ಮಡಿಕೇರಿ ಸೆ.10 NEWS DESK : ತಮಿಳುನಾಡಿನಲ್ಲಿ ನಡೆದ ಆನ್ ಲೈನ್ ವರ್ಲ್ಡ್ ರೆಕಾರ್ಡ್ ಡ್ಯಾನ್ಸ್ ಇವೆಂಟ್ 2025 ರಲ್ಲಿ ಮಡಿಕೇರಿಯ ವಿಂಗ್ಸ್ ಆಫ್ ಪ್ಯಾಷನ್ ನೃತ್ಯ ಶಾಲೆಯ ವಿದ್ಯಾರ್ಥಿನಿ ಹೆಚ್.ಬಿ.ವರ್ಷ ಪಾಲ್ಗೊಂಡು ಪದಕ ಮತ್ತು ಪ್ರಮಾಣ ಪತ್ರ ಪಡೆದಿದ್ದಾಳೆ. ಈ ಕಾರ್ಯಕ್ರಮ ಆರೋಗ್ಯಕರ ಮತ್ತು ಮಾದಕ ದ್ರವ್ಯ ಮುಕ್ತ ಸಮಾಜವನ್ನು ಉತ್ತೇಜಿಸುವ ಭಾಗವಾಗಿ ನಡೆಯಿತು. ಹೆಚ್.ಬಿ.ವರ್ಷ ಗೆ ವಿಂಗ್ಸ್ ಆಫ್ ಪ್ಯಾಷನ್ ನೃತ್ಯ ಶಾಲೆಯ ಸಂಸ್ಥಾಪಕರು ಹಾಗೂ ನೃತ್ಯ ಸಂಯೋಜಕಿ ಪ್ರೀತ ಕೃಷ್ಣ ಅವರು ಮಾರ್ಗದರ್ಶನ ನೀಡಿದರು.











