
ಮಡಿಕೇರಿ NEWS DESK ಸೆ.26 : ರಾಜ್ಯ ಸರಕಾರ ನಡೆಸುತ್ತಿರುವ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಮತ್ತು ಜಾತಿಜನಗಣತಿಯ ಸಂದರ್ಭ ಕೊಡಗು ಜಿಲ್ಲೆಯಲ್ಲಿ ವಾಸವಿರುವ ಬಲಿಜ ಸಮಾಜದ ಸರ್ವ ಬಂಧುಗಳು ಜಾತಿಯ ಕಾಲಂನಲ್ಲಿ ‘ಬಲಿಜ’ ಎಂದು ನಮೂದಿಸುವಂತೆ ಶ್ರೀ ಯೋಗಿ ನಾರಾಯಣ ಕೊಡಗು ಬಲಿಜ ಸಮಾಜದ ಅಧ್ಯಕ್ಷ ಗಣೇಶ್ ನಾಯ್ಡು ಹಾಗೂ ಕಾರ್ಯದರ್ಶಿ ಸುಬ್ರಮಣಿ ಅವರು ಮನವಿ ಮಾಡಿದ್ದಾರೆ. ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು ಗಣತಿದಾರರು ಬಂದಾಗ ನಿಖರವಾದ ಮಾಹಿತಿಯನ್ನು ನೀಡಬೇಕು. ಜಾತಿಯ ಕಾಲಂನಲ್ಲಿ ‘ಬಲಿಜ’ ಎಂದು ನಮೂದಿಸುವುದರಿಂದ ಜಿಲ್ಲೆಯಲ್ಲಿರುವ ಬಲಿಜ ಸಮುದಾಯದವರ ಸಂಖ್ಯೆ ಎಷ್ಟು ಎಂಬ ಬಗ್ಗೆ ಸ್ಪಷ್ಟ ಮಾಹಿತಿ ದೊರೆಯಲಿದೆ. ಅಲ್ಲದೆ ಸರಕಾರದ ಸೌಲಭ್ಯಗಳನ್ನು ಪಡೆಯಲು ಸಹಕಾರಿಯಾಗುತ್ತದೆ ಎಂದು ತಿಳಿಸಿದ್ದಾರೆ. ಮುಂದೆ ನಡೆಯುವ ಕೇಂದ್ರ ಸರಕಾರದ ಜಾತಿಗಣತಿಯಲ್ಲೂ ಜಾತಿಯ ಕಾಲಂನಲ್ಲಿ ‘ಬಲಿಜ’ ಎಂದು ನಮೂದಿಸುವಂತೆ ಕೋರಿದ್ದಾರೆ.









