಿತು. ಕಲಿಯಂಡ ಮೀನಾ, ಪುಲ್ಲೇರ ಸ್ವಾತಿ, ಅಪ್ಪಚ್ಚೀರ ರೀನಾ, ನಂದೇಟಿರ ಕವಿತಾ, ಪಟ್ಟಮಾಡ ಲಲಿತಾ, ಚೋಳಪಂಡ ಜ್ಯೋತಿ, ಅರೆಯಡ ಸವಿತಾ, ಪಚ್ಚಾರಂಡ ಶಾಂತಿ, ಕಲಿಯಂಡ ಪ್ರಕಾಶ್, ಬಾಚರಣಿಯಂಡ ಚಿಪ್ಪಣ್ಣ, ಅಳ್ಮಂಡ ಜೈ, ಕಾಂಡೇರ ಸುರೇಶ್, ಅಪ್ಪಚ್ಚಿರ ರಮ್ಮಿ ನಾಣಯ್ಯ, ಅಜ್ಜಿಕುಟ್ಟೀರ ಲೋಕೇಶ್, ಕಿರಿಯಮಾಡ ಶೆರಿನ್, ಚಂಬಂಡ ಜನತ್, ಅರೆಯಡ ಗಿರೀಶ್, ನಂದೇಟಿರ ರವಿ ಸುಬ್ಬಯ್ಯ, ಮಂದಪಂಡ ಮನೋಜ್, ಮಂದಪಂಡ ಸೂರಜ್, ಪುಲ್ಲೇರ ಕಾಳಪ್ಪ, ಕಾಟುಮಣಿಯಂಡ ಉಮೇಶ್, ಬೇಪಡಿಯಂಡ ಬಿದ್ದಪ್ಪ, ಬೇಪಡಿಯಂಡ ದಿನು, ಮಣವಟ್ಟಿರ ಚಿಣ್ಣಪ್ಪ, ಮೇದುರ ಕಂಠಿ, ಕೂಪದಿರ ಸಾಬು, ಪಾರ್ವಂಗಡ ನವೀನ್, ನಂದಿನೆರವಂಡ ಅಪ್ಪಯ್ಯ, ಚೋಳಪಂಡ ನಾಣಯ್ಯ, ಪುಲ್ಲೇರ ಹರ್ಷ, ಪುಲ್ಲೇರ ಅಶ್ವಿತ್, ಮಂಡೀರ ನಂದಾ, ಐಲಪಂಡ ಮಿಟ್ಟು, ಪಾಲೆಕಂಡ ಪ್ರತಾಪ್, ಮೇದುರ ಕಂಠಿ, ಅಪ್ಪಾರಂಡ ಪ್ರಸಾದ್, ಜಮ್ಮಡ ಮೋಹನ್, ಮಂಡೀರ ನಂದಾ, ಕುಲ್ಲೇಟಿರ ಬೇಬಾ ಅರುಣ ಪುದಿಯೊಕ್ಕಡ ಪೃಥ್ವಿ, ಪುದಿಯೊಕ್ಕಡ ಕಾಶಿ, ಪಟ್ಟಮಾಡ ಪೃಥ್ವಿ, ತೋಲಂಡ ಸೋಮಯ್ಯ, ನೆಲ್ಲಿರ ಮಧು, ನಾಗವಂಡ ಕೃಪಾ, ಚೆಂಬಂಡ ಜಾಗೃತ್ ಬಿದ್ದಪ್ಪ, ಕೋಡಿರ ಉತಪ್ಪ, ಕುಂಡ್ಯೋಳಂಡ ರಮೇಶ್ ಮುದ್ದಯ್ಯ, ಮಾಚಿಮಂಡ ಗಪ್ಪಣ, ಕಳ್ಳಿರ ಉತ್ಸವ್ ಮತ್ತಿತರರು ಪಾಲ್ಗೊಂಡು ಸಿಎನ್‍ಸಿ ಯ ಬೇಡಿಕೆಗಳ ಪರ ಪ್ರತಿಜ್ಞಾ ವಿಧಿ ಸ್ವೀಕರಿಸಿದರು. ಫೋಟೋ :: ಸಿಎನ್‍ಸಿ

 

 

Follow us Follow us
Share. WhatsApp Facebook Twitter Email Telegram Copy Link

Website design development company services in Mangalore

Forex Trading Teacher in India

Related Posts

*ಹಾಕಿ ಕ್ರೀಡೆಗೆ ಕೇಂದ್ರ ಸರಕಾರದಿಂದ ಪ್ರೋತ್ಸಾಹ, ಇದು ಕೊಡುಗೆಯಲ್ಲ, ಸರಕಾರದ ಜವಾಬ್ದಾರಿ : ಕೇಂದ್ರ ಸಚಿವ ಮನ್ ಸುಖ್ ಮಾಂಡವಿಯಾ ಭರವಸೆ*

