
ಸೋಮವಾರಪೇಟೆ NEWS DESK ಸೆ.21 :ಸಂತ ಜೋಸೆಫರ ಪದವಿ ಕಾಲೇಜ್ ನ ವಿದ್ಯಾರ್ಥಿ ಸಂಘದ ಪದಗ್ರಹಣ ಸಮಾರಂಭ ವಿದ್ಯಾಸಂಸ್ಥೆಯ ಸಭಾಂಗಣದಲ್ಲಿ ನಡೆಯಿತು. ವಿದ್ಯಾಸಂಸ್ಥೆಯ ವ್ಯವಸ್ಥಾಪಕರಾದ ಅವಿನಾಶ್ ಮತ್ತು ಆರ್‌ಎಫ್‌ಒ ಶೈಲೇಂದ್ರ ಕುಮಾರ್ ಕಾರ್ಯಕ್ರಮ ಉದ್ಘಾಟಿಸಿದರು. ಮೈಸೂರು ಸಂತ ಜೋಸೆಫರ ನರ್ಸಿಂಗ್ ಕಾಲೇಜಿನ ವೈದ್ಯರಾದ ಡಿ.ಜಿ.ಮಮತ, ಕಾಲೇಜಿನ ಪ್ರಾಂಶುಪಾಲ ಬಿ.ಆರ್. ಹರೀಶ್, ದೇವಾಲಯ ಪಾಲಾನ ಸಮಿತಿ ಕಾರ್ಯದರ್ಶಿ ಶೀಲಾ ಡಿಸೋಜ, ಸದಸ್ಯರುಗಳಾದ ಶಾಂತಿ ಡಿಸಿಲ್ವಾ, ಜೋಸ್ಟಿನ್ ಡಿಸೋಜ ಇದ್ದರು. ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಎಸ್.ಪಿ.ನವನೀತ್, ಜಂಟಿ ಕಾರ್ಯದರ್ಶಿ ನಿರ್ಮಿತಾ, ಖಜಾಂಚಿ ಚೇತನ್, ಸಾಂಸ್ಕೃತಿಕ ಕಾರ್ಯದರ್ಶಿ ಚರಣ್, ಸಹ ಕಾರ್ಯದರ್ಶಿ ಸೃಜನಾ, ಕ್ರೀಡಾ ಕಾರ್ಯದರ್ಶಿ ಸೃಜನ್, ಸಹ ಕಾರ್ಯದರ್ಶಿ ಆಶಿತ, ಶಿಸ್ತು ನಾಯಕ ದೀಪಕ್, ನಾಯಕಿ ದೀಪ್ತಿ ಅವರುಗಳಿಗೆ ಅವಿನಾಶ್ ಪ್ರತಿಜ್ಞಾವಿಧಿ ಬೋಧಿಸಿದರು.








