ಚೆಟ್ಟಳ್ಳಿ ಅ.18 NEWS DESK : ಚೆಟ್ಟಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ಕಾವೇರಿ ತೀರ್ಥ ಪೂಜೆ ಹಾಗೂ ವಿತರಣೆ ನೆರವೇರಿತು. ಸಹಕಾರ ಸಂಘದ ಮುಂಭಾಗದಲ್ಲಿ ಪ್ರತಿಷ್ಠಾಪಿಸಿರುವ ಕಾವೇರಿ ಪ್ರತಿಮೆಗೆ ಅರ್ಚಕರಾದ ಯೋಗೇಶ್ ಭಟ್ ವಿಶೇಷ ಹೂವಿನ ಅಲಂಕಾರದೊಂದಿಗೆ ಪೂಜೆ ಸಲ್ಲಿಸಿ, ತೀಥ ವಿತರಿಸಿದರು. ಈ ಸಂದರ್ಭ ಸಂಘದ ಅಧ್ಯಕ್ಷ ಬಲ್ಲಾರಂಡ ಮಣಿಉತ್ತಪ್ಪ ಮಾತನಾಡಿ, ಕಳೆದ 17 ವರ್ಷಗಳಿಂದ ನಿರಂತರವಾಗಿ ಕೊಡಗಿನ ಕುಲದೇವಿ ಮಾತೆಯ ಪುಣ್ಯ ತೀರ್ಥೋದ್ಭವದಂದು ಪವಿತ್ರ ತೀರ್ಥವನ್ನು ತಂದು ವಿತರಿಸಲಾಗುತ್ತಿದೆ. ಕಾವೇರಿ ಮಾತೆಯು ಎಲ್ಲರಿಗೂ ಒಳಿತನ್ನು ಮಾಡಲೆಂದು ಪ್ರಾರ್ಥಿಸಿದರು. ಮಹಾಮಂಗಳಾರತಿಯ ನಂತರ ಪವಿತ್ರ ತೀರ್ಥ ಹಾಗೂ ಪ್ರಸಾದ ವಿತರಿಸಲಾಯಿತು. ಸಹಕಾರ ಸಂಘದ ನಿರ್ದೇಶಕರು, ಸದಸ್ಯರು, ಸಿಬಂದ್ದಿ ವರ್ಗ ಹಾಜರಿದ್ದರು.











