
ಗೋಣಿಕೊಪ್ಪ ಸೆ.5 NEWS DESK : ಅಮ್ಮಕೊಡವ ಸಮಾಜದ ತುರ್ತು ಸಭೆಯು ಸೆ.12 ರಂದು ನಡೆಯಲಿದೆ ಎಂದು ಅಧ್ಯಕ್ಷ ಬಾನಂಡ ಪ್ರಥ್ಯು ತಿಳಿಸಿದ್ದರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು ಅಂದು ಪೂರ್ವಾಹ್ನ 11 ಗಂಟೆಗೆ ಕಾವೇರಿ ಹಿಲ್ಸ್ ಬಡಾವಣೆಯ ಅಮ್ಮಕೊಡವ ಸಭಾಂಗಣದಲ್ಲಿ ತುರ್ತು ಮಹಾಸಭೆಯನ್ನು ಕರೆಯಲಾಗಿದ್ದು, ಸದಸ್ಯರುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಲಹೆ ಸೂಚನೆಗಳನ್ನು ನೀಡಬೇಕೆಂದು ಮನವಿ ಮಾಡಿದ್ದಾರೆ.








