

ಮಡಿಕೇರಿ ಸೆ.3 NEWS DESK : ನಗರದ ಕೊಡಗು ವಿದ್ಯಾಲಯದಲ್ಲಿ ಗಣೇಶನ ಪೂಜೆಯನ್ನು ಸಂಭ್ರಮದಿಂದ ಆಚರಿಸಲಾಯಿತು. 6ನೇ ತರಗತಿಯ ವಿದ್ಯಾರ್ಥಿಗಳು ತಯಾರಿಸಿದ್ದ ವಿವಿಧ ಗಾತ್ರಗಳಲ್ಲಿನ ಗಣೇಶ ಮೂತಿ೯ಗಳು ಹೂವು ಮತ್ತು ದೀಪಾಲಂಕಾರದ ಮಧ್ಯೆ ವೇದಿಕೆಯ ಮುಂಭಾಗದಲ್ಲಿ ಕಂಗೊಳಿಸಿದ್ದವು. ಶಾಲಾ ಪ್ರಾಂಶುಪಾಲರಾದ ಸುಮಿತ್ರ ಕೆ.ಎಸ್., ಆಡಳಿತಾಧಿಕಾರಿ ರವಿ ಪಿ., ಸಂಯೋಜಕ ಕೆ.ಎಸ್.ಸುಮಂತ್ ಹಾಗೂ ತರಗತಿ ಶಿಕ್ಷಕಿಯರಾದ ಸಂಶ್ರುತಿ ಮತ್ತು ಪೊನ್ನಮ್ಮ ದೀಪ ಪ್ರಜ್ವಲನೆ ಮಾಡಿದರು. ಗಣೇಶನು ಹೇಗೆ ಆನೆಯ ತಲೆಯೊಂದಿಗೆ ಪ್ರಸಿದ್ಧನಾದನೆಂಬ ಕಥೆಯನ್ನು ವಿದ್ಯಾರ್ಥಿಗಳು ನೃತ್ಯ-ನಾಟಕದ ಮೂಲಕ ಮನೋಜ್ಞವಾಗಿ ಪ್ರದರ್ಶಿಸಿದರು. ಭಕ್ತಿ ಗೀತೆಗಳಿಗೆ ಆಧಾರಿತ ನೃತ್ಯ ಮತ್ತು ಭಜನೆಗಳು ಎಲ್ಲರ ಮನಸ್ಸನ್ನು ಸೆಳೆದವು. ಶಿಕ್ಷಕ ವೖಂದದವರೂ “ಗಣೇಶ ನಾಮಾವಳಿ ” ಪ್ರಸ್ತುತಪಡಿಸಿದರು. ಮನೀಷ್ ರೈ ಮತ್ತು ಆನ್ಯಾ ನಂಜಪ್ಪ ಕಾರ್ಯಕ್ರಮ ನಿರೂಪಿಸಿದರು. ಮೊಹಮದ್ ಶಾಜ್ ಸ್ವಾಗತಿಸಿ, ವಿರಾಟ್ ಮುತ್ತಪ್ಪ ಗಣೇಶ ಚತುರ್ಥಿಯ ಮಹತ್ವದ ಬಗ್ಗೆ ತಿಳಿಸಿದರು. ಹೃಧಾನ್ ಮುತ್ತಣ್ಣ ವಂದಿಸಿದ ಕಾರ್ಯಕ್ರಮದ ಅಂತ್ಯದಲ್ಲಿ ಶಾಲಾ ಪ್ರಾಂಶುಪಾಲರಾದ ಕೆ.ಎಸ್ ಸುಮಿತ್ರಾ, ವಿದ್ಯಾರ್ಥಿಗಳಿಗೆ ಪ್ರೇರಣಾದಾಯಕ ಸಂದೇಶ ನೀಡಿ, ಈ ದಿನವು ನಂಬಿಕೆ, ಸೃಜನಶೀಲತೆ ಮತ್ತು ಒಗ್ಗಟ್ಟಿನ ನಿಜವಾದ ಪ್ರತೀಕವಾಗಿದೆ ಎಂದು ಹೆಮ್ಮೆ ವ್ಯಕ್ತಪಡಿಸಿದರು. ಭಕ್ತಿ ಭಾವದಿಂದ ವಿದ್ಯಾಥಿ೯ಗಳು ಗಣೇಶ ವಿಸರ್ಜನೆ ನೆರವೇರಿಸಿದರು.









