


ಸೋಮವಾರಪೇಟೆ ಸೆ.12 NEWS DESK : ಸೋಮವಾರಪೇಟೆ ತುಳುನಾಡು ಬಿಲ್ಲವ ಮಹಿಳಾ ಸಂಘದ ಸಂಯುಕ್ತ ಆಶ್ರಯದಲ್ಲಿ ಸೆ.14 ರಂದು ಹತ್ತನೇ ವರ್ಷದ ಆಟಿ ಸಂಭ್ರಮೋತ್ಸವ ಹಾಗೂ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ವಿತರಣಾ ಕಾರ್ಯಕ್ರಮ ನಡೆಯಲಿದೆ. ಸೋಮವಾರಪೇಟೆ ಮಾನಸ ಹಾಲ್ ಸಭಾಂಗದಲ್ಲಿ ಬೆಳಗ್ಗೆ 8 ಗಂಟೆಗೆ ಬಿಲ್ಲವ ಸೇವಾ ಸಮಿತಿ ಕುಟುಂಬದವರಿಗೆ ಆಯೋಜಿಸಲಾದ ವಿವಿಧ ಕ್ರೀಡಾಕೂಟವನ್ನು ಶ್ರೀ ನಾರಾಯಣ ಗುರು ಸೇವಾ ಸಮಿತಿ ಸದಸ್ಯರು ಉದ್ಘಾಟನೆ ಮಾಡಲಿದ್ದಾರೆ. ಮಧ್ಯಾಹ್ನ 2 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದೆ. ಕಾರ್ಯಕ್ರಮವನ್ನು ರಾಜ್ಯ ವಿಧಾನ ಪರಿಷತ್ ಸದಸ್ಯರಾದ ಬಿ. ಕೆ ಹರಿಪ್ರಸಾದ್ ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು ಸೋಮವಾರಪೇಟೆ ತಾಲ್ಲೂಕು ಶ್ರೀ ನಾರಾಯಣ ಗುರು ಸೇವಾ ಸಮಿತಿ ಅಧ್ಯಕ್ಷ ಬಿ.ಆರ್.ಚಂದ್ರಹಾಸ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮಡಿಕೇರಿ ಶಾಸಕ ಮಂತರ್ ಗೌಡ, ಕುದ್ರೋಳಿ ದೇವಾಲಯದ ಕೋಶಾಧಿಕಾರಿ ಪದ್ಮರಾಜ್ ಪೂಜಾರಿ, ಮಾಜಿ ಸಚಿವ ಅಪ್ಪಚ್ಚು ರಂಜನ್, ಕೊಡಗು ಜಿಲ್ಲಾ ಬಿಲ್ಲವ ಸಂಘದ ಅಧ್ಯಕ್ಷ ಲಿಂಗಪ್ಪ ಪೂಜಾರಿ, ಪ್ರವಾಸಿ ಹಾಗೂ ಸಾಮಾಜಿಕ ಕಾರ್ಯಕರ್ತ ಪದ್ಮನಾಭ, ಡಿ ವೈ ಎಸ್ ಪಿ ಮಹೇಶ್ ಕುಮಾರ್, ಮುಖ್ಯ ಭಾಷಣ ಕಾರರಾಗಿ ರಾಜ್ಯ ನಾರಾಯಣ ಗುರು ವಿಚಾರಣ ವೇದಿಕೆ ಅಧ್ಯಕ್ಷರಾದ ಸತ್ಯಜಿತ್ ಸುರತ್ಕಲ್ ಆಗಮಿಸಲಿದ್ದಾರೆ. ಕಾರ್ಯಕ್ರಮದ ವೇದಿಕೆಯಲ್ಲಿ ಸೋಮವಾರಪೇಟೆ ನಾರಾಯಣ ಗುರು ಸೇವಾ ಸಮಿತಿ ಗೌರವ ಅಧ್ಯಕ್ಷ ಲಕ್ಷ್ಮಣ್ ಪೂಜಾರಿ, ಗೌರವ ಸಲಹೆಗಾರ ಬಿ. ಎ. ಭಾಸ್ಕರ್, ಜನಕ್ಕಿ ಕನ್ವೆನ್ ಷನ್ ಹಾಲ್ ಮಾಲೀಕರಾದ ಬಿ. ಎಸ್. ಸುಂದರ್, ಸಫಾಲಿ ಬಾರ್ ಮತ್ತು ಪ್ಯಾಮಿಲಿ ರೆಸ್ಟೋರೆಂಟ್ ಮಾಲೀಕರಾದ ಬಿ.ಎಸ್.ಶ್ರೀಧರ್, ಅಲೋಕ ಬಾರ್ ಮತ್ತು ಪ್ಯಾಮಿಲಿ ರೆಸ್ಟೋರೆಂಟ್ ಮಾಲೀಕರಾದ ಕಾರ್ತಿಕ್ ಸದಾನಂದ್, ಡಿಸೈನ್ ಇಂಜಿನಿಯರ್ ಮಂಜುನಾಥ್, ತುಳುನಾಡ ಬಿಲ್ಲವ ಮಹಿಳಾ ಸಂಘದ ತಾಲೂಕು ಅಧ್ಯಕ್ಷೆ ಬೇಬಿ ಚಂದ್ರಹಾಸ, ಮೂಡಬಿದ್ರೆ ಆಳ್ವಾಸ್ ಕಾಲೇಜು ಉಪನ್ಯಾಸಕರಾದ ತೇಜಸ್, ಮೋಹನ್, ಕೊಡಗು ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ವಿ.ಎಂ.ವಿಜಯ್, ಬಿಲ್ಲವ ಸೇವಾ ಸಂಘದ ಮಡಿಕೇರಿ ತಾಲೂಕು ಅಧ್ಯಕ್ಷೆ ಲೀಲಾವತಿ, ವಿರಾಜಪೇಟೆ ತಾಲೂಕು ಬಿಲ್ಲವ ಸೇವಾ ಸಮಿತಿ ಅಧ್ಯಕ್ಷ ಗಣೇಶ್, ಕುಶಾಲನಗರ ತಾಲೂಕು ಕೋಟಿ ಚೆನ್ನಯ್ಯ ಬಿಲ್ಲವ ಸಮಾಜ ಅಧ್ಯಕ್ಷ ಸುಧೀರ್, ಸುಂಟಿಕೊಪ್ಪ ಬಿಲ್ಲವ ಸೇವಾ ಸಮಾಜ ಅಧ್ಯಕ್ಷ ಮಣಿ ಮುಖೇಶ್, ನಾಪೋಕ್ಲು ಬಿಲ್ಲವ ಸಂಘದ ಅಧ್ಯಕ್ಷ ಪ್ರದೀಪ್, ಸೋಮವಾರಪೇಟೆ ಪ್ರೇಮ್ ಟ್ರೇದರ್ಸ್ ನ ಬಿ. ಎಸ್ ಕಿರಣ್ ಮುಂತಾದವರು ಪಾಲ್ಗೊಳ್ಳಲಿದ್ದಾರೆ. ಸಮಾಜ ಬಾಂಧವರಿಗೆ ಮನರಂಜನೆ ಹಾಗೂ ಕ್ರೀಡಾಕೂಟ ಏರ್ಪಡಿಸಲಾಗಿದೆ ಎಂದು ಸೋಮವಾರಪೇಟೆ ತಾಲೂಕು ಬಿಲ್ಲವ ಸೇವಾ ಸಮಿತಿ ಹಾಗೂ ತುಳುನಾಡ ಬಿಲ್ಲವ ಸಂಘ ಸೋಮವಾರಪೇಟೆ ತಿಳಿಸಿದ್ದಾರೆ.