ಮೇ 2, 2026

*ಹಸ್ತಪ್ರತಿಗಳನ್ನು ಕಾಪಾಡುವುದು ಮತ್ತು ಉಳಿಸುವುದು ನಮ್ಮ ಕರ್ತವ್ಯ :

ಮೇ 2, 2026

*ಕೊಡಗು ಜಿಲ್ಲೆಗೆ ಕ್ರೀಡೆಯಲ್ಲಿ ಲಭಿಸಿದ ಕೀರ್ತಿ ದೇಶದ ಯಾವ ಜಿಲ್ಲೆಗಳಿಗೆ ಲಭಿಸಲಿಲ್ಲ* 

ಮೇ 2, 2026

*ಹಸ್ತಪ್ರತಿಗಳನ್ನು ಕಾಪಾಡುವುದು ಮತ್ತು ಉಳಿಸುವುದು ನಮ್ಮ ಕರ್ತವ್ಯ :

ಮೇ 2, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಮಡಿಕೇರಿ NEWS DESK ಮೇ 2 : ಜ್ಞಾನ ಭಾರತಂ ಮಿಷನ್ ಯೋಜನೆಯಡಿ ಹಸ್ತ ಪ್ರತಿಗಳ ಸಂರಕ್ಷಣೆ ಮತ್ತು ಡಿಜಿಟಲೀಕರಣ…

*ಕೊಡಗು ಜಿಲ್ಲೆಗೆ ಕ್ರೀಡೆಯಲ್ಲಿ ಲಭಿಸಿದ ಕೀರ್ತಿ ದೇಶದ ಯಾವ ಜಿಲ್ಲೆಗಳಿಗೆ ಲಭಿಸಲಿಲ್ಲ* 

ಮೇ 2, 2026

*ಮಾನವೀಯ ಮೌಲ್ಯಗಳ ಪ್ರತಿರೂಪ ಬುದ್ಧ : ಬರಹ : ಗೀತಾಂಜಲಿ ಎನ್.ಎಮ್ ಸೋಮವಾರಪೇಟೆ*

ಮೇ 1, 2026

*ಕಡಂಗಮೂರೂರಿನಲ್ಲಿ ಮೇ 5 ರಂದು ದೈವಗಳ ನೇಮೋತ್ಸವ* 

ಮೇ 1, 2026

*ಮೇ 3 ರಂದು ವಾಂಡರರ್ಸ್ ಬೇಸಿಗೆ ಶಿಬಿರ ಸಮಾರೋಪ*

ಮೇ 1, 2026

*ಕೊಡಗು : ಶಾಂತಿಯುತ ಮತ್ತು ಸಮಾನತೆಯ ಸಮಾಜ ನಿರ್ಮಾಣಕ್ಕೆ ಭಗವಾನ್ ಬುದ್ಧನ ಸಂದೇಶಗಳು ಮಾರ್ಗದರ್ಶಿ : ಉಪವಿಭಾಗಾಧಿಕಾರಿ ನಿತಿನ್ ಚಿಕ್ಕಿ*

ಮೇ 1, 2026

*ಒಲಂಪಿಯನ್ ಎ.ಬಿ.ಸುಬ್ಬಯ್ಯ ನಿವಾಸಕ್ಕೆ ಶಾಸಕ ಎ.ಎಸ್.ಪೊನ್ನಣ್ಣ ಭೇಟಿ : ಕುಟುಂಬಕ್ಕೆ ಸಾಂತ್ವನ*

ಮೇ 1, 2026

*ಕಡಂಗಮರೂರು ಶ್ರೀ ಭದ್ರಕಾಳಿ ಹಾಗೂ ಶ್ರೀ ಮಹಾವಿಷ್ಣು ದೇವಾಲಯಕ್ಕೆ ಶಾಸಕ ಎ.ಎಸ್.ಪೊನ್ನಣ್ಣ ಭೇಟಿ : ನೂತನ ರಸ್ತೆ ಉದ್ಘಾಟನೆ *

ಮೇ 1, 2026

*ಗೋಣಿಕೊಪ್ಪ : ಶ್ರೀ ಮಹಿಷಾಸುರ ಮರ್ದಿನಿ ದೇವಾಲಯದ ನವೀಕೃತ ಪೌಳಿ ಉದ್ಘಾಟನೆ*

ಮೇ 1, 2026

*ಮೇ 3 ರಿಂದ ಶ್ರೀ ಕಂಚಿಕಾಮಾಕ್ಷಿಯಮ್ಮ ದೇವಾಲಯದಲ್ಲಿ ಶ್ರೀ ಮಾರಿಯಮ್ಮ ಕರಗೋತ್ಸವ*

ಮೇ 1, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.

Ad Blocker Enabled!
Ad Blocker Enabled!
Our website is made possible by displaying online advertisements to our visitors. Please support us by disabling your Ad Blocker.