
ವಿರಾಜಪೇಟೆ ಅ.28 NEWS DESK : ಮೈಸೂರಿನ ವಿ.ಯನ್.ಯೋಧ ಮಾರ್ಷಲ್ ಆಟ್ರ್ಸ್ ಅಕಾಡೆಮಿ ವತಿಯಿಂದ ಮೈಸೂರಿನ ಟೆರೆಷಿಯನ್ ಕಾಲೇಜಿನಲ್ಲಿ ನಡೆಸಲಾದ ಐದನೇ ರಾಷ್ಟ್ರೀಯ ಮುಕ್ತ ಕರಾಟೆ ಪಂದ್ಯಾಳಿಯಲ್ಲಿ ವಿರಾಜಪೇಟೆಯ ಕಾವೇರಿ ಶಾಲೆಯ 9ನೇ ತರಗತಿ ವಿದ್ಯಾರ್ಥಿನಿ ಮೋಕ್ಷಿತಾ ಜಿ.ಎಸ್.ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ಮೋಕ್ಷಿತಾ ಕುಮಿತೆ ವಿಭಾಗದಲ್ಲಿ ದ್ವಿತೀಯ ಮತ್ತು ಕತಾ ವಿಭಾಗದಲ್ಲಿ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ. ಗೋಜೋ ಕಾಯ್ ಕರಾಟೆ ಶಾಲೆಯಲ್ಲಿ ಕರಾಟೆ ತರಬೇತಿ ಪಡೆಯುತ್ತಿದ್ದು, ಕರಾಟೆ ಶಿಕ್ಷಕರಾದ ಸೆನ್‍ಸಾಯಿ ಎಂ.ಬಿ. ಚಂದ್ರನ್ ತರಬೇತಿ ನೀಡಿದ್ದಾರೆ. ಇವರು ವಿರಾಜಪೇಟೆಯ ದಿವ್ಯ ಹಾಗೂ ಶಶಿ ಕುಮಾರ್ ಅವರ ಪುತ್ರಿ.









