
ಮಡಿಕೇರಿ ಸೆ.17 NEWS DESK : ಚಿಲಿಯ ಕೊರಾಲ್ಕೊದಲ್ಲಿ ನಡೆದ ಅಂತಾರಾಷ್ಟ್ರೀಯ ಕ್ರಾಸ್-ಕಂಟ್ರಿ ಸ್ಕೀಯಿಂಗ್ ಎಫ್‌ಐಎಸ್ ಚಾಂಪಿಯನ್‌ಶಿಪ್‌ನಲ್ಲಿ ಕೊಡಗಿನ ತೆಕ್ಕಡ ಭವಾನಿ ಕಂಚಿನ ಪದಕ ಗೆದ್ದು, ಐತಿಹಾಸಿಕ ಸಾಧನೆ ಮಾಡಿದ್ದಾರೆ. ಸ್ಕೀಯಿಂಗ್ ನಲ್ಲಿ ಈ ಸಾಧನೆ ಮಾಡಿದ ಭಾರತದ ಮೊದಲ ಮಹಿಳೆ ಎಂಬ ಕೀರ್ತಿಗೆ ತೆಕ್ಕಡ ಭವಾನಿ ಪಾತ್ರರಾಗಿದ್ದಾರೆ.










