
ಮಡಿಕೇರಿ ಸೆ.23 NEWS DESK : ಪೊನ್ನಂಪೇಟೆ ತಾಲ್ಲೂಕಿನ ಹುದಿಕೇರಿಯಲ್ಲಿ ನಿರ್ಮಿಸಲು ಉದ್ದೇಶಿಸಿರುವ ಸಮುದಾಯ ಆಸ್ಪತ್ರೆಯ ಸ್ಥಳವನ್ನು ಆರೋಗ್ಯ ಸಚಿವರಾದ ದಿನೇಶ್ ಗುಂಡೂರಾವ್ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಅವರು, ಪರಿಶೀಲಿಸಿದರು. ನಂತರ ಸಚಿವರು ಹಾಗೂ ಶಾಸಕರು ಅಧಿಕಾರಿಗಳೊಂದಿಗೆ ಚರ್ಚಿಸಿದರು. ಶಾಸಕರು ಸಚಿವರಿಗೆ ಅಗತ್ಯ ಮಾಹಿತಿಗಳನ್ನು ಒದಗಿಸಿ, ಆಸ್ಪತ್ರೆಯ ಶೀಘ್ರ ಕಾಮಗಾರಿಗೆ ಅನುವು ಮಾಡಿಕೊಡುವಂತೆ ಮನವಿ ಮಾಡಿದರು. ಈ ಸಂದರ್ಭ ಜಿಲ್ಲಾ ಆರೋಗ್ಯ ಅಧಿಕಾರಿಗಳಾದ ಸತೀಶ್, ತಾಲೂಕು ಆರೋಗ್ಯ ಅಧಿಕಾರಿಗಳಾದ ಯತೀರಾಜ್, ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷರು ಕಾಳಿಮಾಡ ಪ್ರಶಾಂತ್, ತಹಶೀಲ್ದಾರ್ ಮೋಹನ್, ಕಂದಾಯ ಅಧಿಕಾರಿ ಸುದಿಂದ್ರ, ಡಿಸಿಸಿ ಸದಸ್ಯರು ಮುಕಟ್ಟೀರ ಸಂದೀಪ್, ತಾಲೂಕು ಬಗರ್ ಹುಕುಂ ಅಧ್ಯಕ್ಷರು ಲಾಲಾ ಅಪ್ಪಣ್ಣ, ಹಿರಿಯರಾದ ಮುಕಳೇರ ಕುಶಾಲಪ್ಪ, ಜಿಮಿ ಅಣ್ಣಯ್ಯ, ಎರ್ಮು ಹಾಜಿ, ಚೆಕ್ಕೇರ ವಾಸು ಕುಟ್ಟಪ್ಪ, ಸುಧೀರ್, ಪೆಮ್ಮಂಡ ಪೊನ್ನಪ್ಪ, ಅಜ್ಜಿಕುಟ್ಟಿರ ಗಿರೀಶ್, ಪ್ರಶಾಂತ್, ದಿಲ್ಲು, ಹುದಿಕೇರಿ ವಲಯ ಅಧ್ಯಕ್ಷರು ಸೂರಜ್, ಭವಿನ್ ಕುಶಾಲಪ್ಪ, ಸುಕು ಬೋಪಣ್ಣ, ಅಲೀರ ರಶೀದ್, ಪೆರುಮಲೆ ಗಣೇಶ್, ಹ್ಯಾರೀಶ್, ಸೂರಜ್ ಹೊಸೂರು, ಕುಂಡಚೀರ ಮಂಜು ದೇವಯ್ಯ, ಯುವ ಕಾಂಗ್ರೆಸ್ ಅಧ್ಯಕ್ಷರು ಪಟ್ಟಡ ರಕ್ಷಿತ್ ಚಂಗಪ್ಪ, ಶಬೀರ್, ವ್ಯದ್ಯರು, ಸಿಬ್ಬಂದಿಗಳು ಹಾಗೂ ಪ್ರಮುಖರು ಉಪಸ್ಥಿತರಿದ್ದರು.









