
ಮಡಿಕೇರಿ ಸೆ.27 NEWS DESK : ‘ವಿ’ ಫೈವ್ ಮಹಿಳಾ ಒಕ್ಕೂಟದಿಂದ ಅ.4 ರಂದು “ಬಾಳೆಲೆ ನಮ್ಮೆ” ಕಾರ್ಯಕ್ರಮ ನಡೆಯಲಿದೆ. ಬಾಳೆಲೆ ಕೊಡವ ಸಮಾಜದಲ್ಲಿ ಬೆಳಿಗ್ಗೆ 10ಗಂಟೆಗೆ ನಡೆಯಲಿರುವ ಕಾರ್ಯಕ್ರಮವನ್ನು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಶಾಸಕರಾದ ಎ.ಎಸ್.ಪೊನ್ನಣ್ಣ ಉದ್ಘಾಟಿಸಲಿದ್ದಾರೆ. ‘ವಿ ” ಪೖವ್ ಮಹಿಳಾ ಒಕ್ಕೂಟದಿಂದ ಗೃಹಿಣಿಯರು ಮನೆಯಲ್ಲಿ ತಯಾರಿಸಿದ ಉತ್ಪನ್ನಗಳ, ಬೆಳದ ಗಿಡಗಳ, ಗೃಹ ಉಪಯೋಗಿ ವಸ್ತುಗಳ ಕೃಷಿ ಉತ್ಫನ್ನಗಳ, ರೖತಾಪಿ ವರ್ಗಕ್ಕೆ ಬೇಕಾದ ಕೃಷಿ ಯಂತ್ರಗಳ ಪ್ರದರ್ಶನ ಮತ್ತು ಮಾರಾಟಕ್ಕೆ ವೇದಿಕೆ ಕಲ್ಪಿಸಲಾಗಿದ್ದು, ಜಿಲ್ಲೆಯ ವಿವಿಧ ಭಾಗಗಳಿಂದ ಮಾರಾಟ ಹಾಗೂ ಪ್ರದರ್ಶನಕ್ಕೆ ನೊಂದಣಿ ಮಾಡಿಕೊಂಡು ಭಾಗವಹಿಸುವವರಿಗೆ ಅಚ್ಚುಕಟ್ಟಾಗಿ ಸ್ಥಳಾವಕಾಶ ಮಾಡಿಕೊಡಲಾಗುವುದು. ಜಿಲ್ಲೆಯ ಮಹಿಳೆಯರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಮಹಿಳಾ ಒಕ್ಕೂಟದ ಸಂಚಾಲಕರಾದ ಮಲಚೀರ ದೃಷ್ಯ, ಸದಸ್ಯರುಗಳಾದ ಪೊರಂಗಡ ಅರ್ಚನ, ಮಾಪಂಗಡ ಪ್ರೀತ್ನಿ, ಅದೇಂಗಡ ಗ್ರೀಷ್ಮ, ಕೊದಂಡ ರಷ್ಮಿ ಮನವಿ ಮಾಡಿದ್ದಾರೆ. ಹೆಚ್ಚಿನ ಮಾಹಿತಿಗಾಗಿ 8971653900 ಸಂಪರ್ಕಿಸಬಹುದಾಗಿದೆ.








