

ಸುಂಟಿಕೊಪ್ಪ ಸೆ.1 NEWS DESK : ಸುಂಟಿಕೊಪ್ಪ ಸಂತ ಮೇರಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳ ಫುಟ್ಬಾಲ್ ತಂಡ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದೆ. ಗೋಣಿಕೊಪ್ಪದ ಕಾಪ್ಸ್ ಶಾಲಾ ಮೈದಾನದಲ್ಲಿ ನಡೆದ ಜಿಲ್ಲಾ ಮಟ್ಟದ ಪಂದ್ಯಾವಳಿಯಲ್ಲಿ ಪದವಿಪೂರ್ವ ಕಾಲೇಜುಗಳ ಫುಟ್ಬಾಲ್ ವಿಭಾಗದಲ್ಲಿ ಸಂತಮೇರಿ ಪದವಿ ಕಾಲೇಜು ಬಾಲಕರು ಜಯಗಳಿಸುವ ಮೂಲಕ ದಾವಣೆಗೆರೆಯಲ್ಲಿ ನಡೆಯಲಿರುವ ರಾಜ್ಯ ಮಟ್ಟದ ಫುಟ್ಬಾಲ್ ಪಂದ್ಯಾವಳಿಗೆ ಆಯ್ಕೆಯಾಗಿದ್ದಾರೆ. ಕಾಲೇಜಿನ ವ್ಯವಸ್ಥಾಪಕರಾದ ರೇ.ಫಾ.ವಿಜಯಕುಮಾರ್ ಹಾಗೂ ಪ್ರಾಚಾರ್ಯರಾದ ಆರ್.ಸೇಲ್ವರಾಜ್, ಬಾಲಕರ ತಂಡಕ್ಕೆ ಹಾಗೂ ತರಬೇತುದಾರ ದೈಹಿಕ ಶಿಕ್ಷಣ ಶಿಕ್ಷಕ ಸುನಿಲ್ ಅವರಿಗೆ ಶುಭಹಾರೈಸಿ ಬೀಳ್ಕೊಟ್ಟರು.








