
ಮಡಿಕೇರಿ ಅ.25 NEWS DESK : ಕರ್ನಾಟಕ ರಾಜ್ಯ ಸರಕಾರದ ಎಸ್.ಎಫ್.ಸಿ ಅನುದಾನದಲ್ಲಿ ವಿರಾಜಪೇಟೆ ಪುರಸಭಾ ವ್ಯಾಪ್ತಿಯ ವಿವಿಧ ಅಭಿವೃದ್ಧಿ ಕಾಮಗಾರಿಗಳ ಆಯ್ದ ವರ್ಡ್ ಗಳಿಗೆ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕರಾದ ಎ.ಎಸ್.ಪೊನ್ನಣ್ಣ ಅವರ ವಿಶೇಷ ಮುತುವರ್ಜಿಯಿಂದ ಮಂಜೂರಾದ ರೂ.20 ಕೋಟಿಗಳ ವಿಶೇಷ ಅನುದಾನಗಳ ಕಾಮಗಾರಿಗಳಿಗೆ ಚಾಲನೆ ದೊರೆಯಿತು. ವಿರಾಜಪೇಟೆ ಪುರಸಭಾ ವ್ಯಾಪ್ತಿಯ ಕಲ್ಲು ಬಾಣೆ, ತಿಮ್ಮಯ್ಯ ಬಾಡವಣೆ, ಶಿವಕೇರಿ, ಬೋಯಿಕೇರಿ, ಗಾಂಧಿ ನಗರ, ಮಹಿಳಾ ಸಮಾಜ, ಸುಣ್ಣದ ಬೀದಿ, ನಿಸರ್ಗ ಬಾಡವಣೆ ಭಾಗದಲ್ಲಿ ಭೂಮಿ ಪೂಜೆ ನೆರವೇರಿಸಿದರು. ಈ ಸಂದರ್ಭ ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷರು ತಿತೀರ ಧರ್ಮಜ ಉತ್ತಪ್ಪ, ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷರು ಜಾನ್ಸನ್, ವಿರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಪಟ್ಟಡ ರಂಜಿ ಪೂಣಚ್ಚ, ನಗರ ಕಾಂಗ್ರೆಸ್ ಅಧ್ಯಕ್ಷರು ಮದಂಡ ತಿಮ್ಮಯ್ಯ, ಪುರಸಭೆ ಅಧ್ಯಕ್ಷೆ ದೇಚಮ್ಮ ಕಾಳಪ್ಪ, ಉಪಾಧ್ಯಕ್ಷೆ ಫಸಿಯಾ ತಬ್ಸುಂ, ಪುರಸಭೆ ಮುಖ್ಯಅಧಿಕಾರಿ ನಾಚಪ್ಪ, ಸ್ಥಾಯಿ ಸಮಿತಿಯ ಅಧ್ಯಕ್ಷರು ಜಲೀಲ್, ಪೂರ್ಣಿಮಾ, ಪುರಸಭೆ ಸದಸ್ಯರು ದಿನೇಶ್, ಮತೀನ್, ರಾಫಿ, ರಾಜೇಶ್, ಪೃಥ್ವಿನಾಥ್, ಅತಿಫ್ ಮನ್ನ, ರವಿ, ಮೋಹನ್,ನಿಸರ್ಗ, ರಜಿನಿಕಾಂತ್, ಬೆನ್ನಿ ಆಗಸ್ಟಿನ್, ಹಮೀದ್, ಜಗತ್, ಜಗದೀಶ್, ಸುಮಂತ್, ಅಯ್ಯಪ್ಪ, ಸಲಾಂ, ಜಾಫರ್, ಫಾತಿಮಾ, ರಾಜೇಶ್ ನಾಯರ್, ಶಶಿ, ಜೋಕಿಮ್, ನರೇಂದ್ರ ಕಾಮತ್, ಚೆಕು, ಕುಂಡಚ್ಚಿರ ಮಂಜು ದೇವಯ್ಯ, ಹರೀಶ್, ಮಂಜುನಾಥ್, ವಿರಾಜಪೇಟೆ ವಿಧಾನ ಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಅಧ್ಯಕ್ಷರು ಪಟ್ಟಡ ರಕ್ಷಿತ್ ಚಂಗಪ್ಪ, ಶಬೀರ್,ಬೋಪಯ್ಯ, ಸೂರಿ, ಕಾಳಮಾಡ ಬೇಬಿ, ಅಮುಣಿಚಂಡ ರವಿ, ಅಯೂಬ್, ರಾಕೇಶ್ ಚುಮ, ಸಚಿನ್, ಡಿಸಿಸಿ ಸದಸ್ಯರು ಸತೀಶ್, ಪಕ್ಷದ ಪ್ರಮುಖರು, ಸ್ಥಳೀಯರು ಉಪಸ್ಥಿತರಿದ್ದರು.









