
ಮಡಿಕೇರಿ ಸೆ.30 NEWS DESK : ಚೇರಂಬಾಣೆಯ ಶ್ರೀ ರಾಜರಾಜೇಶ್ವರಿ ಆಂಗ್ಲ ಮಾಧ್ಯಮ ಶಾಲೆಯ ಹತ್ತನೇ ತರಗತಿಯ ವಿದ್ಯಾರ್ಥಿನಿ ಗಾನವಿ ಎನ್.ಡಿ ಡಿಫರೆಂಟ್ ಟೈಪ್ ಆಫ್ ಡಿಸಾಸ್ಟರ್ ಎಲರ್ಟ್ ಎಂಬ ವಿಷಯದ ಮಾಡೆಲ್ ನ್ನು ತಯಾರಿಸಿ ರಾಜ್ಯಮಟ್ಟಕ್ಕೆ ಆಯ್ಕೆ ಆಗಿದ್ದಾರೆ. ವಿಜ್ಞಾನ ಮತ್ತು ಗಣಿತ ವಿಭಾಗ, ಶಾಲಾ ಶಿಕ್ಷಣ ಇಲಾಖೆ ವತಿಯಿಂದ ಜಿಲ್ಲಾ ಮಟ್ಟದ ಸುಸ್ಥಿರ ಭವಿಷ್ಯಕ್ಕಾಗಿ ವಿಜ್ಞಾನ ಮತ್ತು ತಂತ್ರಜ್ಞಾನ ಎಂಬ ವಿಷಯದಡಿ ನಡೆಸಿದ ನಡೆದ ಸ್ಪರ್ಧೆಯಲ್ಲಿ ಗಾನವಿ ಸ್ಪರ್ಧಿಸಿ ಕೊಡಗಿನಿಂದ ಆಯ್ಕೆಯಾದ ಏಕೈಕ ವಿದ್ಯಾರ್ಥಿನಿಯಾಗಿದ್ದಾಳೆ. ಅ.4 ರಂದು ಬೆಂಗಳೂರಿನಲ್ಲಿ ನಡೆಯುವ ಸ್ಪರ್ಧೆಯಲ್ಲಿ ಎನ್.ಡಿ.ಗಾನವಿ ಭಾಗವಹಿಸಲಿದ್ದಾಳೆ. ಇವಳು ಭಾಗಮಂಡಲ ನಿವಾಸಿ ನಿಡ್ಯಮಲೆ ದೇವಾನಂದ ಮತ್ತು ಪ್ರತಿಮಾ ದಂಪತಿಯ ಪುತ್ರಿ.
ವರದಿ : ದುಗ್ಗಳ ಸದಾನಂದ.









