
ನಾಪೋಕ್ಲು ಸೆ.24 NEWS DESK : ಮೈಸೂರು ಕೊಡಗು ಗೌಡ ಕ್ಷೇಮಾಭಿವೃದ್ಧಿ ಸಂಘದ 11ನೇ ವಾರ್ಷಿಕ ಮಹಾಸಭೆ ಸಂಘದ ಸಭಾಂಗಣದಲ್ಲಿ ನಡೆಯಿತು. ಸಂಘದ ಅಧ್ಯಕ್ಷರಾದ ಪೊನ್ನಚ್ಚನ ಅಪ್ಪಯ್ಯ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಕೊಡಗು ಜಿಲ್ಲೆಯ ಬಹುತೇಕ ಗೌಡ ಜನಾಂಗದ ಕುಟುಂಬದವರು ಈ ಭಾಗದಲ್ಲಿ ನೆಲೆಸಿದ್ದಾರೆ. ಅವರು ಗೌಡ ಕ್ಷೇಮಾಭಿವೃದ್ಧಿ ಸಂಘ ಎರಡು ವರ್ಷಗಳಿಗೊಮ್ಮೆ ಆಡಳಿತ ಮಂಡಳಿಯ ಚುನಾವಣೆ ನಡೆಸಿ ನೂತನ ಮಂಡಳಿಯನ್ನು ರಚಿಸಲಾಗುತ್ತಿದೆ ಎಂದರು. ಸಂಘದಲ್ಲಿ ಕೊಡಗಿನ ಸಂಪ್ರದಾಯದ ಹಬ್ಬ ಆಚರಣೆ, ಕ್ರೀಡಾಕೂಟಗಳನ್ನು ಆಯೋಜಿಸಿಕೊಂಡು ಪರಸ್ಪರ ಸಹಬಾಳ್ವೆ ಹಾಗೂ ಸಮಾನತೆ, ಆರೋಗ್ಯಕರ ಚಟುವಟಿಕೆಯಿಂದ ಕೊಡಗು ಕ್ಷೇಮಾಭಿವೃದ್ಧಿ ಸಂಘ ಹೂಟಗಳ್ಳಿ ಕೊಡಗು ಮೈಸೂರು ಭಾಗದಲ್ಲಿ ಗುರುತಿಸಿಕೊಂಡಿದೆ ಎಂದು ಹೇಳಿದರು. ಮಹಾಸಭೆಯಲ್ಲಿ ನಡೆದ ನೂತನ ಆಡಳಿತ ಮಂಡಳಿಗೆ ಹಾಲಿ ಅಧ್ಯಕ್ಷರಾಗಿದ್ದ ಪೊನ್ನಚ್ಚನ ಅಪ್ಪಯ್ಯ ಹಾಗೂ ತಂಡದವರು ಅವಿರೋಧವಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಪೊನ್ನಚ್ಚನ ಅಪ್ಪಯ್ಯ, ಉಪಾಧ್ಯಕ್ಷ ಚೆರುಕನ ಲವ, ಗೌರವ ಕಾರ್ಯದರ್ಶಿ ಮುಕ್ಕಾಟಿ ಅರುಣ ಕುಮಾರ್, ಸಹಕಾರ್ಯದರ್ಶಿ ಹೊಸೋಕ್ಲು ಅಪ್ಪಯ್ಯ, ಖಚಾಂಚಿ ಎಡಿಕೇರಿ ಪೂಣಚ್ಚ ಆಯ್ಕೆಯಾಗಿದ್ದಾರೆ. ನಿರ್ದೇಶಕರಾಗಿ ಕರ್ಣಯ್ಯನ ನೀಲಾಕ್ಷಿ ಮೋಹನ್, ಚಿಕ್ಕೋಡಿ ಪುಷ್ಪ, ರೇಖಾ ರಮೇಶ್, ನೆಕ್ಕಿಲ ಮಾದವ, ಉದಿಯನ ಸುರೇಶ್, ಚೆರುಕನ ಕುಶ, ಚೀಯಪ್ಪನ ರಾಜೇಶ್, ಸೂರ್ತಲೆ ಹರೀಶ್, ಮುಕ್ಕಾಟಿ ತಿಲಕಾ ನಂದ, ಸಲಹಾ ಸೂಚಕರಾಗಿ ಸಂಘದ ಮಾಜಿ ಅಧ್ಯಕ್ಷರುಗಳಾದ ಚೆಟ್ಟಿಮಾಡ ಜನಾರ್ಧನ ಮತ್ತು ನಡುಮನೆ ಚಂಗಪ್ಪ ನವರನ್ನು ಆಯ್ಕೆಮಾಡಲಾಯಿತು. ಮುಂದಿನ ಎರಡು ವರ್ಷದ ಅವಧಿಗೆ ಈ ಆಡಳಿತ ಮಂಡಳಿ ಕಾರ್ಯ ನಿರ್ವಹಿಸಲಿದೆ ಎಂದು ಕಾರ್ಯದರ್ಶಿ ಮುಕ್ಕಾಟಿ ಅರುಣ ಅವರು ಸಭೆಯಲ್ಲಿ ಪ್ರಕಟಿಸಿದರು.
ವರದಿ : ದುಗ್ಗಳ ಸದಾನಂದ.









