
ಮಡಿಕೇರಿ ಸೆ.25 NEWS DESK : ಶ್ರೀ ಓಂಕಾರೇಶ್ವರ ದೇವಾಲಯದಲ್ಲಿ ನವರಾತ್ರಿ ಹಬ್ಬದ ಪ್ರಯುಕ್ತ ಸೆಪ್ಟೆಂಬರ್ 26 ರಂದು ಸಂಜೆ 6 ಗಂಟೆಯಿಂದ ಸಾರ್ವಜನಿಕ ಭಕ್ತಾಧಿಗಳಿಗೆ ದಸರಾ ವಿಶೇಷ ‘ದುರ್ಗಾ ದೀಪ ನಮಸ್ಕಾರ ಪೂಜೆ’ ಏರ್ಪಡಿಸಲಾಗಿದೆ. ನಂತರ ಪ್ರಸಾದ ವಿತರಣೆ ನಡೆಯಲಿದೆ. ಭಕ್ತಾದಿಗಳು ದೇವಾಲಯದಲ್ಲಿ ನಡೆಯಲಿರುವ ಪೂಜೆಯಲ್ಲಿ ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾಗುವಂತೆ ಕೋರಿದೆ. ಪೂಜೆಯನ್ನು ಮಾಡಿಸಲು ಇಚ್ಛಿಸುವ ಭಕ್ತಾದಿಗಳು ದೇವಾಲಯದ ಕೌಂಟರ್‍ನಲ್ಲಿ ವಿಚಾರಿಸಿ, ಪೂಜೆ ರಶೀದಿಯನ್ನು ಪಡೆಯಬಹುದು. ಹೆಚ್ಚಿನ ಮಾಹಿತಿಗೆ ಅಧ್ಯಕ್ಷರು(ಎ.ಸಿ.ಚುಮ್ಮಿ ದೇವಯ್ಯ) ಅವರ ದೂರವಾಣಿ ಸಂಖ್ಯೆ-9448899567 ನ್ನು ಸಂಪರ್ಕಿಸಬಹುದು ಎಂದು ಶ್ರೀ ಓಂಕಾರೇಶ್ವರ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ತಿಳಿಸಿದ್ದಾರೆ.








