Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ಏ.10 ರಿಂದ ಕೊಡವ ಲೆದರ್ ಬಾಲ್ ಕ್ರಿಕೆಟ್ ಲೀಗ್ ಮೂರನೇ ಆವೃತ್ತಿ ಆರಂಭ*
  • *ಸುಂಟಿಕೊಪ್ಪದಲ್ಲಿ ಶಾಂತಿ ಸಭೆ : ಸೌಹಾರ್ದತೆಯನ್ನು ಕಾಪಾಡಿಕೊಳ್ಳಲು ದಿನೇಶ್‍ಕುಮಾರ್ ಕರೆ*
  • *ಸೋಮವಾರಪೇಟೆ : ಕಾರ್ಮಿಕರಿಗೆ ಪೂರ್ವಭಾವಿ ಕಲಿಕಾ ತರಬೇತಿ ಕಾರ್ಯಾಗಾರ*
  • *ಯಡೂರಿನಲ್ಲಿ ವೈಸಿಸಿ ಕ್ರಿಕೆಟ್ ಕಪ್ ಪಂದ್ಯಾವಳಿ : ಗರಗಂದೂರಿನ ದಳಪತಿ ಕ್ರಿಕೆಟರ್ಸ್ ತಂಡ ಚಾಂಪಿಯನ್*
  • *ಕೂಡಿಗೆ ಪರೀಕ್ಷಾ ಕೇಂದ್ರದಲ್ಲಿ ಸುಗಮವಾಗಿ ನಡೆದ ಎಸ್‍ಎಸ್‍ಎಲ್‍ಸಿ ಪರೀಕ್ಷೆ* 
  • *ಪ್ರಸಿದ್ಧ ಎಮ್ಮೆಮಾಡು ಉರೂಸ್ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿಗಳಿಗೆ ಆಹ್ವಾನ*
  • *ಕೊಡಗು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ನವೀಕರಣ ಕಟ್ಟಡ ಉದ್ಘಾಟನೆ : ಗ್ರಾಹಕರ ಹಿತರಕ್ಷಿಸುವಲ್ಲಿ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಹಲವು ಕ್ರಮ : ನ್ಯಾಯಮೂರ್ತಿ ಟಿ.ಜಿ.ಶಿವಶಂಕರೇಗೌಡ*
  • *ಮಾ.21 ರಂದು ಸಿಎನ್‌ಸಿಯಿಂದ “ವಿಚಾರ ಸಂಕಿರಣ” : ಡಾ.ಎಲ್.ಹನುಮಂತಯ್ಯ, ಕೆ.ಪಿ.ಬಾಲಸುಬ್ರಹ್ಮಣ್ಯ, ಎಂ.ಟಿ.ನಾಣಯ್ಯ, ರೇವತಿ ಪೂವಯ್ಯರಿಂದ ವಿಚಾರ ಮಂಡನೆ*
  • *ಜಮೀನು ತೆರವು ಕಾರ್ಯಾಚರಣೆ : ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಮಸಗೋಡು ಗ್ರಾಮಸ್ಥರ ಅಸಮಾಧಾನ*
  • *ಎಸ್‌ಎಸ್‌ಎಲ್‌ಸಿ ಪರೀಕ್ಷೆ ಇಂದಿನಿಂದ ಶುರು: 8.65 ಲಕ್ಷ ವಿದ್ಯಾರ್ಥಿಗಳಿಗೆ ಅಗ್ನಿಪರೀಕ್ಷೆ; ಪರೀಕ್ಷಾ ಕೇಂದ್ರಗಳ ಸುತ್ತ 144 ನಿಷೇಧಾಜ್ಞೆ ಜಾರಿ!*
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»*ಸೆ.21 ರಂದು ‘ಕರುನಾಡು ಗಾಟ್ ಟ್ಯಾಲೆಂಟ್ ಸೆಷನ್-ಸೀಸನ್-2’ ಆಡಿಷನ್*
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

