
ನಾಪೋಕ್ಲು ಸೆ.22 NEWSDESK : ಎಮ್ಮೆಮಾಡು ಗ್ರಾಮದಲ್ಲಿರುವ ಇತಿಹಾಸ ಪ್ರಸಿದ್ಧ ಸೂಫೀ ಶಹೀದ್ ಅವರ ದರ್ಗಾಕ್ಕೆ ವಿಧಾನಸಭಾ ಸಭಾಪತಿ (ಸ್ಪೀಕರ್) ಯು.ಟಿ ಖಾದರ್ ಭೇಟಿ ನೀಡಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಎಮ್ಮೆಮಾಡುವಿನಲ್ಲಿ ಖಾಸಗಿ ಕಾರ್ಯಕ್ರಮಕ್ಕೆ ಆಗಮಿಸಿದ ಅವರು ಇಸ್ಲಾಂ ಮುಸ್ಲಿಂ ಜಮಾತ್ ಕಚೇರಿಗೆ ಭೇಟಿ ನೀಡಿದರು. ಈ ಸಂದರ್ಭ ಅವರನ್ನು ಜಮಾತ್ ಪರವಾಗಿ ಸನ್ಮಾನಿಸಿ ಗೌರವಿಸಲಾಯಿತು. ಜಮಾಯಿತಿನ ಪದಾಧಿಕಾರಿಗಳು, ಧರ್ಮ ಗುರುಗಳು, ಚುನಾಯಿತ ಪ್ರತಿನಿಧಿ ಗಣ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
ವರದಿ : ದುಗ್ಗಳ ಸದಾನಂದ.








