
ಮಡಿಕೇರಿ ಸೆ.17 NEWS DESK : ರಾಜ್ಯದಲ್ಲಿ ಕನ್ನಡ ಅಭಿವೃದ್ಧಿ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ರಚನೆಗೊಂಡಿರುವ ಕನ್ನಡ ಜಾಗೃತಿ ಸಮಿತಿಯ ಕೊಡಗು ಜಿಲ್ಲಾ ಸದಸ್ಯರುಗಳನ್ನಾಗಿ ಕುಶಾಲನಗರದ ಬಿ.ಎಸ್.ಲೋಕೇಶ್ ಸಾಗರ್, ಪಾಲಿಬೆಟ್ಟದ ಡಾ.ಕಾವೇರಿ ಹೆಚ್.ಎಂ, ಮಡಿಕೇರಿಯ ಅಮೀನ್ ಮೊಹಿಸಿನ್, ಅರಮೇರಿ ಗ್ರಾಮದ ಡಾ.ರಾಧಿಕ ಕುಟ್ಟಪ್ಪ ಹಾಗೂ ವಿರಾಜಪೇಟೆಯ ಕೆ.ವಿ.ಸುನಿಲ್ ಕುಮಾರ್ ಅವರುಗಳನ್ನು ನೇಮಕ ಮಾಡಿ ಸರಕಾರ ಆದೇಶಿಸಿದೆ.