*ಸೆ.21 ರಂದು ‘ಕರುನಾಡು ಗಾಟ್ ಟ್ಯಾಲೆಂಟ್ ಸೆಷನ್-ಸೀಸನ್-2’ ಆಡಿಷನ್*

ಸೆಪ್ಟೆಂಬರ್ 15, 20252 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link

ಮಡಿಕೇರಿ ಸೆ.15 NEWS DESK : ಕನ್ನಡ ನಾಡಿನ ಪ್ರತಿಭಾವಂತರನ್ನು ಗುರುತಿಸಿ ಪ್ರೋತ್ಸಾಹಿಸುವ ಪ್ರಯತ್ನಗಳ ಹಿನ್ನೆಲೆಯಲ್ಲಿ ಸೆ.21 ರಂದು ಮಡಿಕೇರಿಯಲ್ಲಿ ‘ಕರುನಾಡು ಗಾಟ್ ಟ್ಯಾಲೆಂಟ್ ಸೆಷನ್-ಸೀಸನ್-2’ ಆಡಿಷನ್ ಆಯೋಜಿತವಾಗಿದೆಯೆಂದು ಕಾರ್ಯಕ್ರಮದ ಸಹಾಯಕ ನಿರ್ದೇಶಕರಾದ ಪಿ.ಎನ್.ದಿನೇಶ್ ಮಾಹಿತಿ ನೀಡಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ಈವೆಂಟ್ ಕ್ಯುರೇಟರ್‍ಗಳಾದ ಕಿಂಬರ್ಲಿ ಕೂರ್ಗ್ ಸಹಯೋಗದಲ್ಲಿ, ನಗರದ ರಾಜಾಸೀಟ್ ರಸ್ತೆಯಲ್ಲಿನ ಹೋಟೆಲ್ ನ್ಯೂ ರಾಜದರ್ಶನ್‍ನಲ್ಲಿ ಸೂಚಿತ ದಿನದಂದು ಬೆಳಗ್ಗೆ 9 ರಿಂದ ಸಂಜೆ 4 ಗಂಟೆಯವರೆಗೆ ಆಡಿಷನ್ ಆಯೋಜಿತವಾಗಿದೆ. ಆಸಕ್ತರು ಅಂದು ಬೆಳಗ್ಗೆ ತಮ್ಮ ಪ್ರದರ್ಶನಕ್ಕೆ ಅಗತ್ಯವಾದ ಸಲಕರಣೆಗಳೊಂದಿಗೆ, ನಿಗದಿತ ಶುಲ್ಕ ಪಾವತಿಸಿ ಪಾಲ್ಗೊಳ್ಳಲು ಅವಕಾಶವನ್ನು ಕಲ್ಪಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಮೊ.6362250778, 9164831989ನ್ನು ಸಂಪರ್ಕಿಸಬಹುದೆಂದು ತಿಳಿಸಿದರು. ಆಡಿಷನ್‍ನಲ್ಲಿ ನೃತ್ಯ, ಹಾಡುಗಾರಿಕೆ, ಮಿಮಿಕ್ರಿ, ಯೋಗ, ಜಾದು, ನಾಟಕ, ಹಾಡುಗಾರಿಕೆ, ಸಂಗೀತ ವಾದ್ಯ, ಕಲೆ, ಸಾಹಿತ್ಯ ಮತ್ತು ಇನ್ನಿತರ ಯಾವುದೇ ಪ್ರಾಕಾರಗಳಲ್ಲಿನ ತಮ್ಮ ಪ್ರತಿಭೆಯನ್ನು ಪ್ರಸ್ತುತ ಪಡಿಸಲು ಅವಕಾಶವನ್ನು ಕಲ್ಪಿಸಲಾಗಿದೆ. ತೀರ್ಪುಗಾರರಾಗಿ ಸುಮಿತ್ ಅಮೀನ್, ಸುರಕ್ಷಾ ದಾಸ್, ಪ್ರವೀಣ್ ಜೈನ್ ಪಾಲ್ಗೊಳ್ಳಲಿದ್ದಾರೆಂದು ಮಾಹಿತಿ ನೀಡಿದರು. ಕನ್ನಡ ನಾಡಿನ ಪ್ರತಿಭೆಗಳ ಶೋಧಕ್ಕಾಗಿ ಈಗಾಗಲೆ ಕುಮಟಾ, ಕಾರ್ಕಳ, ಕುಂದಾಪುರ, ಶಿವಮೊಗ್ಗ, ಶಿರಸಿ, ಉಡುಪಿ, ಮೈಸೂರು, ಹುಬ್ಬಳ್ಳಿಯಲ್ಲಿ ಆಡಿಷನ್‍ಗಳನ್ನು ಮಾಡಲಾಗಿದೆ. ಇದೀಗ ಮಡಿಕೇರಿಯಲ್ಲಿ ಆಡಿಷನ್ ಆಯೋಜಿತವಾಗಿದ್ದು, ಇದರಲ್ಲಿ ರಾಜ್ಯದ ಯಾವುದೇ ಪ್ರದೇಶದಲ್ಲಿನ ಪ್ರತಿಭೆಗಳ ಪಾಲ್ಗೊಳ್ಳುವಿಕೆಗೆ ಅವಕಾಶವನ್ನು ಒದಗಿಸಲಾಗಿದೆ. ಮುಂದಿನ ಅಕ್ಟೋಬರ್‍ನಲ್ಲಿ ಬೆಂಗಳೂರು ಮತ್ತು ಮಂಗಳೂರಿನಲ್ಲು ಆಡಿಷನ್ ನಡೆಯಲಿದೆ. ಇದರೊಂದಿಗೆ ಆಯ್ಕೆಯಾದ ಪ್ರತಿಭೆಗಳ ನಡುವೆ ಕ್ವಾರ್ಟರ್ ಫೈನಲ್, ಸೆಮಿ ಫೈನಲ್ ಮತ್ತು ಫೈನಲ್ ಸ್ಪರ್ಧೆಯನ್ನು ಏರ್ಪಡಿಸಿ, ಮೊದಲ ವಿಜೇತರಿಗೆ 1.50ಲಕ್ಷ ನಗದು, ದ್ವಿತೀಯ ಸ್ಥಾನ ಪಡೆಯುವವರಿಗೆ 1 ಲಕ್ಷ ಮತ್ತು ತೃತೀಯ 50 ಸಾವಿರ ನಗದು ಬಹುಮಾನ ನೀಡಲಾಗುತ್ತದೆ. ವಿಜೇತರಿಗೆ ಗೋವಾ, ಬೆಂಗಳೂರು ಸೇರಿದಂತೆ ವಿವಿಧೆಡೆಗಳಲ್ಲಿ ಮೂರು ದಿನಗಳ ಕಾಲ ವಾಸ್ತವ್ಯ ಮಾಡಲು ಅವಕಾಶವನ್ನು ಒದಗಿಸಿಕೊಡಲಾಗುತ್ತದೆ. ನಂತರ ಈ ಒಟ್ಟು ಕಾರ್ಯಕ್ರಮದ 38 ಕಂತುಗಳನ್ನು ‘ಓಟಿಟಿ’ ವೇದಿಕೆಯ ಮೂಲಕ ಬಿಡಗಡೆಮಾಡಲಾಗುತ್ತದೆ ಎಂದರು. ಸುದ್ದಿಗೋಷ್ಠಿಯಲ್ಲಿ ಕಾರ್ಯಕ್ರಮದ ಸಹಾಯಕ ನಿರ್ದೇಶಕರಾದ ಸಚಿನ್ ವರ್ಗೀಸ್, ಕಿಂಬರ್ಲಿ ಸಂಸ್ಥೆಯ ಆರ್.ವೈಶಿತ ಮತ್ತು ಟಿ.ಟಿ.ಸಾನ್ವಿ ಉಪಸ್ಥಿತರಿದ್ದರು.

