ಸುಂಟಿಕೊಪ್ಪ ಸೆ.11 NEWS DESK : ಕಾನ್‍ಬೈಲ್ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಥ್ರೋಬಾಲ್ ವಿಭಾಗದಲ್ಲಿ ಜಿಲ್ಲಾ ಮಟ್ಟಕ್ಕೆ ಆಯ್ಕೆಗೊಂಡಿದ್ದಾರೆ. ಕುಶಾಲನಗರದ ಬಾಲಕಿಯರ ಪ್ರೌಢಶಾಲೆಯಲ್ಲಿ ಅಯೋಜನೆಗೊಂಡಿದ್ದ ತಾಲೂಕು ಮಟ್ಟದ ಪ್ರೌಢಶಾಲಾ ವಿಭಾಗದ ಥ್ರೋಬಾಲ್ ಪಂದ್ಯಾವಳಿಯಲ್ಲಿ ಗೆಲುವು ಸಾಧಿಸುವ ಮೂಲಕ ಜಿಲ್ಲಾ ಮಟ್ಟಕ್ಕೆ ಆಯ್ಕೆಗೊಂಡಿದ್ದಾರೆ. ಶಾಲೆಯ ವಿದ್ಯಾರ್ಥಿ ಜೀವಿತ್ ವಲಯಮಟ್ಟದ ಕ್ರೀಡಾಕೂಟದ ಉದ್ದಜಿಗಿತ (ಲಾಂಗ್ ಜಂಪ್), ಎತ್ತರ ಜಿಗಿತ (ಹೈಜಂಪ್), ಭಾರದ ಗುಂಡು ಎಸೆತದಲ್ಲಿ ತೃತೀಯ ಸ್ಥಾನ ಪಡೆದುಕೊಂಡಿದ್ದಾನೆ. ದೀಕ್ಷಿತ್ ಹೈ ಜಂಪ್ ವಿಭಾಗದಲ್ಲಿ ತೃತೀಯ ಸ್ಥಾನ ಪಡೆದುಕೊಳ್ಳುವ ಮೂಲಕ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದ್ದಾನೆ. ವಿದ್ಯಾರ್ಥಿಗಳ ಸಾಧನೆಗೆ ಶಾಲಾ ಮುಖ್ಯೋಪಾದ್ಯಾಯರಾದ ಕೆ.ಮೂರ್ತಿ, ದೈಹಿಕ ಶಿಕ್ಷಣ ಶಿಕ್ಷಕಿ ಜಿ.ಕೆ.ಪಾರ್ವತಿ, ಸಹಶಿಕ್ಷಕರಾದ ಎನ್.ಕೆ.ಮಾಲಾದೇವಿ, ಕೆ.ಜೆ.ಮಹೇಶ್, ಸುಮಿತ್ರ, ಸುಜಾತ ಹಾಗೂ ಫಾತೀಮಾ ಅಭಿನಂದಿಸಿದ್ದಾರೆ.










