
ಮಡಿಕೇರಿ ಸೆ.3 NEWS DESK : ಅಮ್ಮತಿಯಲ್ಲಿ ನಡೆದ ವಲಯ ಮಟ್ಟದ ಅಥ್ಲೆಟಿಕ್ಸ್ ಪಂದ್ಯಾವಳಿಯ ವಿವಿಧ ಆಟೋಟಗಳಲ್ಲಿ ವಿರಾಜಪೇಟೆಯ ಕಾವೇರಿ ಶಾಲೆಯ ಪ್ರಾಥಮಿಕ ವಿಭಾಗದ ವಿದ್ಯಾರ್ಥಿಗಳು ಸ್ಪರ್ಧಿಸಿ ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. 400 ಮೀ ಓಟದ ಸ್ಪರ್ಧೆಯಲ್ಲಿ ಏಳನೇ ತರಗತಿಯ ವಿದ್ಯಾರ್ಥಿನಿ ನಡುಮನೆ ಮೋಕ್ಷಿತ ಚಿನ್ನದ ಪದಕ, 200 ಮೀ ಓಟದ ಸ್ಪರ್ಧೆಯಲ್ಲಿ ಪಾಲೆಯಂಡ ಶಾನ್ವಿ ಪೊನ್ನಮ್ಮ ಚಿನ್ನದ ಪದಕ, 600 ಮೀ ಓಟದ ಸ್ಪರ್ಧೆಯಲ್ಲಿ 7ನೇ ತರಗತಿ ಹಿತಾರ್ಥ ಬೆಳ್ಳಿಪದಕ, 400 ಮೀ ಓಟದ ಸ್ಪರ್ಧೆಯಲ್ಲಿ ಪುಗ್ಗೆರ ಗದಿನ್ ಬೋಪಣ್ಣ ಕಂಚಿನ ಪದಕ, 100 ಮೀಟರ್ ಹಾಗೂ 200 ಮೀ ಓಟದ ಸ್ಪರ್ಧೆಯಲ್ಲಿ 7ನೇ ತರಗತಿಯ ಮಾಲೆಟ್ಟಿರ ಚಾಲ್ಸಿ ಬೆಳ್ಳಿ ಪದಕ, 4100ಮೀ ರಿಲೇ ಪಂದ್ಯಾಟದಲ್ಲಿ ಮಾಲೆಟ್ಟಿರ ಚಾಲ್ಸಿ, ನಡುಮನೆ ಮೋಕ್ಷಿತ, ಪಾಲೆಯಂಡ ಶಾನ್ವಿ, ಹರ್ಷಿನಿ ವಿ ಯಾದವ್ ಒಳಗೊಂಡ ತಂಡ ಚಿನ್ನದ ಪದಕ ಗೆದ್ದುಕೊಂಡಿದ್ದಾರೆ. ಶಾಲಾ ದೈಹಿಕ ಶಿಕ್ಷಕಿಯರುಗಳಾದ ಮೋನಿಕಾ ಹಾಗೂ ಲಾವಣ್ಯ ಮಾರ್ಗದರ್ಶನವನ್ನು ನೀಡಿರುತ್ತಾರೆ. ಇವರ ಈ ಸಾಧನೆಗೆ ಶಾಲಾ ಆಡಳಿತ ಮಂಡಳಿಯವರು, ಮುಖ್ಯ ಶಿಕ್ಷಕಿ, ಸಂಯೋಜಕಿ, ಬೋದಕ ಬೋದಕೇತರ ವೃಂದದವರು ಹಾಗೂ ಪೋಷಕರು ಮೆಚ್ಚುಗೆ ವ್ಯಕ್ತಪಡಿಸಿರುತ್ತಾರೆ.