 

 

Follow us Follow us
Share. WhatsApp Facebook Twitter Email Telegram Copy Link

Website design development company services in Mangalore

Forex Trading Teacher in India

Related Posts

*ಏ.10 ರಿಂದ ಕೊಡವ ಲೆದರ್ ಬಾಲ್ ಕ್ರಿಕೆಟ್ ಲೀಗ್ ಮೂರನೇ ಆವೃತ್ತಿ ಆರಂಭ*

ಮಾರ್ಚ್ 18, 2026

*ಸುಂಟಿಕೊಪ್ಪದಲ್ಲಿ ಶಾಂತಿ ಸಭೆ : ಸೌಹಾರ್ದತೆಯನ್ನು ಕಾಪಾಡಿಕೊಳ್ಳಲು ದಿನೇಶ್‍ಕುಮಾರ್ ಕರೆ*

ಮಾರ್ಚ್ 18, 2026

*ಸೋಮವಾರಪೇಟೆ : ಕಾರ್ಮಿಕರಿಗೆ ಪೂರ್ವಭಾವಿ ಕಲಿಕಾ ತರಬೇತಿ ಕಾರ್ಯಾಗಾರ*

ಮಾರ್ಚ್ 18, 2026

*ಸುಂಟಿಕೊಪ್ಪದಲ್ಲಿ ಶಾಂತಿ ಸಭೆ : ಸೌಹಾರ್ದತೆಯನ್ನು ಕಾಪಾಡಿಕೊಳ್ಳಲು ದಿನೇಶ್‍ಕುಮಾರ್ ಕರೆ*

ಮಾರ್ಚ್ 18, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಸುಂಟಿಕೊಪ್ಪ ಮಾ.18 NEWS DESK : ಹಬ್ಬದ ದಿನದಂದು ಶಾಂತಿ, ಸಾಮರಸ್ಯ ಮತ್ತು ಸೌಹಾರ್ದತೆಯನ್ನು ಕಾಪಾಡಿಕೊಳ್ಳಲು ಕುಶಾಲನಗರ ವೃತ್ತ ನಿರೀಕ್ಷಕರಾದ…

