ಪತ್ತನಂತಿಟ್ಟ ಅ.22 NEWS DESK : ಕೇರಳ ಪ್ರವಾಸದಲ್ಲಿರುವ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಶಬರಿಮಲೆಗೆ ಭೇಟಿ ನೀಡಿ, ಅಯ್ಯಪ್ಪ ಸ್ವಾಮಿಯ ದರ್ಶನ ಪಡೆದಿದ್ದಾರೆ. ದೀಪಾವಳಿ ಬಲಿಪಾಡ್ಯಮಿ ದಿನ ಸನ್ನಿಧಾನಂನಲ್ಲಿ ಅಯ್ಯಪ್ಪ ದೇವರಿಗೆ ಪ್ರಾರ್ಥನೆ ಸಲ್ಲಿಸಿದರು. ಅವರು ಪಂಪಾದಿಂದ ಇರುಮುಡಿಯನ್ನು ಹೊತ್ತುಕೊಂಡು ಪತಿನೆಟ್ಟಂ ಪಾಡಿಯನ್ನು ಹತ್ತಿ ಗರ್ಭಗುಡಿಯ ಬಳಿ ತಲುಪಿದರು. ಕೇರಳ ದೇವಸ್ವಂಗಳ ಸಚಿವ ವಿಎನ್ ವಾಸವನ್ ಭೇಟಿಯ ಸಮಯದಲ್ಲಿ ಅವರೊಂದಿಗೆ ಜೊತೆಗಿದ್ದರು. ಶಬರಿಮಲೆಗೆ ಭೇಟಿ ನೀಡಿದ ಮೊದಲ ಹಾಲಿ ರಾಷ್ಟ್ರಪತಿ ಎಂಬ ಹೆಗ್ಗಳಿಕೆ ದ್ರೌಪದಿ ಮುರ್ಮು ಅವರು ಪಾತ್ರರಾಗಿದ್ದಾರೆ.











