ಮೂರ್ನಾಡು.ಅ.18 NEWS DESK : ಹಾಕತ್ತೂರು ತೊಂಬತ್ತು ಮನೆಯ ತ್ರಿನೇತ್ರ ಯುವಕ ಸಂಘದ ವತಿಯಿಂದ ಗ್ರಾಮೀಣ ಕ್ರೀಡಾಕೂಟ ನಡೆಯಿತು. ತೊಂಬತ್ತು ಮನೆ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆದ ಕ್ರೀಡಾಕೂಟದಲ್ಲಿ ಹಗ್ಗ ಜಗ್ಗಾಟ, ಶಾಲಾ ಮಕ್ಕಳ ರಸ್ತೆ ಓಟ, ಸಾರ್ವಜನಿಕ ಹೋಟೆಲ್ ಸ್ಪರ್ಧೆ, ಮಹಿಳಾ ವಿಭಾಗದ ಓಟ, ಹಗ್ಗಜಗ್ಗಾಟ ಮೊದಲಾದ ಸ್ಪರ್ಧೆ ನಡೆಯಿತು. ನಂತರ ನಡೆದ ಬಹುಮಾನ ವಿತರಣಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯುವಕ ಸಂಘದ ಅಧ್ಯಕ್ಷರಾದ ಸುಕುಮಾರ್ ವಹಿಸಿದ್ದರು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಸಂಘದ ಹಿರಿಯ ಸಲಹೆಗಾರರದ ಎ.ಕೆ.ಕಾರ್ಯಪ್ಪ, ಸಂಘದ ಸ್ಥಾಪಕ ಅಧ್ಯಕ್ಷರಾದ ಪಿ.ಇ.ದಿವಾಕರ, ದಾನಿಗಳಾದ ಚಂದ್ರವತಿ, ಪ್ರಸಾದ್ ಪೂಜಾರಿ, ಉಳುವರನ ಅನಿಲ್, ದೇರೆಜೆ ದೇವರಾಜ್, ಸಂಘದ ಮಾಜಿ ಅಧ್ಯಕ್ಷರಾದ ಟಿ.ಕೆ.ಸಂತೋಷ್, ಹಾಕತ್ತೂರು ಜಮಾಾಯತ್ ಮಾಜಿ ಅಧ್ಯಕ್ಷ ಖಾಸಿಂ, ರಾಜರಾಜೇಶ್ವರಿ ದೇವಾಲಯ ಸಮಿತಿ ಅಧ್ಯಕ್ಷರಾದ ಪ್ರವೀಣ್, ಗಾಯತ್ರಿ ಜನಾರ್ಧನ್, ಹಿರಿಯರಾದ ಮೇಚಿರ ನಾಣಯ್ಯ ಹಾಜರಿದ್ದರು.