*ಸೋಮವಾರಪೇಟೆ : ಕಾರ್ಮಿಕರಿಗೆ ಪೂರ್ವಭಾವಿ ಕಲಿಕಾ ತರಬೇತಿ ಕಾರ್ಯಾಗಾರ*

ಮಾರ್ಚ್ 18, 2026

*ಯಡೂರಿನಲ್ಲಿ ವೈಸಿಸಿ ಕ್ರಿಕೆಟ್ ಕಪ್ ಪಂದ್ಯಾವಳಿ : ಗರಗಂದೂರಿನ ದಳಪತಿ ಕ್ರಿಕೆಟರ್ಸ್ ತಂಡ ಚಾಂಪಿಯನ್*

ಮಾರ್ಚ್ 18, 2026

*ಕೂಡಿಗೆ ಪರೀಕ್ಷಾ ಕೇಂದ್ರದಲ್ಲಿ ಸುಗಮವಾಗಿ ನಡೆದ ಎಸ್‍ಎಸ್‍ಎಲ್‍ಸಿ ಪರೀಕ್ಷೆ* 

ಮಾರ್ಚ್ 18, 2026

*ಪ್ರಸಿದ್ಧ ಎಮ್ಮೆಮಾಡು ಉರೂಸ್ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿಗಳಿಗೆ ಆಹ್ವಾನ*

ಮಾರ್ಚ್ 18, 2026

*ಕೊಡಗು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ನವೀಕರಣ ಕಟ್ಟಡ ಉದ್ಘಾಟನೆ : ಗ್ರಾಹಕರ ಹಿತರಕ್ಷಿಸುವಲ್ಲಿ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಹಲವು ಕ್ರಮ : ನ್ಯಾಯಮೂರ್ತಿ ಟಿ.ಜಿ.ಶಿವಶಂಕರೇಗೌಡ*

ಮಾರ್ಚ್ 18, 2026

*ಮಾ.21 ರಂದು ಸಿಎನ್‌ಸಿಯಿಂದ “ವಿಚಾರ ಸಂಕಿರಣ” : ಡಾ.ಎಲ್.ಹನುಮಂತಯ್ಯ, ಕೆ.ಪಿ.ಬಾಲಸುಬ್ರಹ್ಮಣ್ಯ, ಎಂ.ಟಿ.ನಾಣಯ್ಯ, ರೇವತಿ ಪೂವಯ್ಯರಿಂದ ವಿಚಾರ ಮಂಡನೆ*

ಮಾರ್ಚ್ 18, 2026

*ಜಮೀನು ತೆರವು ಕಾರ್ಯಾಚರಣೆ : ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಮಸಗೋಡು ಗ್ರಾಮಸ್ಥರ ಅಸಮಾಧಾನ*

ಮಾರ್ಚ್ 18, 2026

*ಎಸ್‌ಎಸ್‌ಎಲ್‌ಸಿ ಪರೀಕ್ಷೆ ಇಂದಿನಿಂದ ಶುರು: 8.65 ಲಕ್ಷ ವಿದ್ಯಾರ್ಥಿಗಳಿಗೆ ಅಗ್ನಿಪರೀಕ್ಷೆ; ಪರೀಕ್ಷಾ ಕೇಂದ್ರಗಳ ಸುತ್ತ 144 ನಿಷೇಧಾಜ್ಞೆ ಜಾರಿ!*

ಮಾರ್ಚ್ 18, 2026

*ಕೊಡಗಿನಲ್ಲಿ ವನ್ಯಜೀವಿ ಉಪಟಳ : ಅರಣ್ಯ ಸಚಿವರಿಂದ ಮಹತ್ವದ ಸಭೆ : ಶಾಸಕದ್ವಯರು ಭಾಗಿ*

ಮಾರ್ಚ್ 18, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.

Ad Blocker Enabled!
Ad Blocker Enabled!
Our website is made possible by displaying online advertisements to our visitors. Please support us by disabling your Ad Blocker.