ಮಡಿಕೇರಿ ಅ.18 NEWS DESK : ಕಾವೇರಿ ತೀರ್ಥೋದ್ಭವ ಹಿನ್ನೆಲೆ ವಿರಾಜಪೇಟೆಯಿಂದ ತಲಕಾವೇರಿವರೆಗೆ ಆರು ಯುವಕರು 5ನೇ ವರ್ಷದ ಪಾದಯಾತ್ರೆ ಮಾಡಿದರು. ಕಾವೇರಿ ಮಾತೆಯ ಭಕ್ತಾದಿಗಳಾಗಿರುವ ಚೆಟ್ಟೋಳಿರ ಶರತ್ ಸೋಮಣ್ಣ , ಮುರುವಂಡ ಸಾವನ್ ಸೋಮಣ್ಣ, ಕಾಳಮಂಡ ರಾಬಿನ್ ಅಚ್ಚಮ್ಮ, ಚೈಯ್ಯಂಡ ಕೀರ್ತನ್ ಅಯ್ಯಪ್ಪ, ಪೊನ್ನೋಳತಂಡ ಶರಣು, ಮುರುವಂಡ ಜಗತ್ ಮಾದಯ್ಯ, ಪೊರ್ಕೋಂಡ ಶಾನ್ ನಾಣಯ್ಯ , ಮುರುವಂಡ ಸ್ಪೂರ್ತಿ ಸೀತಮ್ಮ, ಪೊರ್ಕೋಂಡ ರಿಯಾನ್ ಪೆಮ್ಮಯ್ಯ, ಮಾಳೇಟಿರ ಶ್ರೀಜನ್ ಗಣಪತಿ, ಮುದ್ದಿಯಡ ಕರಣ್ ಕಾವೇರಪ್ಪ ವಿರಾಜಪೇಟೆಯಿಂದ ಸುಮಾರು 58 ಕಿಮೀ ಪಾದಯಾತ್ರೆ ಕೈಗೊಂಡಿದ್ದರು.ಮುರುವಂಡ ಸ್ಪೂರ್ತಿ ಸೀತಮ್ಮ 2ನೇ ಬಾರಿಗೆ ಪಾದಯಾತ್ರೆಯಲ್ಲಿ ಪಾಲ್ಗೊಂಡು ತಾಯಿ ಕಾವೇರಿಯ ಆಶೀರ್ವಾದ ಪಡೆದರು. ವಿರಾಜಪೇಟೆ , ಕದನೂರು , ಕಡಂಗ , ನಾಪೋಕ್ಲು, ಬಲ್ಲಮಾವಟಿ, ಅಯ್ಯಂಗೇರಿ ಮೂಲಕ ಭಾಗಮಂಡಲಕ್ಕೆ ಸಂಜೆತಲುಪಿದ ಯುವಕರು, ಗುರುವಾರ ಭಾಗಮಂಡಲದಿಂದ ಎಲ್ಲರೊಂದಿಗೆ ಪಾದಯಾತ್ರೆ ಮುಂದುವರಿಸಿ ತೀರ್ಥೋದ್ಭವ ಮುನ್ನ ತಲಕಾವೇರಿಗೆ ತಲುಪಿದರು. ಕಾವೇರಿಯ ಪವಿತ್ರ ತೀರ್ಥವನ್ನು ಪಡೆದು ಹಲವೆಡೆ ತೀರ್ಥ ಪ್ರಸಾದವನ್ನು ವಿತರಿಸಿದರು.











