
ಸಿದ್ದಾಪುರ ಸೆ.16 NEWS DESK : ಹೈದರಾಬಾದ್ ನಲ್ಲಿ ನಡೆದ ರಾಷ್ಟ್ರ ಮಟ್ಟದ ಫ್ಲಾಗ್ ಫುಟ್ಬಾಲ್ ಚಾಂಪಿಯನ್ ಶಿಪ್ ಪಂದ್ಯಾವಳಿಯಲ್ಲಿ ಕರ್ನಾಟಕ ತಂಡದ ನಾಯಕಿಯಾಗಿ ಪ್ರತಿನಿದಿಸಿದ್ದ ಬಿ.ಎಂ.ದೀನಾ ಅಕ್ಟೋಬರ್ ನಲ್ಲಿ ಚೈನಾ ದೇಶದಲ್ಲಿ ನಡೆಯುವ ಅಂತರಾಷ್ಟ್ರೀಯ ಫುಟ್ಬಾಲ್ ಪಂದ್ಯಾವಳಿಗೆ ಆಯ್ಕೆಯಾಗಿದ್ದಾರೆ. ಹಲವು ವರ್ಷಗಳಿಂದಲೂ ವಿವಿಧ ಕ್ರೀಡಾಕೂಟಗಳಲ್ಲಿ ಭಾಗವಹಿಸಿ ಸಾಧನೆ ಮಾಡಿರುವ ದೀನಾ ತರಬೇತುದಾರರಾಗಿ ಹಾಗೂ ರಾಜ್ಯ ಮಟ್ಟದ ತಂಡಗಳ ನಾಯಕಿಯಾಗಿ ಗುರುತಿಸಿಕೊಂಡಿದ್ದಾರೆ. ದೀನಾ ರಾಜ್ಯ ಪ್ರಶಸ್ತಿ ವಿಜೇತೆ ಚನ್ನಯ್ಯನ ಕೋಟೆ ಸರ್ಕಾರಿ ಶಾಲಾ ಶಿಕ್ಷಕಿ ಬಿ.ಬಿ.ಜಾಜಿ ಹಾಗೂ ಅಂಚೆ ಕಚೇರಿ ಪೋಸ್ಟ್ ಮಾಸ್ಟರ್ ಮೋಹನ್ ಕುಮಾರ್ ದಂಪತಿಗಳ ಪುತ್ರಿ.










